ನವದೆಹಲಿ: ಮೆಗಾಸ್ಟಾರ್ ಅಮಿತಾಭ್ ಬಚ್ಚನ್ ಅವರು ಹಾಲೆಂಡ್ನ ಪ್ರಸಿದ್ಧ ಕ್ಯುಕೆನ್ಹೋಫ್ ಹೂವಿನ ಉದ್ಯಾನಕ್ಕೆ 1975ರಲ್ಲಿ ಹೋಗಿದ್ದ ಕುಟುಂಬ ಪ್ರವಾಸದ ಸವಿನೆನಪುಗಳನ್ನು ಮೆಲುಕು ಹಾಕಿದ್ದಾರೆ.
- " class="align-text-top noRightClick twitterSection" data="
">
ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಸಕ್ರಿಯವಾಗಿರುವ ಹಿರಿಯ ನಟ ತಮ್ಮ ಇನ್ಸ್ಟಾಗ್ರಾಂ ನಲ್ಲಿ ಹೂವುಗಳ ಚಿತ್ರಗಳ ಕೊಲಾಜ್ ಫೋಟೊವೊಂದನ್ನು ಹಂಚಿಕೊಂಡು 1975 ರಲ್ಲಿ ಕುಟುಂಬ ಸಮೇತ ಹೋಗಿದ್ದ ಪ್ರವಾಸವನ್ನು ನೆನಪಿಸಿಕೊಂಡರು.
ಅತ್ಯಂತ ಸುಂದರವಾದ ತೆರೆದ ಉದ್ಯಾನವನ ಇದಾಗಿದ್ದು, ವಿಭಿನ್ನವಾಗಿದೆ ಎಂದು ಬರರೆದಿರುವ ಅವರು ತಮ್ಮ ಮಗ ಅಭಿಷೇಕ್ ಬಚ್ಚನ್ ಹೂವಿನ ಪೊದೆಯೊಳಗೆ ಕಳೆದುಹೋಗಿ ಕಾಣದಂತಾದ ಘಟನೆಯನ್ನೂ ಹಂಚಿಕೊಂಡಿದ್ದಾರೆ.
ಕ್ಯುಕೆನ್ಹೋಫ್ ಹೂವಿನ ಉದ್ಯಾನ ವಿಶ್ವದ ಅತಿದೊಡ್ಡ ಹೂವಿನ ಉದ್ಯಾನವನಗಳಲ್ಲಿ ಒಂದಾಗಿದೆ ಮತ್ತು ಪ್ರತಿವರ್ಷ ಹೆಚ್ಚಿನ ಸಂಖ್ಯೆಯ ಪ್ರವಾಸಿಗರನ್ನು ಆಕರ್ಷಿಸುತ್ತವೆ.