ETV Bharat / bharat

ಕೋವಿಡ್​ :  ಮಧುಮೇಹಿಗಳು ಜಾಸ್ತಿ ಎಚ್ಚರ ವಹಿಸುವುದು ಅಗತ್ಯ!

"ಮಧುಮೇಹದಿಂದ ಬಳಲುತ್ತಿರುವ ವ್ಯಕ್ತಿಗಳಿಗೆ ಕೋವಿಡ್​ ಸೋಂಕು ತಗುಲಿದಲ್ಲಿ ಅಂಥವರ ಜೀವಕ್ಕೆ ಹೆಚ್ಚು ಅಪಾಯದ ಸಂಭವಿಸುವ ಹಾಗೂ ಇತರ ಆರೋಗ್ಯ ಸಮಸ್ಯೆಗಳು ಉಲ್ಬಣಿಸುವ ಸಾಧ್ಯತೆಗಳಿರುತ್ತವೆ. ಆದಾಗ್ಯೂ ರಕ್ತದಲ್ಲಿನ ಸಕ್ಕರೆ ಅಂಶವನ್ನು ನಿಯಂತ್ರಣದಲ್ಲಿಟ್ಟುಕೊಂಡ ವ್ಯಕ್ತಿಗಳಿಗೆ ಕೋವಿಡ್​ ಅಪಾಯ ಕಡಿಮೆ." ಎಂದು ವುಹಾನ್ ವಿವಿಯ ರೆನ್ಮಿನ್ ಆಸ್ಪತ್ರೆಯ ಹಿರಿಯ ಸಂಶೋಧಕ ಹೊಂಗ್ಲಿಯಾಂಗ್ ಲಿ ಹೇಳಿದ್ದಾರೆ.

Blood sugar control is key
Blood sugar control is key
author img

By

Published : May 2, 2020, 11:29 PM IST

ವಾಷಿಂಗ್ಟನ್​​ ಡಿಸಿ: ಟೈಪ್​ - 2 ಮಾದರಿಯ ಮಧುಮೇಹದ ವ್ಯಕ್ತಿಗಳಿಗೆ ಕೋವಿಡ್​ ಸೋಂಕು ತಗುಲಿದರೆ ಆರೋಗ್ಯಕ್ಕೆ ಅಪಾಯ ಹೆಚ್ಚು ಎಂದು ಹೊಸ ಅಧ್ಯಯನಗಳಿಂದ ತಿಳಿದು ಬಂದಿದೆ. ಆದರೂ ಟೈಪ್​-2 ಮಧುಮೇಹ ಇದ್ದು, ರಕ್ತದಲ್ಲಿನ ಸಕ್ಕರೆ ಅಂಶ ನಿಯಂತ್ರಣದಲ್ಲಿದ್ದರೆ ಅಂಥವರಿಗೆ ಕೋವಿಡ್​ನಿಂದ ಕೊಂಚ ಅಪಾಯ ಕಡಿಮೆ ಎಂದು ಕಂಡು ಬಂದಿದೆ.

"ಮಧುಮೇಹದಿಂದ ಬಳಲುತ್ತಿರುವ ವ್ಯಕ್ತಿಗಳಿಗೆ ಕೋವಿಡ್​ ಸೋಂಕು ತಗುಲಿದಲ್ಲಿ ಅಂಥವರ ಜೀವಕ್ಕೆ ಹೆಚ್ಚು ಅಪಾಯದ ಸಂಭವಿಸುವ ಹಾಗೂ ಇತರ ಆರೋಗ್ಯ ಸಮಸ್ಯೆಗಳು ಉಲ್ಬಣಿಸುವ ಸಾಧ್ಯತೆಗಳಿರುತ್ತವೆ. ಆದಾಗ್ಯೂ ರಕ್ತದಲ್ಲಿನ ಸಕ್ಕರೆ ಅಂಶವನ್ನು ನಿಯಂತ್ರಣದಲ್ಲಿಟ್ಟುಕೊಂಡ ವ್ಯಕ್ತಿಗಳಿಗೆ ಕೋವಿಡ್​ ಅಪಾಯ ಕಡಿಮೆ." ಎಂದು ವುಹಾನ್ ವಿವಿಯ ರೆನ್ಮಿನ್ ಆಸ್ಪತ್ರೆಯ ಹಿರಿಯ ಸಂಶೋಧಕ ಹೊಂಗ್ಲಿಯಾಂಗ್ ಲಿ ಹೇಳಿದ್ದಾರೆ.

ಹೊಂಗ್ಲಿಯಾಂಗ್​ ಲಿ ಅವರ ಸಂಶೋಧನಾ ವರದಿಯು ಸೆಲ್ ಮೆಟಬಾಲಿಸಂ ಎಂಬ ಜರ್ನಲ್​ನಲ್ಲಿ ಪ್ರಕಟವಾಗಿದೆ. ವಿಶ್ವದಲ್ಲಿ 500 ಮಿಲಿಯನ್​ಗೂ ಅಧಿಕ ಮಧುಮೇಹಿಗಳಿದ್ದು, ಇವರಿಗೆ ಕೋವಿಡ್​ ಸೋಂಕು ಬಂದಲ್ಲಿ ಇತರರಿಗಿಂತ ಅಪಾಯ ಹೆಚ್ಚು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಒಂದೊಮ್ಮೆ ಮಧುಮೇಹಿಗಳಿಗೆ ಕೋವಿಡ್​ ಬಂದಲ್ಲಿ, ಅಂಥವರು ನಿಗದಿತ ಚಿಕಿತ್ಸೆಯೊಂದಿಗೆ ತಕ್ಷಣ ರಕ್ತದಲ್ಲಿನ ಸಕ್ಕರೆ ಅಂಶವನ್ನು ನಿಯಂತ್ರಿಸಲು ಮುಂದಾಗಬೇಕು. ಈ ಕುರಿತು ಮತ್ತಷ್ಟು ಸಂಶೋಧನೆಗಳು ಮುಂದುವರೆದಿದ್ದು, ಮಾಹಿತಿಗಾಗಿ ಕಾಯಲಾಗುತ್ತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.