ETV Bharat / bharat

ಭೂ ವಿವಾದ: ಗಾಳಿಯಲ್ಲಿ ಗುಂಡು ಹಾರಿಸಿದ ಬನಾರಸ್ ವಿವಿ ವಿದ್ಯಾರ್ಥಿನಿ ಅಂದರ್​

author img

By

Published : May 26, 2020, 2:03 PM IST

Updated : May 26, 2020, 2:56 PM IST

ಭೂ ವಿವಾದಕ್ಕೆ ಸಂಬಂಧಿಸಿದ ಘರ್ಷಣೆಯ ವೇಳೆ ಗಾಳಿಯಲ್ಲಿ ಗುಂಡು ಹಾರಿಸಿದ ಬನಾರಸ್ ಹಿಂದೂ ವಿವಿಯ ವಿದ್ಯಾರ್ಥಿನಿಯೊಬ್ಬಳನ್ನು ಇಲ್ಲಿನ ಪೊಲೀಸರು ಬಂಧಿಸಿದ್ದಾರೆ.

bhu-student-fired-bullets-during-land-dispute-in-bihar-video-goes-viral
ಗಾಳಿಯಲ್ಲಿ ಗುಂಡುಹಾರಿಸಿದ ಬನಾರಸ್ ವಿವಿ ವಿದ್ಯಾರ್ಥಿನಿ

ಕೈಮೂರ್ (ಬಿಹಾರ): ಸೋಷಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್‌ಗಳಲ್ಲಿ ಪಿಸ್ತೂಲ್​ ಹಿಡಿದು ಗುಂಡುಗಳನ್ನು ಹಾರಿಸಿದ ವಿಡಿಯೋ ವೈರಲ್ ಆದ ನಂತರ ದಂಡಾವಶ್ ಗ್ರಾಮದ 25 ವರ್ಷದ ಯುವತಿಯನ್ನು ಪೊಲೀಸರು ಬಂಧಿಸಿದ್ದಾರೆ.

ವರದಿಗಳ ಪ್ರಕಾರ, ಮೇ 21 ರಂದು ಭೂ ವಿವಾದದ ಕುರಿತು ಗ್ರಾಮಸ್ಥರ ನಡುವೆ ನಡೆದ ಗಲಾಟೆಯ ಸಂದರ್ಭದಲ್ಲಿ ವಿಡಿಯೋವನ್ನು ಚಿತ್ರೀಕರಿಸಲಾಗಿದೆ.

ಗಾಳಿಯಲ್ಲಿ ಗುಂಡು ಹಾರಿಸಿದ ಬನಾರಸ್ ವಿವಿ ವಿದ್ಯಾರ್ಥಿನಿ

ಭೂ ವಿವಾದಕ್ಕೆ ಸಂಬಂಧಿಸಿದಂತೆ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದಿದ್ದು, 10-12 ಗ್ರಾಮಸ್ಥರು ಕಬ್ಬಿಣದ ರಾಡ್ ಹಾಗೂ ಬಡಿಗೆಗಳನ್ನು ಹಿಡಿದು ಘರ್ಷಣೆ ನಡೆಸಿದ್ದು, ಹಿಂಸಾತ್ಮಕ ಪ್ರಕರಣವಾಗಿದೆ. ಈ ಪರಿಸ್ಥಿತಿಯನ್ನು ಗಮನಿಸಿದ ವಿದ್ಯಾರ್ಥಿನಿ ಗಾಳಿಯಲ್ಲಿ ಗುಂಡುಗಳನ್ನು ಹಾರಿಸಿದ್ದಾಳೆ. ಘಟನೆಯಲ್ಲಿ 12 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಆದರೆ ಗುಂಡಿನ ದಾಳಿಯಿಂದ ಯಾರೂ ಗಾಯಗೊಂಡಿಲ್ಲ ಎಂದು ಕೈಮೂರ್ ಎಸ್​ಪಿ ದಿಲ್​ನಮಾಝ್​​ ಅಹಮದ್​ ತಿಳಿಸಿದರು.

ಆಕೆ ಬನಾರಸ್ ಹಿಂದೂ ವಿಶ್ವವಿದ್ಯಾಲಯದಲ್ಲಿ (ಬಿಹೆಚ್‌ಯು) ವಿಜ್ಞಾನ ಪದವಿಯನ್ನು ವ್ಯಾಸಂಗ ಮಾಡುತ್ತಿದ್ದು, ರಾಷ್ಟ್ರವ್ಯಾಪಿ ಲಾಕ್‌ಡೌನ್ ಘೋಷಿಸಿದ ನಂತರ ಕೈಮೂರ್‌ಗೆ ಬಂದಿದ್ದಾಳೆ.

ಘಟನೆಯ ನಂತರ ಯುವತಿಯ ಮನೆಯಿಂದ ಲೋಡ್ ಮಾಡಿದ ಗನ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ ಹಾಗೂ ಶಸ್ತ್ರಾಸ್ತ್ರದ ಮೂಲವನ್ನು ಕಂಡುಹಿಡಿಯಲು ವಿಚಾರಣೆ ನಡೆಸುತ್ತಿದ್ದಾರೆ.

Last Updated : May 26, 2020, 2:56 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.