ಹೈದರಾಬಾದ್: ಭಾರತದ ಮೊದಲ ಕೋವಿಡ್ ಲಸಿಕೆ 'ಕೋವಾಕ್ಸಿನ್'ನ ಕ್ಲಿನಿಕಲ್ ಪ್ರಯೋಗಕ್ಕಾಗಿ ಹೈದರಾಬಾದ್‌ನ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿ (ಎನ್‌ಐವಿ)ಯಲ್ಲಿ ಭಾರತ್ ಬಯೋಟೆಕ್ ನೋಂದಣಿಗಳನ್ನು ಪ್ರಾರಂಭಿಸಿದೆ.
ಲಸಿಕೆ ಅಭಿವೃದ್ಧಿ ಪಡಿಸಿರುವುದಾಗಿ ಘೋಷಿಸಿದ ಬಳಿಕ ರಾಷ್ಟ್ರೀಯ ವೈದ್ಯಕೀಯ ವಿಜ್ಞಾನ ಸಂಸ್ಥೆ (NIMS)ಯ ವಿಜ್ಞಾನಿಗಳು ಮಾದರಿಗಳನ್ನು ಸಂಗ್ರಹಿಸಲು ಶುರು ಮಾಡಿದ್ದಾರೆ.
ವಿಶ್ವವನ್ನೇ ತಲ್ಲಣಗೊಳಿಸಿರುವ ಕೊರೊನಾಗೆ ಈವರೆಗೆ ಯಾವುದೇ ಪ್ರತ್ಯೇಕ ಲಸಿಕೆ ಕಂಡು ಹಿಡಿಯಲಾಗಿರಲಿಲ್ಲ. ಆದರೆ, ಇದೇ ಮೊದಲ ಬಾರಿಗೆ ಭಾರತದಲ್ಲಿ ’’ಭಾರತ್ ಬಯೋಟೆಕ್’’, ಐಸಿಎಂಆರ್, ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿ ಸಹಯೋಗದೊಂದಿಗೆ ಕೊವಾಕ್ಸಿನ್ ಲಸಿಕೆ ಕಂಡು ಹಿಡಿಯಲಾಗಿದೆ.
ಕೊವಾಕ್ಸಿನ್ನ ಕ್ಲಿನಿಕಲ್ ಪ್ರಯೋಗಕ್ಕಾಗಿ ಭಾರತ್ ಬಯೋಟೆಕ್ಗೆ ಡ್ರಗ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ(ಡಿಸಿಜೆಐ), ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅನುಮೋದನೆ ನೀಡಿದೆ.
ತ್ವರಿತಗತಿಯಲ್ಲಿ ಕ್ಲಿನಿಕಲ್ ಪ್ರಯೋಗವನ್ನು ಕೈಗೊಂಡು, ಇದರ ಫಲಿತಾಂಶವನ್ನು ಆಗಸ್ಟ್ 15ರ ಒಳಗಾಗಿ ಬಿಡುಗಡೆ ಮಾಡುವಂತೆ ಕೋರಿ ಐಸಿಎಂಆರ್ ಡಿಜಿ ಬಲರಾಮ್ ಭಾರ್ಗವ ಅವರು ಭಾರತ್ ಬಯೋಟೆಕ್ ಮತ್ತು ವೈದ್ಯಕೀಯ ಕಾಲೇಜುಗಳ ಪ್ರಧಾನ ತನಿಖಾಧಿಕಾರಿಗಳಿಗೆ ಪತ್ರ ಬರೆದಿದ್ದರು. ಹೀಗಾಗಿ ಭಾರತ್ ಬಯೋಟೆಕ್, ಕೋವಿಡ್ ಸೋಂಕಿತರ ಮೇಲೆ ಲಸಿಕೆಯ ಪ್ರಯೋಗ ನಡೆಸಲಿದ್ದು, ಆ.15 ರೊಳಗೆ ಇದರ ಫಲಿತಾಂಶ ಬಿಡುಗಡೆ ಮಾಡಲಿದೆ.