ETV Bharat / bharat

ಚಲಿಸುತ್ತಿದ್ದ ರೈಲಿನ ಹಿಂದೆ ಓಡಿ, ಮಗುವಿಗೆ ಆಹಾರ ಒದಗಿಸಿದ ಸಿಆರ್‌ಪಿಎಫ್ ಅಧಿಕಾರಿ:  ಗೋಯಲ್​ ಶ್ಲಾಘನೆ - ರೈಲಿನ ಹಿಂದೆ ಓಡಿ, ಮಗುವಿಗೆ ಆಹಾರ

ಭೋಪಾಲ್​ ರೈಲ್ವೆ ನಿಲ್ದಾಣದಲ್ಲಿನ ಶ್ರಮಿಕ್​ ರೈಲಿನಲ್ಲಿ ಹಸಿವಿನಿಂದ ಅಳುತ್ತಿದ್ದ ಮಗುವಿಗೆ ಹಾಲಿನ ಪ್ಯಾಕೆಟ್​​ ನೀಡುವ ಮೂಲಕ ಹಸಿವು ನೀಗಿಸಿದ ಸಿಆರ್‌ಪಿಎಫ್ ಅಧಿಕಾರಿಗೆ ರೈಲ್ವೆ ಸಚಿವ ಪಿಯೂಷ್ ಗೋಯಲ್ ಅಭಿನಂದನೆ ಸಲ್ಲಿಸಿದ್ದಾರೆ.

Shramik Special train
ಮಗುವಿಗೆ ಆಹಾರ ಒದಗಿಸಿದ ಸಿಆರ್‌ಪಿಎಫ್ ಅಧಿಕಾರಿ
author img

By

Published : Jun 5, 2020, 5:49 PM IST

ನವದೆಹಲಿ: ಭೋಪಾಲ್ ರೈಲು ನಿಲ್ದಾಣದಲ್ಲಿ ಆಹಾರಕ್ಕಾಗಿ ಅಳುತ್ತಿದ್ದ 6 ತಿಂಗಳ ಶಿಶುವಿಗೆ ಆಹಾರ ನೀಡಿದ್ದಕ್ಕಾಗಿ ಸಿಆರ್‌ಪಿಎಫ್ ಅಧಿಕಾರಿ ಇಂದರ್ ಯಾದವ್ ಅವರನ್ನು ಕೇಂದ್ರ ರೈಲ್ವೆ ಸಚಿವ ಪಿಯೂಷ್ ಗೋಯಲ್ ಶ್ಲಾಘಿಸಿದ್ದಾರೆ.

ಸಿಸಿಟಿವಿಯಲ್ಲಿ ಸೆರೆಯಾದ ದೃಶ್ಯ

ಭೋಪಾಲ್​​ ರೈಲು ನಿಲ್ದಾಣದಲ್ಲಿ ಬಂದು ನಿಂತಿದ್ದ ಶ್ರಮಿಕ್​​ ರೈಲಿನಲ್ಲಿ 6 ತಿಂಗಳ ಮಗುವೊಂದು ಹಸಿವಿನಿಂದ ಅಳುತ್ತಿತ್ತು. ಈ ವೇಳೆ, ಆಕೆಯ ತಾಯಿ ಸಫಿಯಾ ಹಾಶಿಮಾ ಎಂಬುವವವರು ಸಿಆರ್​ಪಿಎಫ್​ ಅಧಿಕಾರಿ ಇಂದರ್‌ ಯಾದವ್​​ ಅವರ ಬಳಿ ಸಹಾಯ ಕೇಳಿದ್ದಾರೆ. ಮಗುವಿನ ಹಸಿವು ನೀಗಿಸುವ ಸಲುವಾಗಿ ಇಂದರ್,​ ರೈಲು ನಿಲ್ದಾಣದ ಬಳಿ ಇರುವ ಅಂಗಡಿಗೆ ತೆರಳಿ ಹಾಲಿನ ಪ್ಯಾಕೆಟ್​ ಖರೀದಿಸಿ ಬರುವ ವೇಳೆಗೆ ರೈಲು ಹೊರಟಿತ್ತು. ಇದನ್ನು ನೋಡಿದ ಇಂದರ್,​ ಕೂಡಲೆ ರೈಲಿನ ಹಿಂದೆ ಓಡಲು ಪ್ರಾರಂಭಿಸಿ ರೈಲಿನ ಕಿಟಕಿಯ ಮೂಲಕ ಸಫಿಯಾಗೆ ಹಾಲಿನ ಪ್ಯಾಕೆಟ್​ ನೀಡಿದ್ದರು.

ಈ ಎಲ್ಲ ದೃಶ್ಯಗಳು ಭೋಪಾಲ್​ ರೈಲ್ವೆ ನಿಲ್ದಾಣದ ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಕೂಡ ಆಗಿತ್ತು. ಇನ್ನು ಈ ಬಗ್ಗೆ ತಿಳಿದ ರೈಲ್ವೆ ಸಚಿವ ಪಿಯೂಷ್​​ ಗೋಯಲ್​ ಸಹ ಸಂತಸ ವ್ಯಕ್ತಪಡಿಸಿದ್ದು, ಸಿಆರ್​ಪಿಎಫ್​ ಅಧಿಕಾರಿ ಇಂದರ್‌ ಯಾದವ್​​ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.