ETV Bharat / bharat

ಆಪರೇಷನ್ ಕಮಲದ ಭೀತಿ : ಗುಜರಾತ್​ ಕೈ ಶಾಸಕರು ರಾಜಸ್ಥಾನದ ರೆಸಾರ್ಟ್​ಗೆ ಶಿಫ್ಟ್? - ಗುಜರಾತ್​ನಲ್ಲಿ ಆಪರೇಶನ್ ಕಮಲದ ಭೀತಿ

ಶೀಘ್ರದಲ್ಲೇ ಗುಜರಾತ್​ನಿಂದ ರಾಜ್ಯಸಭೆ ನಾಲ್ಕು ಸ್ಥಾನಗಳಿಗೆ ಚುನಾವಣೆ ನಡೆಯಲಿರುವುದರಿಂದ ತಮ್ಮ ಶಾಸಕರಿಗೆ ಬಿಜೆಪಿ ಆಮಿಷವೊಡ್ಡಬಹುದು ಎಂಬ ಭಯದಿಂದ ಕಾಂಗ್ರೆಸ್​ ಶಾಸಕರನ್ನು ರಾಜಸ್ಥಾನದ ಸಿರೋಹಿಗೆ ಶಿಫ್ಟ್​ ಮಾಡಿದೆ ಎಂದು ಹೇಳಲಾಗುತ್ತಿದೆ.

BJP slams Cong for shifting Gujarat MLAs to Rajasthan
ಗುಜರಾತ್​ ಕೈ ಶಾಸಕರು ರಾಜಸ್ಥಾನದ ರೆಸಾರ್ಟ್​ಗೆ ಶಿಫ್ಟ್
author img

By

Published : Jun 9, 2020, 1:53 PM IST

ಜೈಪುರ : ರಾಜ್ಯಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಕಾಂಗ್ರೆಸ್​ ತನ್ನ ಶಾಸಕರನ್ನು ರಾಜಸ್ಥಾನದ ಸಿರೋಹಿಯ ರೆಸಾರ್ಟ್​ಗೆ ಕರೆದುಕೊಂಡು ಹೋಗಿದೆ ಎಂದು ಗುಜರಾತ್​ ಬಿಜೆಪಿ ನಾಯಕ ನಾರಾಯಣ್ ಪುರೋಹಿತ್ ಆರೋಪಿಸಿದ್ದಾರೆ.

ಈ ಬಗ್ಗೆ ಮಾತನಾಡಿದ ಅವರು, ಕೋವಿಡ್​ ಭೀತಿ ಮಧ್ಯೆಯೇ ಕಾಂಗ್ರೆಸ್​ ತನ್ನ 22 ಶಾಸಕರನ್ನು ಸಿರೋಹಿಯ ರೆಸಾರ್ಟ್​ಗೆ ಕರೆದುಕೊಂಡು ಹೋಗಿದೆ. ಹೀಗಾಗಿ ಅವರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ನಾವು ದೂರು ನೀಡಿದ್ದೇವೆ ಎಂದು ಹೇಳಿದ್ದಾರೆ.

ಶೀಘ್ರದಲ್ಲೇ ಗುಜರಾತ್​ನಿಂದ ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ಚುನಾವಣೆ ನಡೆಯಲಿರುವುದರಿಂದ ತಮ್ಮ ಶಾಸಕರಿಗೆ ಬಿಜೆಪಿ ಆಮಿಷವೊಡ್ಡಬಹುದು ಎಂಬ ಭಯದಿಂದ ಕಾಂಗ್ರೆಸ್​ ಶಾಸಕರನ್ನು ಸಿರೋಹಿಗೆ ಶಿಫ್ಟ್​ ಮಾಡಿದೆ ಎಂದು ಹೇಳಲಾಗುತ್ತಿದೆ. ಇತ್ತೀಚೆಗೆ ಮೂವರು ಕಾಂಗ್ರೆಸ್​ ಶಾಸಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

ಜೂನ್​ 19 ರಂದು ಆಂಧ್ರಪ್ರದೇಶ, ಗುಜರಾತ್ ಮತ್ತು ಕರ್ನಾಟಕದಿಂದ ತಲಾ ನಾಲ್ಕು, ಮಧ್ಯಪ್ರದೇಶ ಮತ್ತು ರಾಜಸ್ಥಾನದಿಂದ ತಲಾ ಮೂರು ಜಾರ್ಖಂಡ್​ನ ಎರಡು ಮಣಿಪುರ, ಮೇಘಾಲಯ, ಮಿಜೋರಾಂ ಮತ್ತು ಅರುಣಾಚಲ ಪ್ರದೇಶದ ತಲಾ ಒಂದು ಸೇರಿ ಒಟ್ಟು 24 ರಾಜ್ಯಸಭಾ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.