ETV Bharat / bharat

ಬೆಗ್ಗರ್​ ಅಲ್ಲ ಕುಬೇರ..  ಭಿಕ್ಷುಕನ ಬಳಿ ಪತ್ತೆಯಾಯ್ತು 2 ಲಕ್ಷ ರೂ. ನಗದು, 12 ಅಂಗಿಗಳು! - ಕರ್ನೂಲ್​ನಲ್ಲಿ ಭಿಕ್ಷುಕ

ಮಸೀದಿಯೊಂದರ ಬಳಿ ಪತ್ತೆಯಾದ ಭಿಕ್ಷುಕನ ಬಳಿ 2 ಲಕ್ಷ ನಗದು ಹಾಗೂ 12 ಅಂಗಿಗಳು ಪತ್ತೆಯಾದ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ.

Beggar
ಭಿಕ್ಷುಕ
author img

By

Published : Jun 2, 2020, 7:39 AM IST

ಕರ್ನೂಲ್​(ಆಂಧ್ರಪ್ರದೇಶ): ಮಸೀದಿಯೊಂದರ ಬಳಿ ಇದ್ದ ಭಿಕ್ಷುಕನ ಬಳಿ ಎರಡು ಲಕ್ಷ ರೂಪಾಯಿ ನಗದು ಪತ್ತೆಯಾದ ಘಟನೆ ಕರ್ನೂಲ್​ ಜಿಲ್ಲೆಯ ಧೋಣ್​​​ ಬಳಿ ನಡೆದಿದೆ. ಶೋಚನೀಯ ಸ್ಥಿತಿಯಲ್ಲಿದ್ದ ಈ ಭಿಕ್ಷುಕನನ್ನು ಶ್ರೀನು ಎಂದು ಗುರುತಿಸಲಾಗಿದ್ದು, ಆತನನ್ನು ಸ್ಥಳೀಯರು ಪೊಲೀಸರಿಗೆ ಒಪ್ಪಿಸಿದ್ದಾರೆ.

ಈ ವ್ಯಕ್ತಿ ತೆಲಂಗಾಣದ ಮೆಹಬೂಬ್​ ನಗರಕ್ಕೆ ಸೇರಿದವನೆಂದು ಧೋಣ್​ನ ಸರ್ಕಲ್​ ಇನ್ಸ್​ಪೆಕ್ಟರ್​ ಸ್ಪಷ್ಟಪಡಿಸಿದ್ದಾರೆ. ಈತನ ಬಳಿಯಿದ್ದ ನಗದು ಹಣದಲ್ಲಿ 11 ಸಾವಿರ ರೂಪಾಯಿ ಹಳೆಯ ನೋಟುಗಳು ಹಾಗೂ 1.25 ಲಕ್ಷ ರೂಪಾಯಿ ಹೊಸ ನೋಟುಗಳು ಕಂಡುಬಂದಿವೆ. ಇದರ ಜೊತೆಗೆ 12 ಅಂಗಿಗಳು ಕೂಡಾ ಪತ್ತೆಯಾಗಿದ್ದು, ಪೊಲೀಸರಲ್ಲಿ ಅಚ್ಚರಿ ಮೂಡಿಸಿದೆ.

ಈ ವ್ಯಕ್ತಿಯನ್ನು ಈಗ ಪೊಲೀಸರು ರಕ್ಷಣೆ ಮಾಡಿದ್ದು, ತುಂಬಾ ವರ್ಷಗಳಿಂದ ಭಿಕ್ಷೆ ಬೇಡುತ್ತಿದ್ದ ಎಂದು ತಿಳಿದುಬಂದಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.