ಚಂಡೀಗಢ(ಹರಿಯಾಣ): ಬರೋಡಾ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ಒಲಿಂಪಿಕ್ ಪದಕ ವಿಜೇತ ಯೋಗೇಶ್ವರ ದತ್ ಅವರನ್ನು ಅಭ್ಯರ್ಥಿಯಾಗಿ ಕಣಕ್ಕಿಳಿಸುವುದಾಗಿ ಆಡಳಿತಾರೂಢ ಬಿಜೆಪಿ ಹೇಳಿದೆ.
ಕುಸ್ತಿಪಟು ಯೋಗೇಶ್ವರ ದತ್ ನವೆಂಬರ್ 3ರ ಉಪ ಚುನಾವಣೆಯಲ್ಲಿ ಸೋನಿಪತ್‌ನ ಬರೋಡಾ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಎಂದು ಪಕ್ಷದ ಹೇಳಿಕೆಯಲ್ಲಿ ತಿಳಿಸಲಾಗಿದೆ.
ಏಪ್ರಿಲ್‌ನಲ್ಲಿ ಕಾಂಗ್ರೆಸ್ ಶಾಸಕ ಶ್ರೀಕೃಷ್ಣ ಹೂಡ ಅವರ ನಿಧನದ ಕಾರಣ ಉಪ ಚುನಾವಣೆ ಅನಿವಾರ್ಯವಾಗಿದೆ. 2019ರ ವಿಧಾನಸಭಾ ಚುನಾವಣೆಯಲ್ಲಿ ಯೋಗೇಶ್ವರ ದತ್, ಹೂಡಾ ವಿರುದ್ಧ ಸೋಲು ಅನುಭವಿಸಿದ್ದರು.
ಬಿಜೆಪಿ ಮುಖಂಡರಾದ ಬಬಿತಾ ಫೋಗಾಟ್, ಸಾಕ್ಷಿ ಮಲಿಕ್, ಗೀತಾ ಫೋಗಟ್ ಮತ್ತು ಯೋಗೇಶ್ವರ್ ದತ್ ಸೇರಿದಂತೆ ಕೆಲವು ಕ್ರೀಡಾಪಟುಗಳು ದೆಹಲಿಯಲ್ಲಿ ಮುಖ್ಯಮಂತ್ರಿ ಖಟ್ಟರ್ ಅವರನ್ನು ಗುರುವಾರ ಭೇಟಿ ಮಾಡಿದ್ದರು.
ಪಕ್ಷದ ರಾಜ್ಯ ಘಟಕವು 25 ಹೆಸರುಗಳನ್ನು ಚರ್ಚಿಸಿದೆ ಎಂದು ಖಟ್ಟರ್ ಈ ಹಿಂದೆ ಹೇಳಿದ್ದರು. ಆದರೆ ನಾಲ್ವರನ್ನು ಶಾರ್ಟ್ ಲಿಸ್ಟ್ ಮಾಡಿ ಪಕ್ಷದ ಹೈಕಮಾಂಡ್‌ಗೆ ಕಳುಹಿಸಲಾಗಿತ್ತು ಎಂದು ಹೇಳಲಾಗುತ್ತಿತ್ತು. ಇದೀಗ ಯೋಗೀಶ್ವರ್ ದತ್ ಅವರ ಹೆಸರು ಫೈನಲ್ ಆಗಿದೆ.