ETV Bharat / bharat

ಖಾಸಗಿ ಆಸ್ಪತ್ರೆಗಳು ಅಧಿಕ ಶುಲ್ಕ ವಿಧಿಸಿದ್ರೆ ಮುಂಬೈ ಮಹಾನಗರ ಪಾಲಿಕೆಗೆ ದೂರು ನೀಡಬಹುದು - ಕೊರೊನಾ ವೈರಸ್​ ಚಿಕಿತ್ಸೆ

ದೂರುದಾರರು ಈವರೆಗೆ ಒಟ್ಟು 1,61,88,819 ರೂ. ಬಿಲ್​ ಪಾವತಿಯ ದೂರನ್ನು ನೀಡಿದ್ದರು. ಆದರೆ, ಈ ಬಿಲ್​ಗಳ ಲೆಕ್ಕಪರಿಶೋಧನೆಯ ನಂತರ ಈ ಮೊತ್ತವನ್ನು 1,38,46,705 ರೂಪಾಯಿಗಳಿಗೆ ಇಳಿಸಲಾಗಿದೆ ಎಂದು ಬಿಎಂಸಿ ತಿಳಿಸಿದೆ..

private-hospitals
ಖಾಸಗಿ ಆಸ್ಪತ್ರೆ
author img

By

Published : Jun 22, 2020, 8:10 PM IST

ಮುಂಬೈ : ಕೋವಿಡ್​-19 ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗಳಿಂದ ಹೆಚ್ಚಿನ ಶುಲ್ಕ ವಿಧಿಸಿದ್ರೆ ನಾಗರಿಕರು ತಮ್ಮ ಗಮನಕ್ಕೆ ತರಬೇಕೆಂದು ಮುಂಬೈ ಮಹಾನಗರ ಪಾಲಿಕೆ (ಬಿಎಂಸಿ) ಮನವಿ ಮಾಡಿದೆ.

ಕೊರೊನಾ ವೈರಸ್​ ಚಿಕಿತ್ಸೆಗಾಗಿ ಕೆಲ ಆಸ್ಪತ್ರೆಗಳು ಹೆಚ್ಚಿನ ಸೌಲಭ್ಯಗಳನ್ನು ನೀಡಿದ್ದಕ್ಕಾಗಿ ಹೆಚ್ಚಿನ ಶುಲ್ಕ ವಿಧಿಸಿದ ದೂರುಗಳನ್ನು ಸ್ವೀಕರಿಸಿದ ನಂತರ ನಾಗರಿಕ ಸಂಸ್ಥೆ ಕಳೆದ ತಿಂಗಳು ವಿವಿಧ ಖಾಸಗಿ ಆಸ್ಪತ್ರೆಗಳಿಗೆ ಲೆಕ್ಕಪರಿಶೋಧಕರನ್ನು ನೇಮಿಸಿತು. ಲೆಕ್ಕಪರಿಶೋಧಕರು 26 ಖಾಸಗಿ ಆಸ್ಪತ್ರೆಗಳಿಗೆ ಸಂಬಂಧಿಸಿದ 134 ದೂರುಗಳನ್ನು ಇತ್ಯರ್ಥಪಡಿಸಿದ್ದಾರೆ ಹಾಗೂ ಬಿಲ್ ಮೊತ್ತವನ್ನು ಒಟ್ಟಾರೆಯಾಗಿ 23.42 ಲಕ್ಷ ರೂ.ಗೆ ಇಳಿಸಿದ್ದಾರೆ ಎಂದು ಬಿಎಂಸಿ ಪ್ರಕಟಣೆಯಲ್ಲಿ ತಿಳಿಸಿದೆ.

ದೂರುದಾರರು ಈವರೆಗೆ ಒಟ್ಟು 1,61,88,819 ರೂ. ಬಿಲ್​ ಪಾವತಿಯ ದೂರನ್ನು ನೀಡಿದ್ದರು. ಆದರೆ, ಈ ಬಿಲ್​ಗಳ ಲೆಕ್ಕಪರಿಶೋಧನೆಯ ನಂತರ ಈ ಮೊತ್ತವನ್ನು 1,38,46,705 ರೂಪಾಯಿಗಳಿಗೆ ಇಳಿಸಲಾಗಿದೆ ಎಂದು ಬಿಎಂಸಿ ತಿಳಿಸಿದೆ.

ಖಾಸಗಿ ಆಸ್ಪತ್ರೆಗಳು ಸರ್ಕಾರದ ದರಕ್ಕೆ ಅನುಗುಣವಾಗಿ ಬಿಲ್ ವಿಧಿಸುವುದನ್ನು ಖಚಿತಪಡಿಸಿಕೊಳ್ಳಲು, ಪ್ರತಿ ಖಾಸಗಿ ಆಸ್ಪತ್ರೆಗೊಬ್ಬರು ಲೆಕ್ಕ ಪರಿಶೋಧಕರನ್ನು ನೇಮಕ ಮಾಡಿದೆ ಎಂದು ಬಿಎಂಸಿ ಹೇಳಿದೆ. ಜತೆಗೆ ದೂರುಗಳನ್ನು ನೋಂದಾಯಿಸಲು ಸಾರ್ವಜನಿಕರಿಗೆ ಕೆಲವು ಇ-ಮೇಲ್ ಐಡಿಗಳನ್ನು ಸಹ ನೀಡಿದೆ.

ಐದು ಐಎಎಸ್​ ಅಧಿಕಾರಿಗಳ ನೇಮಕ : ಕೋವಿಡ್​-19 ರೋಗಿಗಳ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗಳಲ್ಲಿ ಶೇ.80 ಹಾಸಿಗೆಗಳನ್ನು ಸರಿಯಾಗಿ ವಿತರಿಸಲು ರಾಜ್ಯ ಸರ್ಕಾರವು ಐದು ಐಎಎಸ್ ಅಧಿಕಾರಿಗಳನ್ನು ನೇಮಿಸಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ಖಾಸಗಿ ಆಸ್ಪತ್ರೆಗಳು ಮತ್ತು ನರ್ಸಿಂಗ್ ಹೋಂಗಳಲ್ಲಿನ ಶೇ.80ರಷ್ಟು ಹಾಸಿಗೆಗಳನ್ನು ಸ್ವಾಧೀನಪಡಿಸಿಕೊಳ್ಳಲು ಮತ್ತು ಕೋವಿಡ್​-19 ಚಿಕಿತ್ಸಾ ಶುಲ್ಕಗಳನ್ನು ತಡೆ ಹಾಕಲು ರಾಜ್ಯ ಸರ್ಕಾರ ಕಳೆದ ತಿಂಗಳು ಅಧಿಸೂಚನೆ ಹೊರಡಿಸಿತ್ತು.

ಅಧಿಸೂಚನೆಯ ಪ್ರಕಾರ ಜನರಲ್​ ಐಸೋಲೇಷನ್​ ವಾರ್ಡ್​ನಲ್ಲಿ ಸಿಒವಿಐಡಿ-19 ರೋಗಿಗೆ ದಿನಕ್ಕೆ 4,000 ರೂ.ಗಳು ಮೀರಬಾರದು, ತೀವ್ರ ನಿಗಾ ಘಟಕಕ್ಕೆ (ಐಸಿಯು) ಗರಿಷ್ಠ ಶುಲ್ಕವನ್ನು ದಿನಕ್ಕೆ 7,500 ರೂ. ಹಾಗೂ ವೆಂಟಿಲೇಟರ್‌ಗಳಿಗೆ ದಿನಕ್ಕೆ 9,000 ರೂ. ಗಳನ್ನು ನಿಗದಿಪಡಿಸಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.