ಬೆಂಗಳೂರು: ಪೌರತ್ವ ತಿದ್ದುಪಡಿ ಕಾಯ್ದೆ ವಿಚಾರವಾಗಿ ರಾಜ್ಯದಲ್ಲೂ ಆಕ್ರೋಶ ಭುಗಿಲೆದ್ದಿದ್ದು, ಮಂಗಳೂರು, ಕಲಬುರುಗಿ ಸೇರಿದಂತೆ ಕೆಲವೊಂದು ಪ್ರಮುಖ ನಗರಗಳಲ್ಲಿ ಪ್ರತಿಭಟನಾಕಾರರು ರಸ್ತೆಗೆ ಇಳಿದು ತಮ್ಮ ಆಕ್ರೋಶ ಹೊರಹಾಕುತ್ತಿದ್ದಾರೆ.
ಇದೀಗ ಇದೇ ವಿಷಯಕ್ಕೆ ಸಂಬಂಧಿಸಿದಂತೆ ರಾಜ್ಯ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಮಾತನಾಡಿದ್ದು, ನಿನ್ನೆ ಪಕ್ಕದ ರಾಜ್ಯಗಳಿಂದ ಅನೇಕ ಜನರು ಬಂದಿದ್ದು, ಅವರಿಂದ ಕೆಲವೊಂದು ಪ್ರದೇಶಗಳಲ್ಲಿ ಹಿಂಸಾಚಾರದಂತಹ ಕೃತ್ಯ ನಡೆದಿವೆ. ಎಲ್ಲಡೆ ಇಂದು ಪರಿಸ್ಥಿತಿ ಶಾಂತವಾಗಿದ್ದು, ಎಲ್ಲವೂ ಪೊಲೀಸರ ನಿಯಂತ್ರಣದಲ್ಲಿದೆ. ನಾವು ಅಲ್ಪಸಂಖ್ಯಾತ ಸಮುದಾಯದ ಜನರೊಂದಿಗೆ ಮಾತುಕತೆ ನಡೆಸುತ್ತಿದ್ದೇವೆ ಎಂದು ಹೇಳಿಕೆ ನೀಡಿದ್ದಾರೆ.
-
Basavaraj Bommai, Karnataka Home Minister on reports that two Kerala journalists detained by Police in Mangaluru: Journalists have not been arrested, they had come from Kerala, they have been sent back. #CitizenshipAct https://t.co/zHbRQO36NJ pic.twitter.com/7HomN51m0B
— ANI (@ANI) December 20, 2019 " class="align-text-top noRightClick twitterSection" data="
">Basavaraj Bommai, Karnataka Home Minister on reports that two Kerala journalists detained by Police in Mangaluru: Journalists have not been arrested, they had come from Kerala, they have been sent back. #CitizenshipAct https://t.co/zHbRQO36NJ pic.twitter.com/7HomN51m0B
— ANI (@ANI) December 20, 2019Basavaraj Bommai, Karnataka Home Minister on reports that two Kerala journalists detained by Police in Mangaluru: Journalists have not been arrested, they had come from Kerala, they have been sent back. #CitizenshipAct https://t.co/zHbRQO36NJ pic.twitter.com/7HomN51m0B
— ANI (@ANI) December 20, 2019
ಮಂಗಳೂರು ನಗರದಲ್ಲಿ ಕರ್ಫ್ಯೂ ವಿಧಿಸಿರುವ ಹಿನ್ನೆಲೆ ಗುರುತಿನ ಚೀಟಿ ಇಲ್ಲದೆ ವೆನ್ಲಾಕ್ ಆಸ್ಪತ್ರೆ ಶವಾಗಾರಕ್ಕೆ ಬಂದಿದ್ದ ಪತ್ರಕರ್ತರನ್ನ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದರು ಎಂಬ ಮಾಹಿತಿಗೆ ಸಂಬಂಧಿಸಿದಂತೆ ಮಾತನಾಡಿರುವ ಬೊಮ್ಮಾಯಿ, ಅವರನ್ನ ಬಂಧನ ಮಾಡಿಲ್ಲ. ವಶಕ್ಕೆ ಪಡೆದುಕೊಳ್ಳಲಾಗಿತ್ತು. ಅವರು ಕೇರಳದಿಂದ ಬಂದಿದ್ದ ಕಾರಣ ವಶಕ್ಕೆ ಪಡೆದುಕೊಂಡು ಈಗಾಗಲೇ ರಿಲೀಸ್ ಮಾಡಿ ವಾಪಸ್ ಕಳುಹಿಸಲಾಗಿದೆ ಎಂದು ತಿಳಿಸಿದ್ದಾರೆ.