ಬರೈಲಿ(ಉತ್ತರ ಪ್ರದೇಶ): ರಾಜ್ಯದಲ್ಲೇ ಪ್ರಥಮವೆಂಬಂತೆ, ಬರೇಲಿಯ ಮಹಾತ್ಮಾ ಜ್ಯೋತಿ ಬಾಫುಲೆ ರೋಹಿಲ್ಖಂಡ್ ವಿಶ್ವವಿದ್ಯಾನಿಲಯವು ತ್ರಿವಳಿ ತಲಾಖ್ ಕಾನೂನನ್ನು ವಿವಿಯ ಎಲ್ಎಲ್ಬಿ ಹಾಗೂ ಎಲ್ಎಲ್ಎಮ್ ಸಿಲೆಬಸ್ನಲ್ಲಿ ಸೇರಿಸಿಕೊಂಡಿದೆ.
ಕಳೆದ ಸೆಪ್ಟೆಂಬರ್ 11ರಂದು ನಮ್ಮ ವಿವಿಯ ಎಲ್ಎಲ್ಬಿ ಹಾಗೂ ಎಲ್ಎಲ್ಎಮ್ ಪಠ್ಯಕ್ರಮವನ್ನು ಪರಿಷ್ಕರಿಸಿದ್ದೇವೆ. ಇದರಲ್ಲಿ ಮುಸ್ಲಿಂ ಮಹಿಳೆಯರ (ವಿವಾಹದ ಹಕ್ಕುಗಳ ರಕ್ಷಣೆ) ಕಾಯ್ದೆ 2019ನ್ನು ಸೇರಿಸಿದ್ದೇವೆ. ಈ ಕಾನೂನನ್ನು ಪಠ್ಯ ಕ್ರಮದಲ್ಲಿ ಅಳವಡಿಸಿದ ರಾಜ್ಯದ ಮೊದಲ ವಿವಿ ನಮ್ಮದು ಎಂದು ವಿವಿಯ ಕಾನೂನು ವಿಭಾಗದ ಮುಖ್ಯಸ್ಥ ಅಮಿತ್ ಸಿಂಗ್ ತಿಳಿಸಿದ್ದಾರೆ.
ಹೊಸ ಪಠ್ಯಕ್ರಮಕ್ಕೆ ಉತ್ತಮ ಸಹಕಾರ ಸಿಗುವ ನಿರೀಕ್ಷೆ ಇದೆ. ಈ ಕಾನೂನಿನ ಅಳವಡಿಕೆಯಿಂದ ನಮ್ಮ ವಿದ್ಯಾರ್ಥಿಗಳಿಗೆ ಕೇಸ್ ಸ್ಟಡಿ(ವಿವಿಧ ಪ್ರಕರಣಗಳ ಅಧ್ಯಯನ)ಯನ್ನು ಮಾಡಲು ಅವಕಾಶ ಕಲ್ಪಿಸಲಾಗುತ್ತದೆ. ಈ ಮೂಲಕ ಅವರು ಉತ್ತಮ ವಕೀಲರಾಗಿ ಜನರಿಗೆ ಸಹಾಯ ಮಾಡಬಹುದು ಎಂದು ಅಮಿತ್ ಸಿಂಗ್ ಭರವಸೆ ವ್ಯಕ್ತಪಡಿಸಿದ್ದಾರೆ.
ಇನ್ನೊಂದೆಡೆ ವಿವಿಯ ಓರ್ವ ವಿದ್ಯಾರ್ಥಿಯು ತ್ರಿಪಲ್ ತಲಾಖ್ ವಿಚಾರದಲ್ಲೇ ಡಾಕ್ಟರೇಟ್ ಮಾಡುತ್ತಿದ್ದಾರಂತೆ. ಅಲ್ಲದೆ ವಿವಿಯ ವಿದ್ಯಾರ್ಥಿಗಳು ಬದಲಾದ ಪಠ್ಯಕ್ರಮವನ್ನು ಓದಲು ಕಾತರರಾಗಿದ್ದಾರಂತೆ.