ಬಿಹಾರ: ಮರಣದಂಡನೆ ಹಗ್ಗಗಳನ್ನು ತಯಾರಿಸುವಲ್ಲಿ ಪರಿಣತಿ ಹೊಂದಿರುವ ಬಿಹಾರದ ಬಕ್ಸಾರ್ ಸೆಂಟ್ರಲ್ ಜೈಲು, 10 ಹಗ್ಗಗಳಲ್ಲಿ ಆರನ್ನು ನವದೆಹಲಿಯ ತಿಹಾರ್ ಜೈಲಿಗೆ ಬುಧವಾರ ರವಾನಿಸಿದೆ.
ಮೂಲಗಳ ಪ್ರಕಾರ ಒಂದು ಮರಣದಂಡನೆ ಹಗ್ಗಕ್ಕೆ 2,140 ರುಪಾಯಿ ವೆಚ್ಚವಾಗಿದೆ. ಇದನ್ನು ತಿಹಾರ್ ಜೈಲು ಅಧೀಕ್ಷಕರು ಪಾವತಿಸಿದ್ದಾರೆ.
2001 ರ ಸಂಸತ್ತಿನ ದಾಳಿ ಪ್ರಕರಣದ ಪ್ರಧಾನ ಆರೋಪಿ ಅಫ್ಜಲ್ ಗುರುವನ್ನು ಗಲ್ಲಿಗೇರಿಸಲು ಬಕ್ಸರ್ ಕೇಂದ್ರ ಕಾರಾಗೃಹವು ನೇಣು ಹಗ್ಗವನ್ನು ಪೂರೈಸಿತ್ತು. ಆತನನ್ನು ಫೆಬ್ರವರಿ 9, 2013 ರಂದು ಗಲ್ಲಿಗೇರಿಸಲಾಗಿತ್ತು.
ಇನ್ನು ಈ ಮರಣದಂಡನೆ ಹಗ್ಗಗಳನ್ನು 2012 ನಿರ್ಭಯಾ ಅತ್ಯಾಚಾರ ಪ್ರಕರಣದ ಅಪರಾಧಿಗಳಿಗೆ ಬಳಸಬಹುದು ಎಂದು ಹೇಳಲಾಗುತ್ತಿದೆ.