ಅಜ್ಮೇರ್(ರಾಜಸ್ಥಾನ): ಭಿಕ್ಷುಕಿಯೊಬ್ಬಳ ಕೊನೆಯ ಆಸೆಯಂತೇ ಸಿಆರ್‌ಪಿಎಫ್ ಹುತಾತ್ಮ ಯೋಧರ ಕುಟುಂಬಗಳಿಗೆ ಲಕ್ಷಾಂತರ ರೂ. ನೀಡಿ ಸತ್ತಮೇಲೂ ಸಾರ್ಥಕತೆ ಮೆರೆದ ಅಪರೂಪದ ಘಟನೆ ರಾಜಸ್ಥಾನದ ಅಜ್ಮೇರ್‌ನಲ್ಲಿ ನಡೆದಿದೆ.
ನಂದಿನಿ ಶರ್ಮಾ ಎಂಬ ಹೆಸರಿನ ಅಜ್ಜಿ, ತಾನು ಬದುಕಿರುವಾಗ ಅಜ್ಮೇರ್‌ನ ಬಜರಂಗಗಢ ಅಂಬೇ ಮಾತಾ ದೇವಾಲಯದ ಮುಂದೆ ಭಿಕ್ಷೆ ಬೇಡುತಾಯಿದ್ದಳು. ಹಾಗೇ ಭಿಕ್ಷೆಯಿಂದ ಬಂದ ಹಣವನ್ನ ನಿತ್ಯ ಬ್ಯಾಂಕ್‌ನಲ್ಲಿ ಠೇವಣಿ ಇಡುತ್ತಿದ್ದಳಂತೆ. ಅದೇ ಹಣದ ಭದ್ರತೆಗಾಗಿ ಇಬ್ಬರು ವಿಶ್ವಾಸಾರ್ಹ ಟ್ರಸ್ಟೀಗಳನ್ನೂ ನೇಮಿಸಿದ್ದಳು.
ತಾನು ಸತ್ತ ಮೇಲೆ ಆ ಹಣ ಅದೇ ಟ್ರಸ್ಟೀಗಳು ದೇಶ ಮತ್ತು ಸಾಮಾಜಿಕ ಕಾರ್ಯಕ್ಕೆ ಬಳಸಲು ಹೇಳಿದ್ದಳಂತೆ. ಹೀಗೆ ಸಾಯೋವರೆಗೂ ನಿತ್ಯ ಸಂಗ್ರಹಿಸಿಟ್ಟಿದ್ದ ಹಣ ಒಳ್ಳೇ ಕಾರ್ಯಕ್ಕೆ ಅದರಲ್ಲೂ ಹುತಾತ್ಮರಾದ ಸೈನಿಕರ ಕುಟುಂಬಕ್ಕೇ ನೀಡೋದಕ್ಕೆ ಅಜ್ಜಿ ನೇಮಿಸಿದ್ದ ಟ್ರಸ್ಟೀಗಳೂ ಕಾಯುತ್ತಿದ್ದರು.
ಇದರ ಮಧ್ಯೆಯೇ ನಂದಿನಿ ಅಜ್ಜಿ ಅಗಸ್ಟ್ 2018ರಲ್ಲಿ ಅನಾರೋಗ್ಯದಿಂದಾಗಿ ಪ್ರಾಣ ತ್ಯಜಿಸಿದ್ದಳು. ಆದ್ರೇ, ಅವರು ಕೂಡಿಟ್ಟಿದ್ದ ಲಕ್ಷಾಂತರ ರೂ. ಹಣ ಈಗ ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ ಕುಟುಂಬ ಸದಸ್ಯರಿಗೆ ಸೇರಿದ್ದು, ಅಜ್ಜಿಯ ಈ ಮಹತ್ಕಾರ್ಯಕ್ಕೆ ಇಡೀ ದೇಶವೇ ಈಗ ತಲೆಬಾಗುತ್ತಿದೆ. ಕೊನೆಯ ಆಸೆ ಈಡೇರುವ ಮೂಲಕ ಸತ್ತಿರೋ ಅಜ್ಜಿಯ ಆತ್ಮಕ್ಕೆ ಈಗ ಶಾಂತಿ ಕೂಡ ಸಿಕ್ಕಿದೆ.
ಅನಾರೋಗ್ಯದಿಂದ ನಂದಿನಿ ಶರ್ಮಾ ಅನ್ನೋ ಅಜ್ಜಿ ಕಳೆದ ವರ್ಷ ಅಗಸ್ಟ್‌ನಲ್ಲಿ ಸಾವನ್ನಪ್ಪಿದ್ದಾರೆ. ಸಾಯೋ ಮೊದಲೇ ಅಜ್ಜಿ ತಾನು ಭಿಕ್ಷೆ ಬೇಡಿ ಕೂಡಿಟ್ಟಿದ್ದ ಹಣ ಈ ರಾಷ್ಟ್ರಕ್ಕೆ ಮತ್ತು ಸಮುದಾಯಕ್ಕೆ ಒಳೀತಾಗಲಿ ಅದರಲ್ಲೂ ದೇಶಕ್ಕಾಗಿ ಹುತಾತ್ಮರಾದ ಯೋಧರ ಕುಟುಂಬ ಸದಸ್ಯರಿಗೆ ಸೇರಬೇಕು ಅಂತ ಕೊನೆ ಆಸೆಯಿತ್ತಂತೆ.
ಈಗ ಜಮ್ಮು-ಕಾಶ್ಮೀರದಲ್ಲಿ ಇಡೀ ವಿಶ್ವವೇ ನೋವಿನಿಂದ ಕಂಗೆಡುವಂತೆ ಮಾಡಿರುವ ಜೆಇಎಂ ಉಗ್ರರ ಆತ್ಮಹುತಿ ದಾಳಿಯಲ್ಲಿ ಸಿಆರ್‌ಪಿಎಫ್‌ನ 42ಕ್ಕೂ ಅಧಿಕ ಯೋಧರು ಸಾವನ್ನಪ್ಪಿದ್ದಾರೆ. ಸಾಯೋವರೆಗೂ ಕೂಡಿಟ್ಟಿದ್ದ ಹಣ ಸಿಆರ್‌ಪಿಎಫ್ ಹುತಾತ್ಮ ಯೋಧಪರ ಕುಟುಂಬಗಳಿಗೆ ನೀಡಿದ್ರೇ ಅದೇ ಅಜ್ಜಿಗೆ ಸಲ್ಲಿಸುವ ನಿಜವಾದ ಶ್ರದ್ಧಾಂಜಲಿ ಅಂತ ಟ್ರಸ್ಟೀಗಳು ನಿರ್ಧರಿಸಿದ್ದರು.
ಬುಧವಾರ ಅಜ್ಮೇರ್ ಜಿಲ್ಲಾಧಿಕಾರಿಗಳ ಕಚೇರಿಗೆ ಆಗಮಿಸಿದ್ದ ಟ್ರಸ್ಟೀಗಳು, ಸಿಆರ್‌ಪಿಎಫ್‌ನ ಹುತಾತ್ಮ ಯೋಧರ ಕುಟುಂಬಗಳಿಗಾಗಿ ಆರ್ಥಿಕ ನೆರವು ನೀಡುವ ಬಗ್ಗೆ ಹೇಳಿದ್ದರು. ಅದರಂತೆ ಮುಖ್ಯಮಂತ್ರಿ ಪರಿಹಾರ ನಿಧಿಗೆ ಅಕೌಂಟ್‌ಗೆ 6.61 ಲಕ್ಷ ರೂ. ನೀಡಿದ್ದಾರೆ.
ಕಾನೂನು ವಿಭಾಗ ಈ ಬಗೆಗಿನ ಎಲ್ಲ ಔಪಚಾರಿಕ ಕೆಲಸ ಮುಗಿಸಿದ್ದಾರೆ. ಮುಖ್ಯಮಂತ್ರಿ ಪರಿಹಾರ ನಿಧಿಗೆ ಕೊಟ್ಟ ಹಣ ಸ್ವೀಕರಿಸಿದ್ದು, ಈ ಬಗ್ಗೆ ಹಣ ನೀಡಿದವರಿಗೆ ಪ್ರಮಾಣ ಪತ್ರವನ್ನೂ ನೀಡಲಾಗಿದೆ ಅಂತ ಅಜ್ಮೇರ್ ಜಿಲ್ಲಾಧಿಕಾರಿ ವಿಶ್ವಮೋಹನ್ ಶರ್ಮಾ ತಿಳಿಸಿದ್ದಾರೆ. ನಿಜವಾಗಲೂ ನಂದಿನಿ ಅಜ್ಜಿ ಭಿಕ್ಷೆ ಬೇಡಿ ಸಂಗ್ರಹಿಸಿಟ್ಟಿದ್ದ ಹಣ ಅದು ದೇಶದ ಒಳಿತಿಗಾಗಿ ಅದರಲ್ಲೂ ಸೈನಿಕರಿಗೇ ತಲುಪಬೇಕು ಅಂತ ಬಯಸಿದ್ದರು. ಅದೇ ಅವರ ಜೀವನದ ಕೊನೆಯ ಆಸೆಯೂ ಆಗಿತ್ತು.
ಅದಕ್ಕಾಗಿ ನಾವು ಪುಲ್ವಾಮಾ ಉಗ್ರರ ದಾಳಿಯಲ್ಲಿ ಹುತಾತ್ಮ ಸಿಆರ್‌ಪಿಎಫ್ ಯೋಧರ ಕುಟುಂಬ ಸದಸ್ಯರಿಗೆ ತಲುಪಿಸೋದೇ ಒಳ್ಳೇಯದ್ದು ಅಂತ ನಿರ್ಧರಿಸಿ ಈ ಕೆಲಸಕ್ಕೆ ಮುಂದಾದೆವು ಅಂತ ಅಜ್ಜಿ ನೇಮಿಸಿದ್ದ ಟ್ರಸ್ಟೀಯೊಬ್ಬರಲ್ಲಾದ, ಸಂದೀಪ್ ಗೌರ್ ತಿಳಿಸಿದ್ದಾರೆ.
ಅಜ್ಜಿಯ ಈ ಕಾರ್ಯ ಸುದ್ದಿಯಾಗಿ ದೇವಾಲಯಕ್ಕೆ ಬರುವ ಭಕ್ತರಿಗೂ ಅದು ತಿಳಿದಿದೆ. ಅಜ್ಜಿಯ ಆತ್ಮಕ್ಕೆ ಶಾಂತಿ ಸಿಗಲೆಂದು ಭಕ್ತರು ವಿಶೇಷ ಪ್ರಾರ್ಥನೆಯನ್ನೂ ಸಲ್ಲಿಸಿದ್ದಾರೆ. ಅಜ್ಜಿ ಬದುಕಿರುವವರೆಗೂ ದೇವಸ್ಥಾನಕ್ಕೆ ಬರ್ತಿದ್ದ ಭಕ್ತರು ಆಕೆಗೆ ಗೌರವ ನೀಡ್ತಾಯಿದರಂತೆ. ಹಣದ ಜತೆಗೆ ಬಟ್ಟೆ ಹಾಗೂ ಆಹಾರ ಕೂಡ ನೀಡುತ್ತಿದ್ದರಂತೆ.
ಅಜ್ಜಿ ಬದುಕಿರುವಾಗ ನಿತ್ಯ ಭಿಕ್ಷೆ ಬೇಡಿ ಬಂದ ಹಣವನ್ನ ಬ್ಯಾಂಕ್‌ನಲ್ಲಿ ಸಂಗ್ರಹಿಸಿಡುವ ಬಗ್ಗೆ ದೇವಾಲಯದಲ್ಲಿರುವ ಬಹುತೇಕರಿಗೆ ಮೊದಲೇ ತಿಳಿದಿತ್ತು ಅರ್ಚಕರೊಬ್ಬರು ತಿಳಿಸಿದ್ದಾರೆ. ಇರುವರೆಗೂ ಭಿಕ್ಷೆ ಬೇಡಿ ಬಂದ ಹಣ ಸಂಗ್ರಹಿಸಿ, ದೇಶದ ಸೈನಿಕರೊಳಿತಿಗಾಗಿ ಅದೇ ಹಣವನ್ನ ನೀಡಿರೋ ಅಜ್ಜಿಯ ಜೀವನ ನಿಜಕ್ಕೂ ಸಾರ್ಥಕತೆವಾಗಿದೆ. ಈಗ ಹಣ ಯೋಧರ ಕುಟುಂಬಕ್ಕೆ ಸೇರಿದ್ಮೇಲೆ ಅಜ್ಜಿಯ ಆತ್ಮಕ್ಕೆ ಶಾಂತಿ ಸಿಕ್ಕೇ ಸಿಕ್ಕಿರುತ್ತೆ.