ನವದೆಹಲಿ/ಬಿಹಾರ್: ಅನಾರೋಗ್ಯದಿಂದ ಬಳಲುತ್ತಿದ್ದ ಬಿಹಾರದ ಜೆಡಿಯು ಸಂಸದ ಬೈದ್ಯನಾಥ್ ಪ್ರಸಾದ್ ಮಹತೋ ಇಂದು ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಬಿಹಾರದ ವಾಲ್ಮಿಕಿ ಕ್ಷೇತ್ರದ ಸಂಸದರಾಗಿದ್ದ ಬೈದ್ಯನಾಥ್ ಪ್ರಸಾದ್, ಫೆ.10 ರಂದು ಏಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು. ಇವರ ನಿಧನಕ್ಕೆ ಸಂತಾಪ ಸೂಚಿಸಿರುವ ಬಿಹಾರ್ ಸಿಎಂ ನಿತೀಶ್ ಕುಮಾರ್, ಸಕಲ ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ ನಡೆಸುವುದಾಗಿ ಘೋಷಿಸಿದ್ದಾರೆ.