ETV Bharat / bharat

ಮಹಾ ರಾಜಕೀಯದ ಸಿಹಿ, ಕಹಿ ಹಣ್ಣು: ಸೈದ್ಧಾಂತಿಕ ಮೌಲ್ಯಗಳ ಅಧಃಪತನದತ್ತ ರಾಜಕೀಯ ನಡೆ - karnatak politics latest news

ಭಾರತೀಯ ರಾಜಕೀಯ ತಂತ್ರ, ಕುತಂತ್ರಗಳಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚಾ ವಸ್ತುವಾಗಿದೆ. ಮಹಾರಾಷ್ಟ್ರ ಹಾಗೂ ಕರ್ನಾಟಕದ ರಾಜಕೀಯ ಬದಲಾವಣೆಗಳು ಇತಿಹಾಸದ ಸೈದ್ಧಾಂತಿಕ ನಿಷ್ಠೆಯನ್ನು ಗಾಳಿಗೆ ತೂರಿ, ಅಧಿಕಾರ ಒಂದೇ ರಾಜಕೀಯದ ಮಾನದಂಡ ಎಂಬಂತೆ ನಡೆದುಕೊಳ್ಳುತ್ತಿರುವುದು ವಿಪರ್ಯಾಸವೇ ಸರಿ

bitter sweet fruit of politics in maha
ಗೃಹ ಸಚಿವ ಅಮಿತ್​ ಶಾ, ಶರತ್ ಪವಾರ್
author img

By

Published : Nov 29, 2019, 2:57 PM IST

ಇತ್ತೀಚಿನ ದಿನಗಳಲ್ಲಿನ ಭಾರತೀಯ ರಾಜಕಾರಣದ ರಾಜಕೀಯ ಕಾರ್ಯತಂತ್ರಗಳು, ಕೌಟಿಲ್ಯ ಮತ್ತು ಚಾಣಕ್ಯರಂತಹ ಶ್ರೇಷ್ಠ ತಂತ್ರಜ್ಞರಿಗೆ ಕೂಡ ಹೊಸ ಪಾಠಗಳನ್ನು ಬೋಧಿಸುತ್ತಿವೆ. ಮಹಾರಾಷ್ಟ್ರದ ಇತ್ತೀಚಿನ ರಾಜಕೀಯ ಬೆಳವಣಿಗೆ ಈ ಹೇಳಿಕೆಗೊಂದು ಉತ್ತಮ ಉದಾಹರಣೆಯಾಗಬಹುದು!!

bitter sweet fruit of politics in maha
ಗೃಹ ಸಚಿವ ಅಮಿತ್​ ಶಾ, ಶರತ್ ಪವಾರ್

ಭಾರತದ ರಾಜಕೀಯ ಮತ್ತು ಕ್ರಿಕೆಟ್ ಸಾಕಷ್ಟು ಅನಿರೀಕ್ಷಿತವಾಗಿದೆ ಎಂಬ ನಿತಿನ್ ಗಡ್ಕರಿ ಅವರ ಹೇಳಿಕೆ, ನಾಲ್ಕು ದಿನಗಳಲ್ಲಿ ಪತನಗೊಂಡ ಮಹಾರಾಷ್ಟ್ರದ ಫಡ್ನವೀಸ್ ಸರ್ಕಾರದ ಸಂಪೂರ್ಣ ವೈಫಲ್ಯತೆಯನ್ನು ಸಾಬೀತುಪಡಿಸಿದೆ. ಮಹಾ ವಿಕಾಸ್ ಅಘಾಡಿ (ಎಂವಿಎ) ಅಥವಾ ಶಿವಸೇನೆ, ಎನ್‌ಸಿಪಿ ಮತ್ತು ಕಾಂಗ್ರೆಸ್‌ ಪಕ್ಷಗಳ ಮೈತ್ರಿ, ಉದ್ಧವ್ ಠಾಕ್ರೆಯನ್ನು ತಮ್ಮ ನಾಯಕರಾಗಿ ಆಯ್ಕೆ ಮಾಡಿತು ಮತ್ತು 2019ರ ನವೆಂಬರ್ 22ರ ರಾತ್ರಿ ಇದರ ಅಂತಿಮ ಸಭೆ ನೆರವೇರಿತು. ಆದರೆ, ರಾತ್ರಿ ಕಳೆದು ಬೆಳಗಾಗುವುದರೊಳಗೆ ಮಹಾರಾಷ್ಟ್ರದ ರಾಜಕೀಯ ಚಿತ್ರಣವೇ ಬದಲಾಗಿತ್ತು. ಬೆಳಗಿನ ಪತ್ರಿಕೆಗಳ ತಲೆಬರಹ ಓದಿ ಕೆಳಗಿಟ್ಟು ಸುದ್ದಿವಾಹಿನಿಗಳನ್ನು ಆನ್‌ ಮಾಡಿದರೆ ಸುದ್ದಿಯೇ ಬದಲಾಗಿತ್ತು! ಕುತೂಹಲದ ರಾಜಕಾರಣಕ್ಕಾಗಿ ಇಡೀ ರಾಷ್ಟ್ರವೇ ಟಿವಿ ಪೆಟ್ಟಿಗೆ ಮುಂದೆ ಕೂರುವಂತಹ ರೋಚಕ ಸ್ಥಿತಿಯೊಂದು ನಿರ್ಮಾಣವಾಯಿತು.

ಭಾರತೀಯ ಜನತಾ ಪಕ್ಷ (ಬಿಜೆಪಿ), ‘ಆಪರೇಷನ್ ಆಕರ್ಶ್’ ಹೆಸರಿನಲ್ಲಿ, ನ್ಯಾಷನಲ್‌ ಕಾಂಗ್ರೆಸ್ ಪಕ್ಷದ ವಿಧಾನಸಭೆಯ ಮುಖಂಡ ಅಜಿತ್ ಪವಾರ್ ಮತ್ತು ಅವರ 54 ಬೆಂಬಲಿಗರನ್ನು ತನ್ನತ್ತ ಸೆಳೆಯುವಲ್ಲಿ ಯಶಸ್ವಿಯಾಗಿತ್ತು. ಈ ಯಶಸ್ಸು ರಾಷ್ಟ್ರಪತಿ ಆಡಳಿತವನ್ನು ಹಿಂತೆಗೆದುಕೊಳ್ಳುವಂತೆ ಮಾಡಿತು ಮತ್ತು ಫಡ್ನವೀಸ್ ಅವರನ್ನು ಮುಖ್ಯಮಂತ್ರಿಯಾಗಿ ಮತ್ತು ಅಜಿತ್ ಪವಾರ್ ಅವರನ್ನು ಉಪಮುಖ್ಯಮಂತ್ರಿಯಾಗಿ ಘೋಷಿಸುವಂತೆ ಮಾಡಿತು. ಫಡ್ನವೀಸ್ ಅವರನ್ನು ಮತ್ತೆ ಮುಖ್ಯಮಂತ್ರಿಯಾಗಿಸಲು ಅಜಿತ್ ಪವಾರ್ ನೆರವಿಗೆ ಬಂದರೂ ಕೂಡ, ಎನ್‌ಸಿಪಿಯನ್ನು ನಿರೀಕ್ಷೆಯಂತೆ ವಿಭಜಿಸಲು ಸಾಧ್ಯವಾಗಲಿಲ್ಲ ಮತ್ತು ಅಜಿತ್ ಪವಾರ್‌ ತಂಡ ಬಹುಮತ ಸಾಬೀತುಪಡಿಸಲು ಅಗತ್ಯ ಬೆಂಬಲಿಗರನ್ನು ಪಡೆಯಲು ವಿಫಲವಾಯ್ತು.

ನ್ಯಾಯಮೂರ್ತಿ ಎನ್.ವಿ.ರಮಣ ನೇತೃತ್ವದ ತ್ರಿಸದಸ್ಯ ಪೀಠದ ತೀರ್ಪಿನ ಹಿನ್ನೆಲೆಯಲ್ಲಿ, ಅಜಿತ್ ಪವಾರ್ ಅವರ ರಾಜೀನಾಮೆ ಭಾರತೀಯ ಜನತಾ ಪಕ್ಷವನ್ನು (ಬಿಜೆಪಿ) ತತ್ತರಿಸುವಂತೆ ಮಾಡಿತು. ಇದರಿಂದಾಗಿ ಫಡ್ನವೀಸ್ ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಿದರು. ಸರ್ಕಾರ ರಚಿಸಿದ ಕೇವಲ 4 ದಿನಗಳಲ್ಲಿ, ಬಿಜೆಪಿ ಒಂದು ಹೆಜ್ಜೆ ಹಿಂದಕ್ಕೆ ಸರಿದು ಎನ್‌ಸಿಪಿ-ಕಾಂಗ್ರೆಸ್-ಶಿವಸೇನೆ ಮೈತ್ರಿಕೂಟವನ್ನು ಸರ್ಕಾರ ರಚಿಸಲು ಅವಕಾಶ ಮಾಡಿಕೊಟ್ಟಿತು. ಪ್ರಸ್ತುತ ಸನ್ನಿವೇಶದಲ್ಲಿ ತ್ರಿಪಕ್ಷೀಯ ಒಕ್ಕೂಟ ತನ್ನ ಪಕ್ಷದ ವೈಯಕ್ತಿಕ ಸಿದ್ಧಾಂತಗಳಿಂದಾಗಿ ಪರಸ್ಪರ ಘರ್ಷಣೆಗೆ ಅವಕಾಶ ನೀಡದೆ ನ್ಯಾಯಯುತ ಮತ್ತು ಸ್ಥಿರವಾದ ಸರ್ಕಾರವನ್ನು ಮುನ್ನಡೆಸಬಹುದೆ ಎಂಬುದನ್ನು ಕಾದು ನೋಡಬೇಕಿದೆ.

1996ರಲ್ಲಿ 13 ದಿನಗಳ ಕಾಲ ಅಧಿಕಾರದಲ್ಲಿದ್ದ ಅಂದಿನ ಪ್ರಧಾನಮಂತ್ರಿ ವಾಜಪೇಯಿ ಅವರು ವಿರೋಧ ಪಕ್ಷವನ್ನು ಒಡೆದು ರಚಿಸಿದ ಸರ್ಕಾರದಲ್ಲಿ ಪ್ರಧಾನಿ ಹುದ್ದೆಯನ್ನು ಅಲಂಕರಿಸಲು ಇಷ್ಟಪಡುವುದಿಲ್ಲ ಎಂದಿದ್ದರು. ಭಾರತೀಯ ರಾಜಕಾರಣಕ್ಕೆ ಅಂತಹ ಮೌಲ್ಯವಿತ್ತು. ಸಮಕಾಲೀನ ರಾಜಕಾರಣದಲ್ಲಿ ಆ ರೀತಿಯ ಸೈದ್ಧಾಂತಿಕ ಮೌಲ್ಯಗಳನ್ನು ಅಕ್ಷರಶಃ ಗಾಳಿಗೆ ತೂರಲಾಗಿದೆ. ಪ್ರಸ್ತುತ ಸನ್ನಿವೇಶದಲ್ಲಿ ಪಕ್ಷಗಳು ಮತ್ತು ಅದರ ಸದಸ್ಯರು ಅಧಿಕಾರವನ್ನು ಪಡೆಯಲು ಮತ್ತು ಅಧಿಕಾರದಲ್ಲಿರಲು ಯಾವುದೇ ಮಟ್ಟಕ್ಕೆ ಇಳಿಯಲು ಸಿದ್ಧರಾಗಿದ್ದಾರೆ ಎಂಬುದು ಇತ್ತೀಚಿನ ಬೆಳವಣಿಗೆಗಳಿಂದ ಸಾಬೀತಾಗುತ್ತಿದೆ!! 2019ರ ಅಕ್ಟೋಬರ್ 21ರಂದು ನಡೆದ ಮಹಾರಾಷ್ಟ್ರ ಚುನಾವಣೆಯಲ್ಲಿ ಶಿವಸೇನೆ 56 ಸ್ಥಾನಗಳನ್ನು ಗಳಿಸಿದರೆ, ಬಿಜೆಪಿ ಶೇ.25.7ರಷ್ಟು ಮತಗಳೊಂದಿಗೆ 105 ಸ್ಥಾನಗಳನ್ನು ಗಳಿಸಿತ್ತು. ಸಾಮಾನ್ಯ ಬಹುಮತಕ್ಕಿಂತ ಹೆಚ್ಚಿನ ಸ್ಥಾನಗಳನ್ನು ಗೆದ್ದ ಆಡಳಿತಾರೂಢ ಬಿಜೆಪಿಗೆ ಮಿತ್ರ ಪಕ್ಷ ಶಿವಸೇನೆಯ ಮುಖ್ಯಮಂತ್ರಿ ಸ್ಥಾನ ಸೇರಿದಂತೆ ಅನೇಕ ಬೇಡಿಕೆಗಳು ನುಂಗಲಾರದ ಬಿಸಿ ತುಪ್ಪದಂತಾಯ್ತು. ಇದು ರಾಜಕೀಯ ಅನಿಶ್ಚಿತತೆಗೂ ಕಾರಣವಾಗಿ, ಮುಖ್ಯಮಂತ್ರಿ ಹುದ್ದೆಗಾಗಿ ಕಾಂಗ್ರೆಸ್ ಬೆಂಬಲಿತ ಶಿವಸೇನೆ, ಎನ್‌ಸಿಪಿ ಜೊತೆಗೂ ಮೈತ್ರಿಗೆ ಮುಂದಾಯಿತು.

ಈ ಹಿಂದೆ ಎನ್‌ಸಿಪಿಯನ್ನು ಸಹಜವಾಗಿ ಭ್ರಷ್ಟ ಪಕ್ಷ ಎಂದು ಕರೆದಿದ್ದ ಭಾರತೀಯ ಜನತಾ ಪಕ್ಷ (ಬಿಜೆಪಿ) ಒಂದು ಸನ್ನಿವೇಶದಲ್ಲಿ ಅಜಿತ್ ಪವಾರ್ ಅವರೊಂದಿಗೆ ಸೇರಲು ಸಿದ್ಧವಾಗಿತ್ತು ಮತ್ತು ಅಜಿತ್ ಮತ್ತು ಅವರ ತಂಡವನ್ನು ಸಮಾಧಾನಪಡಿಸಲು ಉಪಮುಖ್ಯಮಂತ್ರಿ ಹುದ್ದೆಯನ್ನು ಸಹ ನೀಡಿತ್ತು. ಬಿಜೆಪಿ ಮೇಲೆ ಅನೈತಿಕ ಮೈತ್ರಿಗಳ ಆರೋಪವಿದೆ. ಅದೇ ತಂತ್ರಗಳು ಗೋವಾದಿಂದ ಮಣಿಪುರದವರೆಗೆ ಅನೇಕ ರಾಜ್ಯಗಳಲ್ಲಿ ಅಧಿಕಾರಕ್ಕೇರಲು ಕಾರಣವಾಗಿದೆ. ಇಂದು, ಅಜಿತ್ ಪವಾರ್ ಅವರ ರಾಜಕೀಯ ಆಟ "ನೀವು ಒಂದನ್ನು ಕೊಟ್ಟರೆ, ನಾನು ಮತ್ತೊಂದನ್ನು ಕೊಡುತ್ತೇನೆ" ಎಂಬ ಮಾತನ್ನು ಪ್ರತಿಬಿಂಬಿಸುತ್ತಿದೆ. ಸೈದ್ಧಾಂತಿಕ ನಾಯಕರು ಮತ್ತು ಪಕ್ಷನಿಷ್ಠ ಕಾರ್ಯಕರ್ತರಿಗೆ ಹೆಸರುವಾಸಿಯಾದ ಬಿಜೆಪಿ ಅಧಿಕಾರಕ್ಕಾಗಿ ಏಕೆ ಈ ರೀತಿ ಹೆಜ್ಜೆ ಇಡುತ್ತಿದೆ ಎಂಬುದು ತಿಳಿಯುತ್ತಿಲ್ಲ. ಈ ಹಿಂದಿನ ಕರ್ನಾಟಕ ರಾಜಕೀಯ ಮತ್ತು ಪ್ರಸ್ತುತದ ಮಹಾರಾಷ್ಟ್ರದ ಘಟನೆಗಳು ಬಿಜೆಪಿಯ ಅಚ್ಚರಿಯ ನಡೆಗೆ ಸ್ಪಷ್ಟ ನಿದರ್ಶನಗಳಾಗಿವೆ.

ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ ನಂತರ ಮೈತ್ರಿ ಸರ್ಕಾರದ ಕುರಿತು ಪ್ರತಿಕ್ರಿಯಿಸಿರುವ ಫಡ್ನವೀಸ್‌, ಎಂವಿಎ ಮೈತ್ರಿ 3 ಚಕ್ರಗಳ ಆಟೋದಲ್ಲಿನ ಪ್ರಯಾಣದಂತಿದೆ. ಅದರ ಪ್ರತಿಯೊಂದು ಚಕ್ರವೂ ತನ್ನದೇ ಆದ ದಿಕ್ಕಿನಲ್ಲಿ ಚಲಿಸುತ್ತಿದೆ ಎಂದು ವ್ಯಂಗ್ಯವಾಡಿದ್ದರು. ಅವರದ್ದೇ ಆದ ಮೂರ್ಖತನವು ಮೈತ್ರಿ ಸರ್ಕಾರವನ್ನು ಉರುಳಿಸುತ್ತದೆ ಎಂದು ಭವಿಷ್ಯ ನುಡಿದಿದ್ದಾರೆ.

ರಾಜ್ಯ ಆಡಳಿತದಲ್ಲಿ ರಾಜಕೀಯದಿಂದ ಸೃಷ್ಟಿಸಲ್ಪಟ್ಟ ಸೈದ್ಧಾಂತಿಕ ದಿವಾಳಿತನ ಮತ್ತು ಅನುಚಿತತೆಯನ್ನು ಮಹಾರಾಷ್ಟ್ರದ ಜನ ಸ್ವತಃ ಮನವರಿಕೆ ಮಾಡಿಕೊಳ್ಳುವವರೆಗೆ ಕಮಲ್‌ನಾಥ್‌ ಏಕೆ ಕಾಯುತ್ತಿದ್ದರು? ಬಹುಮತ ಮತ್ತು ಅಧಿಕಾರಕ್ಕಾಗಿ ನಾವು ಕೇವಲ ಕುದುರೆ ವ್ಯಾಪಾರ ಮಾಡುವವರಲ್ಲ ಎಂದು ಫಡ್ನವೀಸ್ ಹೇಳುತ್ತಿದ್ದರೆ, ಮೊದಲ ಬಾರಿಗೆ ಅಜಿತ್ ಪವಾರ್ ಅವರ ಪರವಾಗಿ ಅದನ್ನು ಮಾಡಲು ಯಾರು ಅವಕಾಶ ನೀಡಿದರು? ಸರ್ಕಾರ ಪತನಗೊಂಡರೆ ಮೈತ್ರಿ ಪಕ್ಷ ಸ್ಪರ್ಧಿಸಿದ ಸ್ಥಾನಗಳಲ್ಲಿ ಶೇ.70ರಷ್ಟು ಗೆಲುವು ಸಾರ್ವಜನಿಕರ ಬೆಂಬಲವನ್ನು ಹೊಂದಿತ್ತಾ ಎಂದು ಖಚಿತಪಡಿಸಿಕೊಳ್ಳಲು ಯಾವುದೇ ನಿರ್ದಿಷ್ಟ ತರ್ಕವಿಲ್ಲ.

ಇತ್ತೀಚಿನ ಕರ್ನಾಟಕ ಚುನಾವಣೆಯಲ್ಲಿ ಬಿಜೆಪಿ ಏಕೈಕ ಅತಿದೊಡ್ಡ ರಾಜಕೀಯ ಪಕ್ಷವಾಗಿ ಹೊರಹೊಮ್ಮಿದರೂ, ಸಾಮಾನ್ಯ ಬಹುಮತಕ್ಕೆ ಅಗತ್ಯ ಕೆಲವೇ ಸ್ಥಾನಗಳ ಕೊರತೆ ಎದುರಿಸಿತು ಮತ್ತು ರಾಜ್ಯಪಾಲರ ಆಹ್ವಾನದೊಂದಿಗೆ ಯಡಿಯೂರಪ್ಪ ನೇತೃತ್ವದಲ್ಲಿ ಸರ್ಕಾರ ರಚನೆಯಾಯಿತು. ಆದರೆ, ಬಳಿಕ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಬಹುಮತ ಸಾಬೀತುಪಡಿಸಬೇಕೆಂಬ ಎಂಬ ಸರ್ವೋಚ್ಚ ಆದೇಶದೊಂದಿಗೆ ಮರುಮಾತನಾಡದೆ ಮುಖ್ಯಮಂತ್ರಿ ಹುದ್ದೆ ತ್ಯಜಿಸುವ ಸ್ಥಿತಿ ನಿರ್ಮಾಣವಾಯಿತು. ಜೆಡಿಯು (ಎಸ್), ಕಾಂಗ್ರೆಸ್ ಒಕ್ಕೂಟವನ್ನು ಬಿಜೆಪಿ ಹೇಗೆ ಸ್ವೀಕರಿಸಲಿಲ್ಲ ಎಂಬುದು ಇತ್ತೀಚಿನ ಇತಿಹಾಸವಾಗಿದೆ!! ಹಿಂದಿನ ಕರ್ನಾಟಕದ ರಾಜಕೀಯ ಬೆಳವಣಿಗೆ ಬಿಜೆಪಿಗೆ ಕೇವಲ ಒಂದು ಪಾಠವಾಗಿದ್ದರೆ, ತ್ರಿಪಕ್ಷೀಯ ಮೈತ್ರಿಯನ್ನು ಮಹಾರಾಷ್ಟ್ರದ ಸಾರ್ವಜನಿಕರ ದೃಷ್ಟಿಯಲ್ಲಿ ತಮಾಷೆಯಾಗಿಸುವುದು ಬಿಜೆಪಿಗೆ ಸುಲಭ. ಆ ಮೂಲಕ ಅದು ತನ್ನ ಭಿನ್ನತೆಯನ್ನು ತೋರಿಸಬಹುದು.

Intro:Body:

ರಾಜಕೀಯದ ಕಹಿ,ಸಿಹಿ ಹಣ್ಣು!

ಇತ್ತೀಚಿನ ದಿನಗಳಲ್ಲಿನ ಭಾರತೀಯ ರಾಜಕಾರಣದ ರಾಜಕೀಯ ಕಾರ್ಯತಂತ್ರಗಳು, ಕೌಟಿಲ್ಯ ಮತ್ತು ಚಾಣಕ್ಯರಂತಹ ಶ್ರೇಷ್ಠ ತಂತ್ರಜ್ಞರಿಗೆ ಕೂಡ ಹೊಸ ಪಾಠಗಳನ್ನು ಬೋಧಿಸುತ್ತಿವೆ. ಮಹಾರಾಷ್ಟ್ರದ ಇತ್ತೀಚಿನ ರಾಜಕೀಯ ಬೆಳವಣಿಗೆ ಈ ಹೇಳಿಕೆಗೊಂದು ಉತ್ತಮ ಉದಾಹರಣೆಯಾಗಬಹುದು!!

ಭಾರತದ ರಾಜಕೀಯ ಮತ್ತು ಕ್ರಿಕೆಟ್ ಸಾಕಷ್ಟು ಅನಿರೀಕ್ಷಿತವಾಗಿದೆ ಎಂಬ ನಿತಿನ್ ಗಡ್ಕರಿ ಅವರ ಹೇಳಿಕೆ, ನಾಲ್ಕು ದಿನಗಳಲ್ಲಿ ಪತನಗೊಂಡ ಮಹಾರಾಷ್ಟ್ರದ ಫಡ್ನವೀಸ್ ಸರ್ಕಾರದ ಸಂಪೂರ್ಣ ವೈಫಲ್ಯತೆಯನ್ನು ಸಾಬೀತುಪಡಿಸಿದೆ. ಮಹಾ ವಿಕಾಸ್ ಅಘಾಡಿ (ಎಂವಿಎ) ಅಥವಾ ಶಿವಸೇನೆ, ಎನ್‌ಸಿಪಿ ಮತ್ತು ಕಾಂಗ್ರೆಸ್‌ ಪಕ್ಷಗಳ ಮೈತ್ರಿ, ಉದ್ಧವ್ ಠಾಕ್ರೆಯನ್ನು ತಮ್ಮ ನಾಯಕರಾಗಿ ಆಯ್ಕೆ ಮಾಡಿತು ಮತ್ತು 2019 ರ ನವೆಂಬರ್ 22 ರ ರಾತ್ರಿ ಇದರ ಅಂತಿಮ ಸಭೆ ನೆರವೇರಿತು. ಆದರೆ ರಾತ್ರಿ ಕಳೆದು ಬೆಳಗಾಗುವುದರೊಳಗೆ ಮಹಾರಾಷ್ಟ್ರದ ರಾಜಕೀಯ ಚಿತ್ರಣವೇ ಬದಲಾಗಿತ್ತು. ಬೆಳಗಿನ ಪತ್ರಿಕೆಗಳ ತಲೆಬರಹ ಓದಿ ಕೆಳಗಿಟ್ಟು ಸುದ್ದಿವಾಹಿನಿಗಳನ್ನು ಆನ್‌ ಮಾಡಿದರೆ ಸುದ್ದಿಯೇ ಬದಲಾಗಿತ್ತು! ಕುತೂಹಲದ ರಾಜಕಾರಣಕ್ಕಾಗಿ ಇಡೀ ರಾಷ್ಟ್ರವೇ ಟಿವಿ ಪೆಟ್ಟಿಗೆ ಮುಂದೆ ಕೂರುವಂತಹ ರೋಚಕ ಸ್ಥಿತಿಯೊಂದು ನಿರ್ಮಾಣವಾಯಿತು. ಭಾರತೀಯ ಜನತಾ ಪಕ್ಷ (ಬಿಜೆಪಿ), ‘ಆಪರೇಷನ್ ಆಕರ್ಶ್’ ಹೆಸರಿನಲ್ಲಿ, ನ್ಯಾಷನಲ್‌ ಕಾಂಗ್ರೆಸ್ ಪಕ್ಷದ ವಿಧಾನಸಭೆಯ ಮುಖಂಡ ಅಜಿತ್ ಪವಾರ್ ಮತ್ತು ಅವರ 54 ಬೆಂಬಲಿಗರನ್ನು ತನ್ನತ್ತ ಸೆಳೆಯುವಲ್ಲಿ ಯಶಸ್ವಿಯಾಗಿತ್ತು. ಈ ಯಶಸ್ಸು ರಾಷ್ಟ್ರಪತಿ ಆಡಳಿತವನ್ನು ಹಿಂತೆಗೆದುಕೊಳ್ಳುವಂತೆ ಮಾಡಿತು ಮತ್ತು ಫಡ್ನವೀಸ್ ಅವರನ್ನು ಮುಖ್ಯಮಂತ್ರಿಯಾಗಿ ಮತ್ತು ಅಜಿತ್ ಪವಾರ್ ಅವರನ್ನು ಉಪಮುಖ್ಯಮಂತ್ರಿಯಾಗಿ ಘೋಷಿಸುವಂತೆ ಮಾಡಿತು. ಫಡ್ನವೀಸ್ ಅವರನ್ನು ಮತ್ತೆ ಮುಖ್ಯಮಂತ್ರಿಯಾಗಿಸಲು ಅಜಿತ್ ಪವಾರ್ ನೆರವಿಗೆ ಬಂದರೂ ಕೂಡ,  ಎನ್‌ಸಿಪಿಯನ್ನು ನಿರೀಕ್ಷೆಯಂತೆ ವಿಭಜಿಸಲು ಸಾಧ್ಯವಾಗಲಿಲ್ಲ ಮತ್ತು ಅಜಿತ್ ಪವಾರ್‌ ತಂಡ ಬಹಮತ ಸಾಬೀತುಪಡಿಸಲು ಅಗತ್ಯ ಬೆಂಬಲಿಗರನ್ನು ಪಡೆಯಲು ವಿಫಲವಾಯ್ತು.

ನ್ಯಾಯಮೂರ್ತಿ ಎನ್.ವಿ.ರಮಣ ನೇತೃತ್ವದ ತ್ರಿಸದಸ್ಯ ಪೀಠದ ತೀರ್ಪಿನ ಹಿನ್ನೆಲೆಯಲ್ಲಿ, ಅಜಿತ್ ಪವಾರ್ ಅವರ ರಾಜೀನಾಮೆ ಭಾರತೀಯ ಜನತಾ ಪಕ್ಷವನ್ನು (ಬಿಜೆಪಿ) ತತ್ತರಿಸುವಂತೆ ಮಾಡಿತು. ಇದರಿಂದಾಗಿ ಫಡ್ನವೀಸ್ ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಿದರು. ಸರ್ಕಾರ ರಚಿಸಿದ ಕೇವಲ 4 ದಿನಗಳಲ್ಲಿ, ಬಿಜೆಪಿ ಒಂದು ಹೆಜ್ಜೆ ಹಿಂದಕ್ಕೆ ಸರಿದು ಎನ್‌ಸಿಪಿ-ಕಾಂಗ್ರೆಸ್-ಶಿವಸೇನೆ ಮೈತ್ರಿಕೂಟವನ್ನು ಸರ್ಕಾರ ರಚಿಸಲು ಅವಕಾಶ ಮಾಡಿಕೊಟ್ಟಿತು.. ಪ್ರಸ್ತುತ ಸನ್ನಿವೇಶದಲ್ಲಿ ತ್ರಿಪಕ್ಷೀಯ ಒಕ್ಕೂಟ ತನ್ನ ಪಕ್ಷದ ವೈಯಕ್ತಿಕ ಸಿದ್ಧಾಂತಗಳಿಂದಾಗಿ ಪರಸ್ಪರ ಘರ್ಷಣೆಗೆ ಅವಕಾಶ ನೀಡದೆ ನ್ಯಾಯಯುತ ಮತ್ತು ಸ್ಥಿರವಾದ ಸರ್ಕಾರವನ್ನು ಮುನ್ನಡೆಸಬಹುದೆ ಎಂಬುದನ್ನು ಕಾದು ನೋಡಬೇಕಿದೆ. 

1996ರಲ್ಲಿ , 13 ದಿನಗಳ ಕಾಲ ಅಧಿಕಾರದಲ್ಲಿದ್ದ ಅಂದಿನ ಪ್ರಧಾನ ಮಂತ್ರಿ ವಾಜಪೇಯಿ ಅವರು ವಿರೋಧ ಪಕ್ಷವನ್ನು ಒಡೆದು ರಚಿಸಿದ ಸರ್ಕಾರದಲ್ಲಿ ಪ್ರಧಾನಿ ಹುದ್ದೆಯನ್ನು ಅಲಂಕರಿಸಲು ಇಷ್ಟಪಡುವುದಿಲ್ಲ ಎಂದಿದ್ದರು. ಭಾರತೀಯ ರಾಜಕಾರಣಕ್ಕೆ ಅಂತಹ ಮೌಲ್ಯವಿತ್ತು. ಸಮಕಾಲೀನ ರಾಜಕಾರಣದಲ್ಲಿ ಆ ರೀತಿಯ ಸೈದ್ಧಾಂತಿಕ ಮೌಲ್ಯಗಳನ್ನು ಅಕ್ಷರಶಃ ಗಾಳಿಗೆ ತೂರಲಾಗಿದೆ. ಪ್ರಸ್ತುತ ಸನ್ನಿವೇಶದಲ್ಲಿ ಪಕ್ಷಗಳು ಮತ್ತು ಅದರ ಸದಸ್ಯರು ಅಧಿಕಾರವನ್ನು ಪಡೆಯಲು ಮತ್ತು ಅಧಿಕಾರದಲ್ಲಿರಲು ಯಾವುದೇ ಮಟಕ್ಕೆ ಇಳಿಯಲು ಸಿದ್ಧರಾಗಿದ್ದಾರೆ ಎಂಬುದು ಇತ್ತೀಚಿನ ಬೆಳವಣಿಗೆಗಳಿಂದ ಸಾಬೀತಾಗುತ್ತಿದೆ!! 2019ರ ಅಕ್ಟೋಬರ್ 21ರಂದು ನಡೆದ ಮಹಾರಾಷ್ಟ್ರ ಚುನಾವಣೆಯಲ್ಲಿ ಶಿವಸೇನೆ 56 ಸ್ಥಾನಗಳನ್ನು ಗಳಿಸಿದರೆ, ಬಿಜೆಪಿ ಶೇ.25.7ರಷ್ಟು ಮತಗಳೊಂದಿಗೆ 105 ಸ್ಥಾನಗಳನ್ನು ಗಳಿಸಿತ್ತು. ಸಾಮಾನ್ಯ ಬಹುಮತಕ್ಕಿಂತ ಹೆಚ್ಚಿನ ಸ್ಥಾನಗಳನ್ನು ಗೆದ್ದ ಆಡಳಿತಾರೂಢ ಬಿಜೆಪಿಗೆ ಮಿತ್ರ ಪಕ್ಷ ಶಿವಸೇನೆಯ ಮುಖ್ಯಮಂತ್ರಿ ಸ್ಥಾನ ಸೇರಿದಂತೆ ಅನೇಕ ಬೇಡಿಕೆಗಳು ನುಂಗಲಾರದ ಬಿಸಿ ತುಪ್ಪದಂತಾಯ್ತು. ಇದು  ರಾಜಕೀಯ ಅನಿಶ್ಚಿತತೆ ಕಾರಣವಾಗಿ, ಮುಖ್ಯಮಂತ್ರಿ ಹುದ್ದೆಗಾಗಿ ಕಾಂಗ್ರೆಸ್ ಬೆಂಬಲಿತ ಶಿವಸೇನೆ, ಎನ್‌ಸಿಪಿ ಜೊತೆಗೂ ಮೈತ್ರಿಗೆ ಮುಂದಾಯಿತು.

ಈ ಹಿಂದೆ ಎನ್‌ಸಿಪಿಯನ್ನು ಸಹಜವಾಗಿ ಭ್ರಷ್ಟ ಪಕ್ಷ ಎಂದು ಕರೆದಿದ್ದ ಭಾರತೀಯ ಜನತಾ ಪಕ್ಷ (ಬಿಜೆಪಿ) ಒಂದು ಸನ್ನಿವೇಶದಲ್ಲಿ ಅಜಿತ್ ಪವಾರ್ ಅವರೊಂದಿಗೆ ಸೇರಲು ಸಿದ್ಧವಾಗಿತ್ತು ಮತ್ತು ಅಜಿತ್ ಮತ್ತು ಅವರ ತಂಡವನ್ನು ಸಮಾಧಾನಪಡಿಸಲು ಉಪಮುಖ್ಯಮಂತ್ರಿ ಹುದ್ದೆಯನ್ನು ಸಹ ನೀಡಿತ್ತು. ಬಿಜೆಪಿ ಮೇಲೆ ಅನೈತಿಕ ಮೈತ್ರಿಗಳ ಆರೋಪವಿದೆ. ಅದೇ ತಂತ್ರಗಳು ಗೋವಾದಿಂದ ಮಣಿಪುರದವರೆಗೆ ಅನೇಕ ರಾಜ್ಯಗಳಲ್ಲಿ ಅಧಿಕಾರಕ್ಕೇರಲು ಕಾರಣವಾಗಿದೆ. ಇಂದು, ಅಜಿತ್ ಪವಾರ್ ಅವರ ರಾಜಕೀಯ ಆಟ "ನೀವು ಒಂದನ್ನು ಕೊಟ್ಟರೆ, ನಾನು ಮತ್ತೊಂದನ್ನು ಕುಡಿಯುತ್ತೇನೆ" ಎಂಬ ಮಾತನ್ನು ಪ್ರತಿಬಿಂಬಿಸುತ್ತಿದೆ. ಸೈದ್ಧಾಂತಿಕ ನಾಯಕರು ಮತ್ತು ಪಕ್ಷನಿಷ್ಠ ಕಾರ್ಯಕರ್ತರಿಗೆ ಹೆಸರುವಾಸಿಯಾದ ಬಿಜೆಪಿ ಅಧಿಕಾರಕ್ಕಾಗಿ ಏಕೆ ಈ ರೀತಿ ಹೆಜ್ಜೆ ಇಡುತ್ತಿದೆ ಎಂಬುದು ತಿಳಿಯುತ್ತಿಲ್ಲ. ಈ ಹಿಂದಿನ ಕರ್ನಾಟಕ ರಾಜಕೀಯ ಮತ್ತು ಪ್ರಸ್ತುತದ ಮಹಾರಾಷ್ಟ್ರದ ಘಟನೆಗಳು ಬಿಜೆಪಿಯ ಅಚ್ಚರಿಯ ನಡೆಗೆ ಸ್ಪಷ್ಟ ನಿದರ್ಶನಗಳಾಗಿವೆ. 

ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ ನಂತರ ಮೈತ್ರಿ ಸರ್ಕಾರದ ಕುರಿತು ಪ್ರತಿಕ್ರಿಯಿಸಿರುವ ಫಡ್ನವೀಸ್‌, ಎಂವಿಎ ಮೈತ್ರಿ 3 ಚಕ್ರಗಳ ಆಟೋದಲ್ಲಿನ ಪ್ರಯಾಣದಂತಿದೆ. ಅದರ ಪ್ರತಿಯೊಂದು ಚಕ್ರವೂ ತನ್ನದೇ ಆದ ದಿಕ್ಕಿನಲ್ಲಿ ಚಲಿಸುತ್ತಿದೆ ಎಂದು ವ್ಯಂಗ್ಯವಾಡಿದ್ದರು. ಅವರದ್ದೇ ಆದ ಮೂರ್ಖತನವು ಮೈತ್ರಿ ಸರ್ಕಾರವನ್ನು ಉರುಳಿಸುತ್ತದೆ ಎಂದು ಭವಿಷ್ಯ ನುಡಿದಿದ್ದಾರೆ. 

ರಾಜ್ಯ ಆಡಳಿತದಲ್ಲಿ ರಾಜಕೀಯದಿಂದ ಸೃಷ್ಟಿಸಲ್ಪಟ್ಟ ಸೈದ್ಧಾಂತಿಕ ದಿವಾಳಿತನ ಮತ್ತು ಅನುಚಿತತೆಯನ್ನು ಮಹಾರಾಷ್ಟ್ರದ ಜನ ಸ್ವತಃ ಮನವರಿಕೆ ಮಾಡಿಕೊಳ್ಳುವವರೆಗೆ  ಕಮಲ್‌ನಾಥ್‌ ಏಕೆ ಕಾಯುತ್ತಿದ್ದರು? ಬಹುಮತ ಮತ್ತು ಅಧಿಕಾರಕ್ಕಾಗಿ ನಾವು ಕೇವಲ ಕುದುರೆ ವ್ಯಾಪಾರ ಮಾಡುವವರಲ್ಲ ಎಂದು ಫಡ್ನವೀಸ್ ಹೇಳುತ್ತಿದ್ದರೆ, ಮೊದಲ ಬಾರಿಗೆ ಅಜಿತ್ ಪವಾರ್ ಅವರ ಪರವಾಗಿ ಅದನ್ನು ಮಾಡಲು ಯಾರು ಅವಕಾಶ ನೀಡಿದರು? ಸರ್ಕಾರ ಪತನಗೊಂಡರೆ ಮೈತ್ರಿ ಪಕ್ಷ ಸ್ಪರ್ಧಿಸಿದ ಸ್ಥಾನಗಳಲ್ಲಿ ಶೇ.70ರಷ್ಟು ಗೆಲುವು ಸಾರ್ವಜನಿಕರ ಬೆಂಬಲವನ್ನು ಹೊಂದಿತ್ತಾ ಎಂದು ಖಚಿತಪಡಿಸಿಕೊಳ್ಳಲು ಯಾವುದೇ ನಿರ್ದಿಷ್ಟ ತರ್ಕವಿಲ್ಲ.

ಇತ್ತೀಚಿನ ಕರ್ನಾಟಕ ಚುನಾವಣೆಯಲ್ಲಿ ಬಿಜೆಪಿ ಏಕೈಕ ಅತಿದೊಡ್ಡ ರಾಜಕೀಯ ಪಕ್ಷವಾಗಿ ಹೊರಹೊಮ್ಮಿದರೂ, ಸಾಮಾನ್ಯ ಬಹುಮತಕ್ಕೆ ಅಗತ್ಯ ಕೆಲವೇ ಸ್ಥಾನಗಳ ಕೊರತೆ ಎದುರಿಸಿತು ಮತ್ತು ರಾಜ್ಯಪಾಲರ ಆಹ್ವಾನದೊಂದಿಗೆ ಯಡಿಯೂರಪ್ಪ ನೇತೃತ್ವದಲ್ಲಿ ಸರ್ಕಾರ ರಚನೆಯಾಯಿತು.ಆದರೆ ಬಳಿಕ, ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಬಹುಮತ ಸಾಬೀತುಪಡಿಸಬೇಕೆಂಬ ಎಂಬ ಸರ್ವೋಚ್ಚ ಆದೇಶದೊಂದಿಗೆ ಮರುಮಾತನಾಡದೆ ಮುಖ್ಯಮಂತ್ರಿ ಹುದ್ದೆ ತ್ಯಜಿಸುವ ಸ್ಥಿತಿ ನಿರ್ಮಾಣವಾಯಿತು. ಜೆಡಿಯು (ಎಸ್), ಕಾಂಗ್ರೆಸ್ ಒಕ್ಕೂಟವನ್ನು ಬಿಜೆಪಿ ಹೇಗೆ ಸ್ವೀಕರಿಸಲಿಲ್ಲ ಎಂಬುದು ಇತ್ತೀಚಿನ ಇತಿಹಾಸವಾಗಿದೆ!! ಹಿಂದಿನ ಕರ್ನಾಟಕದ ರಾಜಕೀಯ ಬೆಳವಣಿಗೆ ಬಿಜೆಪಿಗೆ ಕೇವಲ ಒಂದು ಪಾಠವಾಗಿದ್ದರೆ, ತ್ರಿಪಕ್ಷೀಯ ಮೈತ್ರಿಯನ್ನು ಮಹಾರಾಷ್ಟ್ರದ ಸಾರ್ವಜನಿಕರ ದೃಷ್ಟಿಯಲ್ಲಿ ತಮಾಷೆಯಾಗಿಸುವುದು ಬಿಜೆಪಿಗೆ ಸುಲಭ. ಆ ಮೂಲಕ ಅದು ತನ್ನ ಭಿನ್ನತೆಯನ್ನು ತೋರಿಸಬಹುದು.

ಈಗ ದೊಡ್ಡ ಪ್ರಶ್ನೆ -

ಆದರ್ಶ ರಾಜಕಾರಣದೊಂದಿಗೆ ರಾಜಿಯಾದ ಬಿಜೆಪಿ ಅಂತಿಮವಾಗಿ ಏನು ಸಾಧಿಸಿತು? ಈಗ ಉಳಿದಿದ್ದು ಕೆಟ್ಟ ಹಣ್ಣಿನಲ್ಲಿ ಹತಾಶೆ ಮಾತ್ರ!

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.