ನವದೆಹಲಿ: ಮಧ್ಯಪ್ರದೇಶ, ರಾಜಸ್ಥಾನ, ಕೇರಳ, ಪಂಜಾಬ್, ಹಿಮಾಚಲ ಪ್ರದೇಶ, ಗುಜರಾತ್, ಹರಿಯಾಣ, ಬಿಹಾರ ರಾಜ್ಯಗಳ ಬಳಿಕ ರಾಷ್ಟ್ರ ರಾಜಧಾನಿ ದೆಹಲಿಯಲ್ಲೂ ಹಕ್ಕಿ ಜ್ವರದ ಭೀತಿ ಉಂಟಾಗಿದೆ.
ದೆಹಲಿಯ ಮೂರು ಪ್ರದೇಶಗಳಲ್ಲಿ ಈವರೆಗೆ ಸುಮಾರು 200 ಕಾಗೆಗಳು ಮೃತಪಟ್ಟಿರುವುದು ವರದಿಯಾಗಿದೆ. ಮಯೂರ್ ವಿಹಾರ್‌ನ ಸೆಂಟ್ರಲ್ ಪಾರ್ಕ್, ದ್ವಾರಕದ ಡಿಡಿಎ ಪಾರ್ಕ್, ಹಸ್ತ್ಸಾಲ್ ಪ್ರದೇಶದಲ್ಲಿ ಇದ್ದಕ್ಕಿದ್ದಂತೆ ಕಾಗೆಗಳು ಸತ್ತು ಬೀಳುತ್ತಿವೆ. ಈ ಮೂರೂ ಪ್ರದೇಶಗಳಿಂದ ಮೃತ ಕಾಗೆಗಳ ಮಾದರಿಗಳನ್ನು ಪರೀಕ್ಷೆಗೆ ಜಲಂಧರ್ ಹಾಗೂ ಭೋಪಾಲ್‌ನಲ್ಲಿರುವ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.
ಇದನ್ನೂ ಓದಿ: ಹಕ್ಕಿ ಜ್ವರದ ಭೀತಿ.. ಭಾರತದಿಂದ ಪೌಲ್ಟ್ರಿ ಉತ್ಪನ್ನಗಳ ಆಮದು ಸ್ಥಗಿತಗೊಳಿಸಿದ ನೇಪಾಳ
ಕಾಗೆಗಳ ಸಾವು ವರದಿಯಾಗುತ್ತಿದ್ದಂತೆಯೇ ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಸೂಚನೆ ಮೇರೆಗೆ ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಕಳೆದ 10 ದಿನಗಳಿಂದ ದೇಶದ ಅನೇಕ ರಾಜ್ಯಗಳಲ್ಲಿ ಹಕ್ಕಿಜ್ವರದಿಂದಾಗಿ ಕೋಳಿ, ಬಾತುಕೋಳಿ, ಕಾಗೆ, ಪಾರಿವಾಳ ಸೇರಿ ಸಾವಿರಾರು ಪಕ್ಷಿಗಳ ಮಾರಣಹೋಮವಾಗಿದೆ. ಹೀಗಾಗಿ ಕುಕ್ಕುಟೋತ್ಪನ್ನಗಳ ಆಮದನ್ನು ನೇಪಾಳ ಸ್ಥಗಿತಗೊಳಿಸಿದೆ.