ETV Bharat / bharat

"ಭಾಭಿಜಿ ಪಾಪಡ್" ಕೊರೊನಾಗೆ ಲಸಿಕೆ ಎಂದ ಬಿಜೆಪಿ ರಾಜಸ್ಥಾನ ಸಚಿವ

author img

By

Published : Jul 24, 2020, 11:30 PM IST

ಸಚಿವ ಅರ್ಜುನ್ ರಾಮ್ ಮೇಘವಾಲ್ ಅವರು “ಭಾಭಿಜಿ ಪಾಪಡ್” ಎಂಬ ಬ್ರಾಂಡ್ ಹಪ್ಪಳವನ್ನು ಬಿಡುಗಡೆಗೊಳಿಸಿದ್ದು, ಇದು ಕೋವಿಡ್​-19 ವಿರುದ್ಧ ಹೋರಾಡಲು ಅಗತ್ಯವಾದ ಪ್ರತಿಕಾಯಗಳನ್ನು ಅಭಿವೃದ್ಧಿಪಡಿಸುವಲ್ಲಿ ಸಹಾಯ ಮಾಡುತ್ತದೆ ಎಂದು ಹೇಳಿದ್ದಾರೆ.

ಅರ್ಜುನ್ ರಾಮ್ ಮೇಘವಾಲ್
ಅರ್ಜುನ್ ರಾಮ್ ಮೇಘವಾಲ್

ಹೈದರಾಬಾದ್: ದೇಶದಲ್ಲಿ ಕೊರೊನಾ ವೈರಸ್ ಸಮುದಾಯದಕ್ಕೆ ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ರಾಜಸ್ಥಾನದ ಬಿಜೆಪಿ ಸಚಿವ ಅರ್ಜುನ್ ರಾಮ್ ಮೇಘವಾಲ್ 'ಕ್ರಿಪ್ಸ್​​ ಡ್ರಗ್​​'(crisp drug)ನನ್ನು ಬಿಡುಗಡೆ ಗೊಳಿಸಿದ್ದಾರೆ. ಇದು ಭಾರತೀಯ ಮನೆಗಳಲ್ಲಿನ ಒಂದು ಭಕ್ಷ್ಯವಾದ ಹಪ್ಪಳ​ ಹೊರತುಪಡಿಸಿ ಬೇರೆನೂ ಅಲ್ಲ.

ಅರ್ಜುನ್ ರಾಮ್ ಮೇಘವಾಲ್

ಸಚಿವರ ಪ್ರಕಾರ, "ಭಾಭಿಜಿ ಪಾಪಡ್" ಎಂಬ ಪಾಪಡ್ ಬ್ರಾಂಡ್ ಕೊರೊನಾ ವೈರಸ್ ವಿರುದ್ಧ ಹೋರಾಡಲು ಅಗತ್ಯವಾದ ಪ್ರತಿಕಾಯಗಳನ್ನು ವೃದ್ಧಿಸುವಲ್ಲಿ ಸಹಾಯ ಮಾಡುತ್ತದೆ. ಸಚಿವರು ಈ ಒಂದು ಸಂಶೋಧನೆ ಎಲ್ಲರ ನಗೆಪಾಟಲಿಗೆ ಕಾರಣವಾಗಿದೆ. ಏಕೆಂದರೆ ಪಾಪಡ್​ ಒಂದು ಆಹಾರ ಪದಾರ್ಥವಾಗಿದೆ. ಇದು ಎಲ್ಲ ಕಡೆ ಲಭ್ಯವಿರುತ್ತದೆ ಮತ್ತು ಎಲ್ಲರಿಗೂ ಕೈಗೆಟುಕುತ್ತದೆ.

ಸ್ಥಳೀಯ ಪಾಪಡ್ ತಯಾರಕರು ಪ್ರತಿಕಾಯಗಳ ರಚನೆಗೆ ಸಹಾಯ ಮಾಡುವ ಉತ್ಪನ್ನದೊಂದಿಗೆ ಬಂದಿದ್ದಾರೆ. ಕೊರೊನಾ ವೈರಸ್ ವಿರುದ್ಧದ ಹೋರಾಟದಲ್ಲಿ ಹಪ್ಪಳ ತುಂಬಾ ಉಪಯುಕ್ತ ಎಂದು ಸಚಿವ ಮೇಘವಾಲ್​ ವಿಡಿಯೋ ಮಾಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಕೆಲವೇ ಗಂಟೆಗಳಲ್ಲಿ ವೈರಲ್​ ಆದ ಬಳಿಕ ಅದನ್ನು ಡಿಲೀಟ್​ ಮಾಡಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.