ETV Bharat / bharat

ಪರಿಸರ ಸ್ನೇಹಿ ರಕ್ಷಾ ಬಂಧನಕ್ಕೆ ಬಿಜ್ನೋರ್ ಸಿದ್ದ.. ಗೋವಿನ ಸಗಣಿಯಿಂದ ರಾಖಿ ತಯಾರು..

ರಕ್ಷಾ ಬಂಧನ ಹಬ್ಬಕ್ಕೆ ಇನ್ನೇನು ದಿನಗಣನೆ ಶುರುವಾಗಿದೆ. ಈ ಹಬ್ಬದಲ್ಲಂತೂ ಎಲ್ಲರ ಕೈಯಲ್ಲೂ ವಿಭಿನ್ನ ರೀತಿಯ ಬಣ್ಣ ಬಣ್ಣದ ಪ್ಲಾಸ್ಟಿಕ್ ರಾಖಿಗಳು ಜಗಮಗಿಸುತ್ತವೆ. ಆದರೆ, ಇಲ್ಲೊಂದು ಗುಂಪು ಮಾತ್ರ ಪರಿಸರ ಸ್ನೇಹಿ ರಕ್ಷಾ ಬಂಧನಕ್ಕೆ ಸಾಕ್ಷಿಯಾಗಲು ಮುಂದಾಗಿದೆ. ಇದಕ್ಕೆ ಬಿಜ್ನೋರ್ ಸಜ್ಜಾಗುತ್ತಿದೆ.

author img

By

Published : Aug 12, 2019, 9:50 AM IST

ಪರಿಸರ ಸ್ನೇಹಿ ರಕ್ಷಾ ಬಂಧನಕ್ಕೆ ಬಿಜ್ನೋರ್ ಸಿದ್ದ; ಗೋವಿನ ಸಗಣಿಯಿಂದ ತಯಾರಾಗುತ್ತಿದೆ ರಾಖಿ

ಬಿಜ್ನೋರ್ : ಪರಿಸರ ಸ್ನೇಹಿ ರಕ್ಷಾ ಬಂಧನಕ್ಕೆ ಸಾಕ್ಷಿಯಾಗಲು ಈಗಾಗಲೇ ಬಿಜ್ನೋರ್ ಸಜ್ಜಾಗುತ್ತಿದೆ. ಶ್ರೀ ಕೃಷ್ಣ ಗೌಶಾಲಾ ಎಂಬ ಸ್ಥಳೀಯೊಂದು ಹಸುವಿನ ಸಗಣಿಯಿಂದ ಮಾಡಿದ ರಾಖಿಗಳನ್ನು ಈಗಾಗಲೇ ಹೊರತರುತ್ತಿದ್ದು, ಇದು ನಿಜಕ್ಕೂ ಆಶ್ಚರ್ಯಕರವಾಗಿದೆ.

ಈ ವಿಶೇಷ ಪ್ರಯತ್ನ ನಡೆಸಿರುವುದು 52 ವರ್ಷದ ಎನ್‌ಆರ್‌ಐ ಅಲ್ಖಾ ಲಾಹೋತಿ ಎಂಬುವರು. ಉತ್ತರಪ್ರದೇಶದ ಬಿಜ್ನೋರ್ ಜಿಲ್ಲೆಯ ನಾಗಿನಾ ಎಂಬ ಸಣ್ಣ ಪಟ್ಟಣದಲ್ಲಿ ತನ್ನ ತಂದೆಯ ಹೈನುಗಾರಿಕೆ ನಡೆಸಲು ಇವರು ಇಂಡೋನೇಷ್ಯಾದಲ್ಲಿದ್ದ ತನ್ನ ಕೆಲಸವನ್ನೂ ತೊರೆದಿದ್ದಾರೆ. ಅಲ್ಲದೇ ಈಗ ಪರಿಸರ ಸ್ನೇಹಿ ರಾಖಿಗಳನ್ನು ಲಖೋಟಿಯಾದ ಗೋಶಾಲೆಗಳಲ್ಲಿ ತಯಾರಿಸಲಾಗುತ್ತಿದೆ.

ಗೋವಿನ ಸಗಣಿಯಿಂದ ತಯಾರಾದ ರಾಖಿ..

117ಕ್ಕೂ ಹೆಚ್ಚು ಹಸುಗಳನ್ನು ಹೊಂದಿರುವ ಈ ಗೌ ಶಾಲಾ, ಗೋವಿನ ಸಗಣಿ ತಯಾರಿಸಿದ ವಿವಿಧ ಉತ್ಪನ್ನಗಳನ್ನು ಹೊರತರುತ್ತಿದೆ. ಅಲ್ಲದೇ ದಹನಕ್ಕೆ ಬಳಸುವ ಹಸುವಿನ ಬೆರಣಿಗಳನ್ನು ಸಹ ಸಿದ್ಧಪಡಿಸುತ್ತಾರೆ. ಇದಲ್ಲದೆ, ಹಸುವಿನ ಸಗಣಿ ಮತ್ತು ಗೋವಿನ ಮೂತ್ರದಿಂದ ಹೂವಿನ ಮಡಿಕೆಗಳು ಮತ್ತು ಸೋಂಕು ನಿವಾರಕ ಫಿನೈಲ್ ತಯಾರಿಸುತ್ತಿದ್ದಾರೆ.

'ನಾನು ಜುನಾ ಅಖಾರ ಅವರೊಂದಿಗೆ ಸಂಬಂಧ ಹೊಂದಿದ್ದೇನೆ ಮತ್ತು ಈ ವರ್ಷ ಕುಂಭ ಕಾರ್ಯಕ್ರಮಕ್ಕೆ ಹೋಗಿ ನನ್ನ ರಾಖಿಗಳನ್ನು ಪ್ರದರ್ಶಿಸಿದ್ದೆ. ಅಲ್ಲಿ ನಮ್ಮ ಉತ್ಪನ್ನಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಅಲ್ಲಿನ ಸಂತರು ಸಾರ್ವಜನಿಕರಿಗೆ ಇದೇ ರೀತಿಯ ರಾಖಿಗಳನ್ನು ಮಾಡಲು ನನ್ನನ್ನು ಈಗಾಗಲೇ ಕೇಳಿದ್ದಾರೆ. ಹಾಗಾಗಿ, ನಾನು ಈ ಕುರಿತು ಇತರ ತಜ್ಞರನ್ನು ಸಂಪರ್ಕಿಸಿ ಚರ್ಚಿಸಿದೆ. ಈವರೆಗೆ, ನಾನು ಕರ್ನಾಟಕ, ಉತ್ತರಪ್ರದೇಶ, ಉತ್ತರಾಖಂಡ್ ಮತ್ತು ಒರಿಶಾ ರಾಜ್ಯಗಳಿಂದ ಆರ್ಡರ್ ಪಡೆದಿದ್ದೇನೆ. ಮುಂಬರುವ ಹಬ್ಬಕ್ಕಾಗಿ ನಾನು ಸಾವಿರಾರು ರಾಖಿಗಳನ್ನು ಸಿದ್ಧಪಡಿಸಿದ್ದೇನೆ ಎಂದು ಆಲ್ಖಾ ಲಾಹೋತಿ ಹೇಳಿಕೊಂಡಿದ್ದಾರೆ.

ಅಲ್ಲದೇ ಈ ರಾಖಿಗಳನ್ನು ತಯಾರಿಸುವಾಗ ಎದುರಾದ ಸವಾಲುಗಳ ಕುರಿತು ಮಾತನಾಡಿದ್ದಾರೆ. ಪ್ರಾರಂಭದಲ್ಲಿ ನಾವು ಹಸುವಿನ ಸಗಣಿಗಳಿಂದ ರಾಖಿಗಳನ್ನು ಮಾಡಿದಾಗ ಹಾನಿಗೊಳಗಾದವು. ಆದರೆ, ತದನಂತರ ನಮ್ಮ ಪ್ರಯೋಗ ಮುಂದುವರೆಸಿದಂತೆ ಕೊನೆಯಲ್ಲಿ ಉತ್ತಮವಾದ ರಾಖಿಯನ್ನು ಪಡೆದೆವು ಎಂದಿದ್ದಾರೆ. ನಾವು ರಾಖಿಯನ್ನು ಸೂರ್ಯನ ಬೆಳಕು ಹಾಗೂ ತಂಪಿನ ಸ್ಥಳದಲ್ಲಿ ಶೇಖರಿಸುವ ಮೂಲಕ ಸ್ಥಿರತೆಯನ್ನು ಕಾಯ್ದುಕೊಂಡಿದ್ದೇವೆ ಎಂದರು.

ಮೊದಲು ನಾವು ವಿಭಿನ್ನ ಆಕಾರದ ರಾಖಿಯನ್ನು ತಯಾರಿಸಿ, ನಂತರ ಅದಕ್ಕೆ ಹಸುವಿನ ಸಗಣಿಯನ್ನು ಬಳಸುತ್ತೇವೆ. ತದನಂತರ ಅದನ್ನು ತಂಪಿನ ಹಾಗೂ ಕತ್ತಲೆ ಸ್ಥಳದಲ್ಲಿ ಸಂಗ್ರಹಿಸುತ್ತೇವೆ. ಹಾಗೆಯೇ ಅದು ಒಣಗಿದ ನಂತರ ಪರಿಸರ ಸ್ನೇಹಿ ಬಣ್ಣಗಳಿಂದ ಅಲಂಕರಿಸುತ್ತೇವೆ. ಇಲ್ಲಿ ನಾವು ಪ್ಲಾಸ್ಟಿಕ್ ಬದಲಿಗೆ ದಾರಗಳನ್ನು ಬಳಸುತ್ತೇವೆ. ಚೀನಿ ರಾಖಿಗಳಿಗಿಂತಲೂ ನಮ್ಮ ರಾಖಿಗಳು ಪರಿಸರ ಸ್ನೇಹಿ. ಇವು ಕೊಳೆಯುತ್ತವೆ ಹಾಗೂ ಗೊಬ್ಬರವಾಗಿ ಬಳಸಬಹುದು ಎಂದಿದ್ದಾರೆ.

ಇವುಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡಲಾಗುತ್ತಿದೆ. ಒಂದು ವೇಳೆ ಖಾಲಿಯಾಗದಿದ್ದರೆ ಇವುಗಳನ್ನು ಉಚಿತವಾಗಿ ವಿತರಿಸಲಾಗುವುದು ಎಂದಿದ್ದಾರೆ.

Intro:Body:

national

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.