ETV Bharat / bharat

ಮಲಯಾಳಂ ಸಾಕ್ಷರತಾ ಪರೀಕ್ಷೆಯಲ್ಲಿ ಬಿಹಾರಿ ಮೂಲದ ವಲಸೆ ಮಹಿಳೆ ಟಾಪರ್​​! - ಬಿಹಾರಿ ಮಹಿಳೆ ರೋಮಿಯಾ ಕತೂರ್

ಮಲಯಾಳಂ ಸಾಕ್ಷರತಾ ಪರೀಕ್ಷೆಯಲ್ಲಿ ಬಿಹಾರಿ ಮೂಲದ ವಲಸೆ ಮಹಿಳೆ ಅಗ್ರಸ್ಥಾನ ಪಡೆದಿದ್ದಾರೆ.

Bihari migrant woman emerges topper in Malayalam literacy exam in Kerala
ಮಲಯಾಳಂ ಸಾಕ್ಷರತಾ ಪರೀಕ್ಷೆ
author img

By

Published : Feb 16, 2020, 1:10 PM IST

ಕೊಲ್ಲಂ: ಕೇರಳ ರಾಜ್ಯ ಸಾಕ್ಷರತಾ ಮಿಷನ್ ಪ್ರಾಧಿಕಾರ ಇತ್ತೀಚೆಗೆ ನಡೆಸಿದ 'ವಲಸಿಗರಿಗಾಗಿ ಸಾಕ್ಷರತಾ ಪರೀಕ್ಷೆ'ಯಲ್ಲಿ ಬಿಹಾರಿ ಮಹಿಳೆ ರೋಮಿಯಾ ಕತೂರ್(26)​ ಎಂಬುವರು 100ಕ್ಕೆ 100 ಅಂಕಗಳಿಸಿ ಅಗ್ರಸ್ಥಾನ ಪಡೆದಿದ್ದಾರೆ.

2014ರಲ್ಲಿ ಪತಿ ಸೈಫುಲ್ಲಾರ ಜತೆಗೆ ಉದ್ಯೋಗ ಅರಸುತ್ತಾ ಬಿಹಾರದಿಂದ ಕೇರಳಕ್ಕೆ ವಲಸೆ ಬಂದ ರೋಮಿಯಾ ಇಲ್ಲಿನ ಕೊಲ್ಲಂ ಜಿಲ್ಲೆಯ ಉಮಯನಲ್ಲೂರ್​​ ಗ್ರಾಮದಲ್ಲಿ ನೆಲೆಸಿದ್ದಾರೆ. ಈಗ ಮಲಯಾಳಂ ಪರೀಕ್ಷೆಯಲ್ಲಿ ರ್ಯಾಂಕ್​ ಪಡೆಯುವ ಮೂಲಕ ಭಾಷೆ ಕಲಿಕೆಗೆ ಯಾವುದೂ ಅಡ್ಡಿಯಾಗುವುದಿಲ್ಲ ಎಂಬುದನ್ನು ಸಾಬೀತು ಪಡಿಸಿದ್ದಾರೆ.

ಮಲಯಾಳಂ ಸಾಕ್ಷರತಾ ಪರೀಕ್ಷೆ ಎದುರಿಸಿದ್ದ ಬಿಹಾರಿ ಮಹಿಳೆ..

ರೋಮಿಯಾ ಮಾತ್ರವಲ್ಲದೇ, ಕಳೆದ ತಿಂಗಳು ನಡೆದ ಪರೀಕ್ಷೆಯಲ್ಲಿ ಜ್ಯೂಸ್​ ಸೆಂಟರ್​​ ನಡೆಸುತ್ತಿರುವ ಮೂರು ಮಕ್ಕಳ ತಾಯಿ ತಮನ್ನಾ ತನ್ನ 4 ತಿಂಗಳ ಮಗು ಎತ್ತಿಕೊಂಡು ಬಂದು ಸ್ಥಳೀಯ ಶಾಲೆಯಲ್ಲಿ ಮಾಧ್ಯಮಿಕ ಸೆಕೆಂಡರಿ ಪರೀಕ್ಷೆ ಕೂಡ ಬರೆದಿದ್ದಾರೆ.

"ಚಂಗಾತಿ" ಯೋಜನೆ: ಜನವರಿ 19 ರಂದು ರಾಜ್ಯದಲ್ಲಿ ನಡೆದ 'ಚಂಗಾತಿ' ಯೋಜನೆಯ 2ನೇ ಹಂತದ ಸಾಕ್ಷರತಾ ಪರೀಕ್ಷೆಗೆ ಒಟ್ಟು 1,998 ವಲಸೆ ಕಾರ್ಮಿಕರು ಹಾಜರಾಗಿದ್ದರು. ಚಂಗಾತಿ (ಸ್ನೇಹಿತ) ಯೋಜನೆಯು, ರಾಜ್ಯದಲ್ಲಿ ವಾಸಿಸುತ್ತಿರುವ ವಲಸಿಗ ಕಾರ್ಮಿಕರಿಗೆ ಅಕ್ಷರ ಕಲಿಸುವ ಉದ್ದೇಶದಿಂದ ಕೇರಳದಲ್ಲಿ ಜಾರಿಗೆ ಬಂದ ಯೋಜನೆ. ನಾಲ್ಕು ತಿಂಗಳಲ್ಲಿ ವಲಸಿಗರಿಗೆ ಮಲಯಾಳಂ ಕಲಿಸುವ ಗುರಿ ಹೊಂದಿದೆ. 2017ರ ಅಗಸ್ಟ್​​ 15ರಂದು ಎರ್ನಾಕುಲಂ ಜಿಲ್ಲೆಯ ಪೆರುಂಬವೂರಿನಲ್ಲಿ ಮೊದಲ ಬಾರಿ ಈ ಯೋಜನೆ ಜಾರಿಗೊಳಿಸಲಾಯ್ತು.

'ಹಮಾರಿ ಮಲಯಾಳಂ' ಎಂಬ ಪಠ್ಯಪುಸ್ತಕವನ್ನು ಚಂಗಾತಿ ಯೋಜನೆಯ ವಲಸಿಗ ವಿದ್ಯಾರ್ಥಿಗಳಿಗೆಂದೇ ಸಿದ್ಧಪಡಿಸಲಾಗಿದೆ. ಇದು ಮಲಯಾಳಂ ಕಲಿತು ಅದರಲ್ಲೇ ಸಂವಹನ ನಡೆಸಲು ಬಹಳ ಸಹಾಯಕ ಎಂದು ವಲಸಿಗ ಮಹಿಳೆಯೊಬ್ಬರು ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.