ETV Bharat / bharat

ಗಾನ ಗಂಧರ್ವ ಎಸ್​​ಪಿಬಿಗೆ ಭಾರತ ರತ್ನ ನೀಡಿ: ನಮೋಗೆ ಪತ್ರ ಬರೆದ ಜಗನ್​ - ಎಸ್​​ಪಿಬಿ ಭಾರತ ರತ್ನ ಸುದ್ದಿ

ಗಾನ ಗಾರುಡಿಗ, ಪದ್ಮವಿಭೂಷಣ ಎಸ್. ಪಿ. ಬಾಲಸುಬ್ರಹ್ಮಣ್ಯಂ ಅವರಿಗೆ ಭಾರತ ರತ್ನ ನೀಡುವಂತೆ ಆಂಧ್ರಪ್ರದೇಶ ಮುಖ್ಯಮಂತ್ರಿ ಇದೀಗ ಪತ್ರ ಬರೆದಿದ್ದಾರೆ.

Andhra CM writes to pm modi
Andhra CM writes to pm modi
author img

By

Published : Sep 28, 2020, 5:41 PM IST

ಅಮರಾವತಿ: ಖ್ಯಾತ ಗಾಯಕ, ಸಂಗೀತ ನಿರ್ದೇಶಕ ಎಸ್​​.ಪಿ ಬಾಲಸುಬ್ರಹ್ಮಣ್ಯಂ ಅವರು ಕಳೆದ ಮೂರು ದಿನಗಳ ಹಿಂದೆ ಅನಾರೋಗ್ಯದ ಕಾರಣ ಇಹಲೋಕ ತ್ಯಜಿಸಿದ್ದು, ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ, ಸ್ಯಾಂಡಲ್​ವುಡ್​, ಬಾಲಿವುಡ್ ಸೇರಿ ಸಿನಿರಂಗ, ರಾಜಕೀಯ ಮುಖಂಡರು ಕಂಬನಿ ಮಿಡಿದಿದ್ದಾರೆ.

ಗಾನ ಗಾರುಡಿಗನಿಗೆ ಭಾರತ ರತ್ನ ನೀಡುವಂತೆ ಆಂಧ್ರಪ್ರದೇಶ ಮುಖ್ಯಮಂತ್ರಿ ವೈ.ಎಸ್​​ ಜಗನಮಮೋಹನ್​ ರೆಡ್ಡಿ ಇದೀಗ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.

  • Andhra Pradesh CM YS Jagan Mohan Reddy writes to PM Narendra Modi, requesting him to confer Bharat Ratna upon singer SP Balasubrahmanyam who died on Sept 25. pic.twitter.com/QwWSe7NHfm

    — ANI (@ANI) September 28, 2020 " class="align-text-top noRightClick twitterSection" data=" ">

ಪದ್ಮಶ್ರೀ, ಪದ್ಮವಿಭೂಷಣ ಪುರಸ್ಕೃತ ಎಸ್​​ಪಿಬಿ ಹುಟ್ಟಿದ್ದು ಮೂಲತಃ ಆಂಧ್ರಪ್ರದೇಶದ ನೆಲ್ಲೂರು ಜಿಲ್ಲೆಯಲ್ಲಿ. ಈಗಾಗಲೇ ಅಲ್ಲಿ ಮ್ಯೂಸಿಯಂ ನಿರ್ಮಿಸಲು ಕ್ರಮ ಕೈಗೊಳ್ಳಲಾಗಿದ್ದು, ಭಾರತ ಸರ್ಕಾರ ಅವರಿಗೆ ಭಾರತ ರತ್ನ ನೀಡಿ ಗೌರವಿಸಬೇಕು ಎಂದಿದ್ದಾರೆ.

ಕಳೆದ ಸೆಪ್ಟೆಂಬರ್​ 25ರಂದು ನಿಧನರಾಗಿದ್ದ ಎಸ್​ಪಿಬಿ ಸುಮಾರು 40 ಸಾವಿರಕ್ಕೂ ಅಧಿಕ ಹಾಡುಗಳನ್ನು ಹಾಡಿದ್ದು, ಕೋಟ್ಯಂತರ ಜನರ ಮನಗೆದ್ದಿದ್ದಾರೆ. ​​ಪ್ರಮುಖವಾಗಿ ತೆಲಗು, ತಮಿಳು, ಕನ್ನಡ, ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ಅವರು ಹಾಡುಗಳನ್ನು ಹಾಡಿದ್ದಾರೆ.

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.