ಇಂಟರ್ನ್ಯಾಷನಲ್ ನಾರ್ಕೋಟಿಕ್ಸ್ ಕಂಟ್ರೋಲ್ ಬೋರ್ಡ್ (ಐಎನ್‌ಸಿಬಿ) 2007ರ ವರದಿಯ ಪ್ರಕಾರ, ಪ್ರಸಿದ್ಧ ವ್ಯಕ್ತಿಗಳು ಡ್ರಗ್ಸ್ನನ್ನು ತೆಗೆದುಕೊಳ್ಳುವುದರಿಂದ ಅಥವಾ ಇದರ ವ್ಯವಹಾರದಲ್ಲಿ ತೊಡಗುವುದರಿಂದ ಇದು, ಜನರ ಮಾನಸಿಕ, ನಡವಳಿಕೆ ಮೇಲೆ ಪರಿಣಾಮ ಬೀರಬಹುದು. ಸೆಲೆಬ್ರಿಟಿಗಳನ್ನು ತುಂಬಾ ಜನ ಅನುಸರಿಸುವುದರಿಂದ ಪರಿಣಾಮ ಬೀರುವ ಸಾಧ್ಯತೆ ಹೆಚ್ಚು. ಇನ್ನೂ ಕೆಲವು ಪ್ರಸಿದ್ಧ ವ್ಯಕ್ತಿಗಳು ಇದರ ವಿರುದ್ಧ ಹೋರಾಟ ಕೂಡ ನಡೆಸುತ್ತಿದ್ದಾರೆ. ಕಾನೂನುಬಾಹಿರವಾಗಿ ಡ್ರಗ್ಸ್ನನ್ನು ಬಳಸುತ್ತಿರುವುದರಿಂದ ವರ್ಷಕ್ಕೆ 750,000ಕ್ಕೂ ಹೆಚ್ಚು ಜನರ ಸಾವಿಗೆ ಕಾರಣವಾಗುತ್ತಿದೆ.
ಗ್ಲೋಬಲ್ ಬರ್ಡನ್ ಆಫ್ ಡಿಸೀಸ್ ಅಧ್ಯಯನದ ವರದಿಯ ಪ್ರಕಾರ, ಜಾಗತಿಕವಾಗಿ ಅಕ್ರಮವಾಗಿ ಡ್ರಗ್ಸ್ನನ್ನು ತೆಗೆದುಕೊಳ್ಳುತ್ತಿರುವುದರಿಂದ 2017 ರಲ್ಲಿ 750,000ಕ್ಕೂ ಹೆಚ್ಚು ಜನರ ಸಾವಿಗೆ ಕಾರಣವಾಗಿದೆ. ಇನ್ನು ನರಹತ್ಯೆಯಿಂದ ಸಾವನ್ನಪ್ಪಿದವರ ಸಂಖ್ಯೆ - 400,000. ಈ ಪೈಕಿ 22 ಸಾವಿರ ಸಾವುಗಳು ಭಾರತದಿಂದ ವರದಿಯಾಗಿವೆ.
ಅಕಾಲಿಕ ಸಾವಿಗೆ ಡ್ರಗ್ಸ್ ಬಳಕೆ ಕೂಡ ಒಂದು ಕಾರಣ:
ಕಾನೂನುಬಾಹಿರ ಡ್ರಗ್ಸ್ ಬಳಕೆಯು ಪ್ರತಿವರ್ಷ 585,000 ಅಕಾಲಿಕ ಮರಣಗಳಿಗೆ ಕಾರಣವಾಗಿದೆ. ಜೀವನ ಪರ್ಯಂತ ಹೆಚ್ಚು ಡ್ರಗ್ಸ್ನನ್ನು ತೆಗೆದುಕೊಂಡು ಮರಣ ಹೊಂದಿದ ಜನರ ಸಂಖ್ಯೆ ಶೇ.80ರಷ್ಟು ಇದೆ.
ಅಕ್ರಮ ಡ್ರಗ್ಸ್ ಬಳಕೆಯು ಆತ್ಮಹತ್ಯೆ, ಪಿತ್ತಜನಕಾಂಗದ ಕಾಯಿಲೆ, ಹೆಪಟೈಟಿಸ್, ಕ್ಯಾನ್ಸರ್ ಮತ್ತು ಎಚ್‌ಐವಿ ಸೇರಿದಂತೆ ಅನೇಕ ರೋಗಗಳ ಅಪಾಯವನ್ನು ಹೆಚ್ಚಿಸಿರುವುದರಿಂದ ಈ ಅಕಾಲಿಕ ಮರಣಗಳು ಸಂಭವಿಸುತ್ತವೆ. ಇದು ವಯಸ್ಸಿನಿಂದ ವಿಭಜಿಸಲ್ಪಟ್ಟಿದೆ - ಇದು ಸಾಪೇಕ್ಷ ದೃಷ್ಟಿಯಲ್ಲಿ ಹೆಚ್ಚು ಸ್ಪಷ್ಟವಾಗಿ ಗೋಚರಿಸುತ್ತದೆ. 2017 ರಲ್ಲಿ ಸತ್ತವರಲ್ಲಿ ಶೇ.42 ರಷ್ಟು 50 ವರ್ಷಕ್ಕಿಂತ ಕಡಿಮೆ ವಯಸ್ಸಿನವರು.
ಮಾದಕ ವ್ಯಸನಿಗಳಾಗಿದ್ದ 10 ಬಾಲಿವುಡ್ ಸೆಲೆಬ್ರಿಟಿಗಳು:
1.ಸಂಜಯ್ ದತ್ ಪ್ರಕರಣವು ಸಾರ್ವಜನಿಕರ ಗಮನಕ್ಕೆ ಬಂದಿರುವುದಿಲ್ಲ. ಮುನ್ನಾ ಭಾಯ್ ಖ್ಯಾತಿಯ ಸಂಜಯ್ ದತ್ 1982 ರಲ್ಲಿ ಡ್ರಗ್ಸ್ ಸೇವನೆ ಮಾಡಿದಕ್ಕಾಗಿ ಬಂಧವಾಗಿದ್ರು. ಬಳಿಕ ಇದರಿಂದ ಮುಕ್ತಿ ಹೊಂದಲು ಅವರ ತಂದೆಯ ಸಲಹೆಯ ಮೇರೆಗೆ ರಿಹ್ಯಾಬಿಲಿಟೇಷನ್ ಸೆಂಟರ್ ಯುಎಸ್ಗೆ ಹೋದರು. ಅಂದಿನಿಂದ, ಸಂಜಯ್ ಬದಲಾದರು. ಡ್ರಗ್ಸ್ ಸೇವನೆಯನ್ನು ಬಿಟ್ಟಿದ್ದಾರೆ ಎನ್ನಬಹುದು. ಅವರ ಚಟದ ಒಂದು ನೋಟವನ್ನು ಜೀವನಚರಿತ್ರೆಯಾದ ಸಂಜು ಚಿತ್ರದಲ್ಲಿಯೂ ಚಿತ್ರಿಸಲಾಗಿದೆ.
2. ಪೂಜಾ ಭಟ್ ಇವರು ಡ್ರಗ್ಸ್ ಮತ್ತು ಮದ್ಯದ ವಿರುದ್ಧ ಹೋರಾಡುತ್ತಿದ್ದಾರೆ. ಆದ್ರೆ ಅವರು ತಮ್ಮ 16ನೇ ವಯಸ್ಸಿನಲ್ಲಿ ಆಲ್ಕೊಹಾಲ್ ಚಟವನ್ನು ಹೊಂದಿರುವ ಬಗ್ಗೆ ಅವರೇ ಹೇಳಿಕೊಂಡಿದ್ದಾರೆ. ಬಳಿಕ ಇದನ್ನು ಬಿಟ್ಟು ಸಾಮಾಜಿಕ ಜಾಲತಾಣದಲ್ಲಿ ಈ ಕುರಿತು ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ.
3. ರಾಕ್‌ಸ್ಟಾರ್ ನಟ ರಣಬೀರ್ ಕಪೂರ್ ಅವರು ಪ್ರತಿಷ್ಠಿತ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ, ಅವರು ನಟನಾ ಶಾಲೆಯಲ್ಲಿದ್ದಾಗ ನಿಯಮಿತವಾಗಿ ವೀಡ್ ಮತ್ತು ಗಾಂಜಾ ತೆಗೆದುಕೊಳ್ಳುತ್ತಿರುವುದನ್ನು ಒಪ್ಪಿಕೊಂಡಿದ್ದಾರೆ ಎಂದು ವರದಿಯಾಗಿದೆ.
4. ನೇಪಾಳ ಮೂಲದ ಮನೀಷಾ ಕೊಯಿರಾಲಾ ಅವರು ಆಲ್ಕೋಹಾಲ್ ಮತ್ತು ಕೆಟ್ಟ ಸಂಬಂಧಗಳು ನಮ್ಮ ಜೀವನವನ್ನು ನಿಯಂತ್ರಣದಿಂದ ಹೊರಗುಳಿಯಲು ಹೇಗೆ ಕಾರಣವಾಗುತ್ತವೆ ಎಂಬುದರ ಬಗ್ಗೆ ಹೇಳಿದ್ದಾರೆ. ಅವರ ಹೊಸ ಪುಸ್ತಕ 'ಹೀಲ್ಡ್' ನಲ್ಲಿ ಮದ್ಯದ ಚಟಕ್ಕೆ ಒಳಗಾಗುವುದು ಸೇರಿದಂತೆ ಜೀವನದಲ್ಲಿ ಮಾಡಿದ ಕೆಟ್ಟ ಆಯ್ಕೆಗಳ ಬಗ್ಗೆ ಅವರು ತಿಳಿಸಿದ್ದಾರೆ.
5. ಪಂಜಾಬಿ ಗಾಯಕ ಯೋ ಯೋ ಹನಿ ಸಿಂಗ್ ಅವರು ಗ್ರಾಫಿಕ್ ಸಾಹಿತ್ಯ ಮತ್ತು ರಾಕ್‌ಸ್ಟಾರ್ ಜೀವನಶೈಲಿಗೆ ಹೆಸರುವಾಸಿಯಾಗಿದ್ದಾರೆ. ಅಲ್ಲದೇ ಅವರು ಮದ್ಯದ ಚಟಕ್ಕೂ ಹೆಸರುವಾಸಿಯಾಗಿದ್ದಾರೆ. ಅವರು ಇದರಿಂದ ಹೇಗಾದರೂ ಮಾಡಿ ಹೊರಬರಲು ಪ್ರಯತ್ನಿಸುತ್ತಿದ್ದಾರೆ. ಅವರ ಸ್ಥಿತಿಯ ಬಗ್ಗೆ ಹೇಳುವಾಗ "ನಾನು ಬೈಪೋಲಾರ್ ಮತ್ತು ಆಲ್ಕೊಹಾಲಿಕ್ ಎಂದು ಒಪ್ಪಿಕೊಳ್ಳುತ್ತೇನೆ" ಎಂದು ಹೇಳಿದ್ದಾರೆ.
6. ಫರ್ದೀನ್ ಖಾನ್ ಬಾಲಿವುಡ್‌ನಲ್ಲಿ ಯಶಸ್ಸಿನ ಹಾದಿಯಲ್ಲಿ ಹೋಗುತ್ತಿರುವಾಗ ಅವರು ಡ್ರಗ್ಸ್ ಚಟಕ್ಕೆ ಬಿದ್ದರು. 2001 ರಲ್ಲಿ ಮುಂಬೈ ಪೊಲೀಸರು ಮಾದಕವಸ್ತು ಹೊಂದಿದ್ದಕ್ಕಾಗಿ ಅವರನ್ನು ಬಂಧಿಸಿದ್ದರು. ಅಲ್ಲದೇ ಅವರ ಸುತ್ತಲೂ ದೊಡ್ಡ ವಿವಾದವಿತ್ತು. ನಂತರ ಅವರು ನಿರ್ವಿಶೀಕರಣ ಕೋರ್ಸ್‌ಗೆ ಒಳಗಾದರು. ಬಳಿಕ ನಟನಿಗೆ ವಿನಾಯಿತಿ ಜಾಮೀನು ನೀಡಲಾಯಿತು.
7. ದಿವಂಗತ ನಟಿ ಸ್ಮಿತಾ ಪಾಟೀಲ್ ಮತ್ತು ರಾಜ್ ಬಬ್ಬರ್ ಅವರ ಪುತ್ರ ಪ್ರತೀಕ್ ಬಬ್ಬರ್ 2008 ರಲ್ಲಿ ‘ಧೋಬಿ ಘಾತ್’ಚಿತ್ರದ ಮೂಲಕ ಸಿನಿಮಾ ಕ್ಷೇತ್ರಕ್ಕೆ ಚೊಚ್ಚಲ ಪ್ರವೇಶ ಮಾಡಿದರು. ನಂತರ ಅವರು ಡ್ರಗ್ಸ್ಗೆ ಬಲಿಯಾದರು.
8. ಪರ್ವೀನ್ ಬಾಬಿ ಅವರ ವೃತ್ತಿಜೀವನವು ವಿವಾದಗಳಿಂದ ಕೂಡಿತ್ತು ಮತ್ತು ಅವರ ಅಕಾಲಿಕ ನಿಧನದ ನಂತರವೂ ಅದು ಯಾವಾಗಲೂ ಬೆಳಕಿನಲ್ಲಿತ್ತು. ಮಹೇಶ್ ಭಟ್ರಿಂದ ಬೇರೆಯಾದ ಬಳಿಕ ಅವರು ಎಲ್ಎಸ್ಡಿಗೆ ವ್ಯಸನಿಯಾದರು ಎಂದು ಹೇಳಲಾಗುತ್ತದೆ.
9. ರಾಹುಲ್ ಮಹಾಜನ್, ಮಾಜಿ ಕೇಂದ್ರ ಸಚಿವ ಪ್ರಮೋದ್ ಮಹಾಜನ್ ಅವರ ಪುತ್ರ. ಇವರು ತಮ್ಮ ಹೆಸರನ್ನು ತಾವೇ ಹಾಳುಮಾಡಿಕೊಂಡರು. ಹೆಂಡತಿಯನ್ನು ಹೊಡೆಯುವುದರಿಂದ ಹಿಡಿದು, ಕೊಕೇನ್ನ ಮಿತಿಮೀರಿದ ಸೇವನೆಯಿಂದಾಗಿ ಅವರು ಎಲ್ಲವನ್ನು ಕಳೆದುಕೊಂಡರು.
10. 2016 ರ ಬಹು ಕೋಟಿ ಎಫೆಡ್ರೈನ್ ಡ್ರಗ್ ಬಸ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಮತಾ ಕುಲಕರ್ಣಿ ಆರೋಪಿಯಾಗಿದ್ದರು. ಇವರು ನ್ಯಾಯಾಲಯದಿಂದ ಪರಾರಿಯಾಗಿದ್ದಾರೆಂದು ಘೋಷಿಸಲಾಗಿದೆ ಮತ್ತು ಕೀನ್ಯಾದ ಮೊಂಬಾಸ್ಸಾದಲ್ಲಿ ಡ್ರಗ್ ಲಾರ್ಡ್ ಪತಿ ವಿಕ್ಕಿ ಗೋಸ್ವಾಮಿ ಅವರೊಂದಿಗೆ ಆಶ್ರಯ ಪಡೆದಿದ್ದಾರೆ ಎಂದು ಹೇಳಲಾಗ್ರಿದೆ.
ಭಾರತದಲ್ಲಿ ಡ್ರಗ್ಸ್ ಬಳಕೆ:
ಭಾರತದಲ್ಲಿ 2018ರಲ್ಲಿ, 2.3 ಕೋಟಿ ಜನರು ಒಪಿಯಾಡ್, ಹೇರಾಯಿನ್ (ಕಂದು ಸಕ್ಕರೆ, ಸ್ಮ್ಯಾಕ್) ಮತ್ತು ಫಾರ್ಮಾ ಒಪಿಯಾಡ್ನನ್ನು ಸೇವಿಸುತ್ತಾರೆ. 14 ವರ್ಷಗಳಲ್ಲಿ ಡ್ರಗ್ಸ್ ವ್ಯಸನಿಗಳ ಸಂಖ್ಯೆ 5 ಪಟ್ಟು ಹೆಚ್ಚಾಗಿದೆ. ಇದರಲ್ಲಿ ನಾಯಕಿಯರೇ ಹೆಚ್ಚು ವ್ಯಸನಿಗಳು.
2004 ರಲ್ಲಿ ಒಪಿಯಾಡ್ನನ್ನು 20 ಸಾವಿರ ಜನ ಬಳಕೆ ಮಾಡಿದ್ದಾರೆ. ಹೇರಾಯಿನ್ನನ್ನು 9000 ಜನ ಬಳಕೆ ಮಾಡಿದ್ದು, ಇದು ದ್ವಿಗುಣಗೊಂಡಿದೆ. 3.1 ಕೋಟಿ ಇರುವ ಭಾರತದಲ್ಲಿ ಶೇ.2.8ರಷ್ಟು ಜನಸಂಖ್ಯೆ, ಗಾಂಜಾವನ್ನು ಬಳಕೆ ಮಾಡುತ್ತಾರೆ (ಹ್ಯಾಶ್, ಅಫೀಮು ಮತ್ತು ಹಶಿಶ್). ಇದರಲ್ಲಿ ಶೇ.1.2ರಷ್ಟು (1.3 ಕೋಟಿ) ಜನರು ಅಕ್ರಮ ಹ್ಯಾಶ್ ಮತ್ತು ಹ್ಯಾಶಿಶ್ನನ್ನು ಸೇವಿಸಿದರೆ, ಉಳಿದವರು ಒಪಿಯಾಡ್ನನ್ನು ಸೇವಿಸುತ್ತಾರೆ. ನಮ್ಮ ದೇಶದಲ್ಲಿ ಒಪಿಯಾಡ್ ಬಳಕೆ ಕಾನೂನುಬದ್ಧವಾಗಿದೆ ಆದರೆ ಹ್ಯಾಶ್ ಮತ್ತು ಹ್ಯಾಶಿಶ್ ಕಾನೂನುಬಾಹಿರ.
ಭಾರತದಲ್ಲಿ ಹೆಚ್ಚು ಗಾಂಜಾ ಸೇವಿಸುವ ರಾಜ್ಯಗಳೆಂದರೇ ಉತ್ತರ ಪ್ರದೇಶ, ಪಂಜಾಬ್, ಸಿಕ್ಕಿಂ, ಛತ್ತೀಸ್‌ಗಢ ಮತ್ತು ದೆಹಲಿ. ಜಾಗತಿಕವಾಗಿ, ಭಾರತದಲ್ಲಿ ಅಕ್ರಮವಾಗಿ ಗಾಂಜಾ ಸೇವನೆ ತೀರಾ ಕಡಿಮೆ. ಮೂರನೇ ಒಂದು ಭಾಗಕ್ಕಿಂತ ಕಡಿಮೆ ಇದೆ. ಒಪಿಯಾಡ್ ಸೇವನೆಯು ಜಾಗತಿಕ ಸರಾಸರಿ ಬಳಕೆಯ ಮೂರು ಪಟ್ಟು ಹೆಚ್ಚು. ಏಮ್ಸ್ ಸಮೀಕ್ಷೆಯ ಪ್ರಕಾರ, 2018 ರಲ್ಲಿ 2.3 ಕೋಟಿ ಜನರು ಒಪಿಯಾಡ್ ಸೇವಿಸಿದ್ದಾರೆ.
ಡ್ರಗ್ಸ್ ಸೇವನೆಯಿಂದಾಗುವ ಅಡ್ಡ ಪರಿಣಾಮಗಳು:
ಮಾದಕವಸ್ತು ಬಳಕೆಯು ಆತಂಕ, ಖಿನ್ನತೆ ಮತ್ತು ಮನೋರೋಗದಂತಹ ಮಾನಸಿಕ ಆರೋಗ್ಯ ಸಮಸ್ಯೆಗಳನ್ನು ಹೆಚ್ಚಿಸುತ್ತದೆ.
ಮಾದಕ ವಸ್ತುಗಳ ಸೇವನೆ ಎಂದಿಗೂ ಆರೋಗ್ಯಕ್ಕೆ ಒಳ್ಳೆಯದಲ್ಲ. ತೆಗೆದುಕೊಂಡ ಕ್ಷಣದಲ್ಲಿ ಮಾತ್ರ ನಶೆ ಏರಿಸಿ ಸ್ವಲ್ಪ ಸಮಯದ ನಂತರ ಮತ್ತೊಮ್ಮೆ ನಿಮ್ಮನ್ನು ಸಹಜ ಸ್ಥಿತಿಗೆ ತರುತ್ತದೆ.
ಆದರೆ ನಿರಂತರವಾದ ಸೇವನೆಯಿಂದ ದಿನ ಕಳೆದಂತೆ ಕಣ್ಣು ಮಂಜಾಗುವುದು, ವಾಕರಿಕೆ, ವಾಂತಿ, ಮಾಂಸ - ಖಂಡಗಳ ಸೆಳೆತ, ಹೊಟ್ಟೆ ಹಸಿವು ಕಡಿಮೆ ಆಗುವುದು, ಜೀರ್ಣ ವ್ಯವಸ್ಥೆ ಕುಗ್ಗುವುದು, ಮಾನಸಿಕವಾಗಿ ಸ್ಥಿತಿ ಮಿತಿ ಕಳೆದುಕೊಳ್ಳುವುದು, ಇದ್ದಕ್ಕಿದ್ದಂತೆ ಹಲ್ಲು ಕಡಿಯುವುದು ಇತ್ಯಾದಿ ಸಮಸ್ಯೆಗಳು ಒಂದಾದ ಮೇಲೊಂದರಂತೆ ಕಾಡಲು ಪ್ರಾರಂಭವಾಗುತ್ತವೆ.
ಡ್ರಗ್ಸ್ ಸೇವನೆಯಿಂದ ನಮ್ಮ ನಡವಳಿಕೆ ಬದಲಾಗುತ್ತದೆ. ಇದು ನಮ್ಮನ್ನು ಕುಟುಂಬ ಮತ್ತು ಸ್ನೇಹಿತರೊಂದಿಗಿನ ಸಂಬಂಧಗಳ ಮೇಲೆ ಪರಿಣಾಮ ಬೀರಬಹುದು. ಮಾದಕ ವ್ಯಸನಿ, ಇತರ ಜನರಿಗೆ ಗಾಯ ಅಥವಾ ಹಲ್ಲೆ ಮಾಡುವ ಅಪಾಯವಿದೆ.
ಡ್ರಗ್ಸ್ ಸೇವನೆ ಎಚ್‌ಐವಿ ಮತ್ತು ಹೆಪಟೈಟಿಸ್‌ನಂತಹ ಗಂಭೀರ ಡೀಸೀಸ್‌ಗೆ ಕಾರಣವಾಗಬಹುದು.
M D M A ಡ್ರಗ್ಸ್ ಸೇವನೆಯ ನಂತರ ಅದರ ನೇರವಾದ ಪರಿಣಾಮ ನಮ್ಮ ಮೆದುಳಿನ ಹಾಗೂ ನರ ಮಂಡಲ ವ್ಯವಸ್ಥೆಯ ಮೇಲೆ ಆಗುತ್ತದೆ.
ತನ್ನ ಜೀವನದಲ್ಲಿ ಯಾವುದೇ ನಿರ್ಧಾರಗಳನ್ನು ಸ್ವಂತವಾಗಿ ತೆಗೆದುಕೊಳ್ಳಲು ಡ್ರಗ್ಸ್ ದಾಸ್ಯಕ್ಕೆ ಬಿದ್ದ ವ್ಯಕ್ತಿಗೆ ಸಾಧ್ಯ ಆಗುವುದಿಲ್ಲ. ಅದರ ಬದಲು ಕೋಪ - ತಾಪ, ಎಲ್ಲರ ಜೊತೆ ಮನಸ್ತಾಪ ಸಾಮಾನ್ಯವಾಗಿ ಡ್ರಗ್ಸ್ ಸೇವನೆ ಮಾಡುವ ವ್ಯಕ್ತಿಗಳಲ್ಲಿ ಕಂಡು ಬರುತ್ತವೆ.