ETV Bharat / bharat

ಬಿಜೆಪಿ ಮಾಫಿಯಾಗಳ ಜೊತೆ ಸೇರಿ ಸರ್ಕಾರ ಅಸ್ಥಿರಗೊಳಿಸಲು ಪ್ರಯತ್ನಿಸುತ್ತಿದೆ: ಕಮಲ್​ನಾಥ್​​ ಆರೋಪ - ಸಿಎಂ ಕಮಲ್​ನಾಥ್​​

ಬಿಜೆಪಿ ಮಾಫಿಯಾಗಳ ಕೈಗೊಂಬೆಯಾಗಿದೆ. ಮಾಫಿಯಾಗಳ ಜೊತೆ ಸೇರಿ ನಮ್ಮ ಸರ್ಕಾರವನ್ನ ಉರುಳಿಸಲು ಪ್ರಯತ್ನಿಸುತ್ತಿದೆ. ಇದಕ್ಕೆ ನಾನು ಅವಕಾಶ ಕೊಡುವುದಿಲ್ಲ ಮಧ್ಯ ಪ್ರದೇಶ ಎಂಪಿ ಸಿಎಂ ಕಮಲ್​ನಾಥ್​​ ಹೇಳಿದ್ದಾರೆ.

Kamal Nath
ಕಮಲ್​ನಾಥ್
author img

By

Published : Mar 10, 2020, 4:30 AM IST

ಭೂಪಾಲ್​(ಮಧ್ಯಪ್ರದೇಶ): ಬಿಜೆಪಿಯವರು ಮಾಫಿಯಾ ಜೊತೆ ಸೇರಿಕೊಂಡು ಸರ್ಕಾರವನ್ನು ಅಸ್ಥಿರಗೊಳಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಮಧ್ಯ ಪ್ರದೇಶ ಮುಖ್ಯಮಂತ್ರಿ ಕಮಲ್​ನಾಥ್​​ ಆರೋಪಿಸಿದ್ದಾರೆ.

ಕಾಂಗ್ರೆಸ್ ಮುಖಂಡ ಜ್ಯೋತಿರಾಧಿತ್ಯ ಸಿಂಧಿಯಾ ಅವರೊಂದಿಗೆ 17 ಶಾಸಕರು ಬೆಂಗಳೂರಿನಲ್ಲಿ ಇದ್ದಾರೆ. ಈಗ ಒಟ್ಟು 20 ಮಂತ್ರಿಗಳು ಸಿಎಂ ಕಮಲ್​ನಾತ್​ ಅವರಿಗೆ ರಾಜೀನಾಮೆಯನ್ನು ನೀಡಿದ್ದು, ಕ್ಯಾಬಿನೆಟ್​ ವಿಸರ್ಜಿಸಬೇಕೆಂದು ಮನವಿ ಮಾಡಿಕೊಂಡಿದ್ದಾರೆ.

" ಕಳೆದ 15 ವರ್ಷಗಳ ಬಿಜೆಪಿ ಸರ್ಕಾರದ ಆಡಳಿತ ಮಾಫಿಯಾ ರೀತಿ ಇತ್ತು. ಹಾಗಾಗಿ ಇದರಿಂದ ಬೇಸತ್ತ ಜನತೆ ಬಿಜೆಪಿಯನ್ನು ತಿರಸ್ಕರಿಸಿ ಕಾಂಗ್ರೆಸ್​​ ಪಕ್ಷಕ್ಕೆ ಅಧಿಕಾರ ಕೊಟ್ಟಿದ್ದಾರೆ. ನಾನು ಕೂಡ ಈ ಮಾಫಿಯಾ ವಿರುದ್ಧ ಪ್ರಚಾರ ಮಾಡಿದ್ದೇನೆ" ಎಂದು ಕಮಲನಾಥ್​ ಹೇಳಿದ್ದಾರೆ.

ಕಳೆದ ವಾರ ಕಾಂಗ್ರೆಸ್​​ನ ಆರು ಶಾಸಕರನ್ನು ಬಿಜೆಪಿ ತೆಕ್ಕೆಯಿಂದ ಬಿಡಿಸಿದ್ದೇವೆ. ಅವರನ್ನು ಬಿಜೆಪಿ ಒತ್ತೆಯಾಳಾಗಿರಿಸಿಕೊಂಡಿತ್ತು. ಅಲ್ಲದೇ ಅವರಿಗೆ ಆಮಿಷ ಒಡ್ಡಿದೆ ಎಂದು ಕಾಂಗ್ರೆಸ್​ ಸಂಸದ ದಿಗ್ವಿಜಯ ಸಿಂಗ್​ ಆರೋಪಿಸಿದ್ದರು.

" ಮರಳು ಮಾಫಿಯಾದಿಂದ ಸರ್ಕಾರದ ಬೊಕ್ಕಸಕ್ಕೆ ಅಂದಾಜು 15,000 ಕೋಟಿ ರೂ. ನಷ್ಟವಾಗುತ್ತಿತ್ತು. ನಾನು ಅಧಿಕಾರ ವಹಿಸಿಕೊಂಡ ನಂತರ, ಮರಳು ಮಾಫಿಯಾಕ್ಕೆ ತೀವ್ರ ಹೊಡೆತ ಬಿದ್ದಿದೆ. ಇದರಿಂದಲೇ ತಿಳಿಯುತ್ತದೆ ಬಿಜೆಪಿ ಮಾಫಿಯಾಗಳ ಕೈಗೊಂಬೆಯಾಗಿತ್ತು" ಎಂದು ಕಮಲನಾಥ್​​ ಹೇಳಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.