ಮುಂಬೈ: ಜರ್ಮನಿ ಮೂಲದ ಕಾರು ಉತ್ಪಾದನಾ ಸಮೂಹ ಬಿಎಂಡಬ್ಲ್ಯು ಕಂಪನಿಯು ಭಾರತೀಯ ಮಾರುಕಟ್ಟೆಗೆ ನೂತನ ಆಲ್ ನ್ಯೂ- ಬಿಎಂಡಬ್ಲ್ಯು ಎಕ್ಸ್-5 ಶ್ರೇಣಿ ಕಾರುಗಳನ್ನು ಪರಿಚಯಿಸಿದೆ.
ಖ್ಯಾತ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಅವರು ಮುಂಬೈನಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಿಡುಗಡೆಗೊಳಿಸಿದರು. ಅನುಕೂಲಕರವಾದ ಒಳಾಂಗಣ ವಿನ್ಯಾಸ ಹಾಗೂ ಕಾರ್ಯಕ್ಷಮತೆಯ ಸ್ಪೋರ್ಟಿ ಆಂಬಿಯೆನ್ಸ್ ಹೊಂದಿದೆ.
ಆಲ್ ನ್ಯೂ ಬಿಎಂಡಬ್ಲ್ಯು ಎಕ್ಸ್5 ಡೀಸೆಲ್ ಹಾಗೂ ಪೆಟ್ರೋಲ್ ವೇರಿಯೆಂಟ್ನಲ್ಲಿ ಲಭ್ಯವಿದೆ. ಇಂದಿನ ಪೀಳಿಗೆಯ ಅಭಿರುಚಿಯನ್ನು ದೃಷ್ಟಿಯಲ್ಲಿ ಇರಿಸಿಕೊಂಡು ಮಾರುಕಟ್ಟೆಗೆ ಪರಿಚಯಿಸಲಾಗುತ್ತಿದೆ. ಐಷರಾಮಿ ಲಕ್ಷಣಗಳ ಒಳ- ಹೊರಾಂಗಣ ವಿನ್ಯಾಸ ಜೋಡಿಸಲಾಗಿದೆ ಎಂದು ಬಿಎಂಡಬ್ಲ್ಯು ಇಂಡಿಯಾ ಗ್ರೂಪ್ನ ಅಧ್ಯಕ್ಷ ಡಾ. ಹನ್ಸ್ ಕ್ರಿಶ್ಚಿಯನ್ ಹೇಳಿದರು.
ನಾಲ್ಕು ಶ್ರೇಣಿಯ ಬಿಎಂಡಬ್ಲ್ಯು ಕಾರುಗಳ ದರ (ಎಕ್ಸ್ಶೋ ರೂಂ)
BMW X5 xDrive30d ಸ್ಪೋರ್ಟ್ಸ್ ₹ 72, 92,000
BMW X5 xDrive30d ಎಕ್ಸ್ಲೈನ್ ₹ 82, 40,000
BMW X5 xDrive40i M ಸ್ಪೋರ್ಟ್ಸ್ ₹ 82, 40,000