ಕೋಲ್ಕತಾ: ಬಿಜೆಪಿ ಯುವಮೋರ್ಚಾ ನೇತೃತ್ವದಲ್ಲಿ ಚಂದಾನಗರದಲ್ಲಿ ರ‍್ಯಾಲಿ ನಡೆಯುತ್ತಿದ್ದು, ಕಾರ್ಯಕರ್ತರು ಅವಹೇಳನಕಾರಿ ಘೋಷಣೆ ಕೂಗಿದ್ದಾರೆ. ಈ ಹಿನ್ನೆಲೆಯಲ್ಲಿ ಪೊಲೀಸರು ಅಧ್ಯಕ್ಷ ಸುರೇಶ್ ಶಾ ಮತ್ತು ಪಕ್ಷದ ಕಾರ್ಯಕರ್ತರನ್ನು ಬಂಧಿಸಿದ್ದಾರೆ.
"ದೇಶದ್ರೋಹಿಗಳನ್ನು ಶೂಟ್ ಮಾಡಿ" ಎಂದು ಘೋಷಣೆ ಕೂಗಿದ್ದಕ್ಕಾಗಿ ಅವರನ್ನು ಬಂಧಿಸಿ, ಚಂದನಗೋರ್ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ನಗರದ ರತಾಲಾ ಪ್ರದೇಶದಲ್ಲಿ ಸುವೆಂದು ಅಧಿಕಾರಿ ಮತ್ತು ಹೂಗ್ಲಿ ಸಂಸದ ಲಾಕೆಟ್ ಚಟರ್ಜಿ ರ‍್ಯಾಲಿಯಲ್ಲಿ ಈ ಘಟನೆ ನಡೆದಿದೆ. ಭಾರತದ ತ್ರಿವರ್ಣ ಧ್ವಜದೊಂದಿಗೆ ಪಕ್ಷದ ಧ್ವಜವನ್ನು ಹೊತ್ತುಕೊಂಡು ಕೆಲವು ಬಿಜೆಪಿ ಕಾರ್ಯಕರ್ತರು ಈ ಘೋಷಣೆ ಕೂಗಿದ್ದಾರೆ. ಈ ರೀತಿಯ ಘೋಷಣೆಗಳನ್ನು ಪಕ್ಷವು ಅನುಮೋದಿಸುವುದಿಲ್ಲ ಎಂದು ರಾಜ್ಯ ಬಿಜೆಪಿ ವಕ್ತಾರ ಸಮಿಕ್ ಭಟ್ಟಾಚಾರ್ಯ ಹೇಳಿದ್ದಾರೆ.
-
#WATCH | West Bengal: BJP supporters raise slogan -- 'desh ke gaddaron ko, goli maaro saalo ko" during a party rally in Chandannagar, Hooghly. pic.twitter.com/4P5zXv3kNs
— ANI (@ANI) January 20, 2021 " class="align-text-top noRightClick twitterSection" data="
">#WATCH | West Bengal: BJP supporters raise slogan -- 'desh ke gaddaron ko, goli maaro saalo ko" during a party rally in Chandannagar, Hooghly. pic.twitter.com/4P5zXv3kNs
— ANI (@ANI) January 20, 2021#WATCH | West Bengal: BJP supporters raise slogan -- 'desh ke gaddaron ko, goli maaro saalo ko" during a party rally in Chandannagar, Hooghly. pic.twitter.com/4P5zXv3kNs
— ANI (@ANI) January 20, 2021
ಮಂಗಳವಾರ, ದಕ್ಷಿಣ ಕೋಲ್ಕತ್ತಾದ ತೃಣಮೂಲ ಕಾಂಗ್ರೆಸ್ ರ‍್ಯಾಲಿಯಲ್ಲಿ ಪಕ್ಷದ ಕಾರ್ಯಕರ್ತರು ಬಂಗಾಳದ ದೇಶದ್ರೋಹಿಗಳನ್ನು "ಗುಂಡು ಹಾರಿಸಬೇಕೆಂದು" ಕರೆ ನೀಡಿದ್ದರು. ಆದರೆ ಇದೀಗ ಚಂದನಗರ ರ‍್ಯಾಲಿಯಲ್ಲಿ ಎದ್ದಿರುವ ಘೋಷಣೆ ಭಯೋತ್ಪಾದಕರನ್ನು ಗುರಿಯಾಗಿಟ್ಟುಕೊಂಡು ಕೂಗಲಾಗಿದೆ ಎಂದು ಬಿಜೆಪಿ ವಕ್ತಾರರು ಹೇಳಿದ್ದಾರೆ.
ಆದರೆ ತೃಣಮೂಲ ಕಾಂಗ್ರೆಸ್ಸಿಗರು ಪಕ್ಷವನ್ನು ತೊರೆದ ನಾಯಕರನ್ನು ಬಹಿರಂಗವಾಗಿ ದೇಶದ್ರೋಹಿ ಎಂದು ಹೇಳಿದ್ದಾರೆ.