ಅಮರಾವತಿ(ಆಂಧ್ರಪ್ರದೇಶ): ಉತ್ತರ ಪ್ರದೇಶದಲ್ಲಿ ಯೋಗಿ ಆಧಿತ್ಯನಾಥ್ ಸರ್ಕಾರಿ ಕಟ್ಟಡಗಳನ್ನ ಕೇಸರಿಕರಣ ಗೊಳಿಸಿದಂತೆ ಆಂಧ್ರಪ್ರದೇಶದಲ್ಲಿ ಸಿಎಂ ಜಗನ್ ಮೋಹನ್ ರೆಡ್ಡಿ ಕೂಡ ಗ್ರಾಮ ಪಂಚಾಯಿತಿಗಳ ಬಣ್ಣ ಬದಲಾಯಿಸುತ್ತಿದ್ದಾರೆ.
-
AP: BJP slams YSRCP for move to paint village secretariats in party's colours
— ANI Digital (@ani_digital) August 31, 2019 " class="align-text-top noRightClick twitterSection" data="
Read @ANI Story | https://t.co/1eowZ5Q0iA pic.twitter.com/9uuZsmoX4U
">AP: BJP slams YSRCP for move to paint village secretariats in party's colours
— ANI Digital (@ani_digital) August 31, 2019
Read @ANI Story | https://t.co/1eowZ5Q0iA pic.twitter.com/9uuZsmoX4UAP: BJP slams YSRCP for move to paint village secretariats in party's colours
— ANI Digital (@ani_digital) August 31, 2019
Read @ANI Story | https://t.co/1eowZ5Q0iA pic.twitter.com/9uuZsmoX4U
ವೈಎಸ್ಆರ್ ಕಾಂಗ್ರೆಸ್ ಪಕ್ಷದ ಧ್ವಜದ ಬಣ್ಣವನ್ನ ಗ್ರಾಮ ಪಂಚಾಯಿತಿ ಕಟ್ಟಡಗಳಿಗೆ ಪೇಂಟ್ ಮಾಡುವಂತೆ ವೈಎಸ್ಆರ್ ಸರ್ಕಾರ ಆದೇಶಿಸಿದ್ದು, ಈ ಕ್ರಮವನ್ನ ಬಿಜೆಪಿ ಖಂಡಿಸಿದೆ.
ಈ ಬಗ್ಗೆ ಮಾತನಾಡಿರುವ ಬಿಜೆಪಿ ವಕ್ತಾರ ಲಂಕಾ ದಿನಕರನ್, ವೈಎಸ್ಆರ್ ಪಕ್ಷ ತನ್ನ ಪಕ್ಷದ ಧ್ವಜದ ಬಣ್ಣವನ್ನ ಗ್ರಾಮ ಪಂಚಾಯಿತಿ ಕಟ್ಟಡಗಳಿ ಬಳಿಯುವಂತೆ ಆದೇಶಿಸಿದ್ದು ಸಾರ್ವಜನಿಕರ ಹಣವನ್ನ ದುರುಪಯೋಗ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.
ಅಕ್ಟೋಬರ್ 2ಕ್ಕೆ ಎಲ್ಲಾ ಗ್ರಾಮಗಳಲ್ಲಿ ಗ್ರಾಮ ಪಂಚಾಯಿತಿಯನ್ನ ಪ್ರಾರಂಭಿಸಲು ಮುಂದಾಗಿದ್ದು ಇವುಗಳು ಪಂಚಾಯಿತಿಗಳ ಆಧುನಿಕ ಆವೃತ್ತಿಯಾಗಿದ್ದು, ಇಲ್ಲಿ ಎಲ್ಲ ಸರ್ಕಾರಿ ಸೇವೆಗಳನ್ನು ಪಡೆಯಬಹುದು ಎಂದು ವೈಎಸ್ಆರ್ ಸರ್ಕಾರ ಹೇಳಿದೆ.
ಸಾರ್ವಜನಿಕರ ಹಣ ಸಾರ್ವಜನಿಕರ ಕಲ್ಯಾಣಕ್ಕೆ ಮಾತ್ರ ಬಳಕೆಯಾಗಬೇಕೆ ಹೊರತು, ಯಾವುದೋ ಪಕ್ಷದ ಸ್ವಂತ ಉದ್ದೇಶಕ್ಕಲ್ಲ. ಜಗನ್ ಅವರ ನಡೆಯನ್ನ ಬಿಜೆಪಿ ತೀವ್ರವಾಗಿ ಖಂಡಿಸುತ್ತದೆ ಎಂದು ಲಂಕಾ ದಿನಕರನ್ ಹೇಳಿದ್ದಾರೆ.