ETV Bharat / bharat

ದೆಹಲಿಯಲ್ಲಿ ಸಲೂನ್​ಗಳು ಓಪನ್​, ಸ್ಪಾ ತೆರೆಯುವಂತಿಲ್ಲ.. ಸಿಎಂ ಅರವಿಂದ್ ಕೇಜ್ರಿವಾಲ್ - ವಾಹನಗಳಲ್ಲಿ ಪ್ರಯಾಣಿಸುವ ವ್ಯಕ್ತಿಗಳ ಸಂಖ್ಯೆಗೆ ಯಾವುದೇ ನಿರ್ಬಂಧಗಳಿಲ್ಲ

ಆರ್ಥಿಕತೆಯ ದೃಷ್ಟಿಯಿಂದ ಹಂತ ಹಂತವಾಗಿ ಲಾಕ್​ಡೌನ್​ ಸಡಿಲಿಕೆ ಮಾಡಲು ಕೇಂದ್ರ ಸರ್ಕಾರ ಶನಿವಾರ ಸೂಚಿಸಿತ್ತು. ಅದರಂತೆ ದೆಹಲಿ ಸರ್ಕಾರ ಲಾಕ್​ಡೌನ್​ ಸಡಿಲಿಕೆ ಮಾಡುತ್ತಿದೆ.

ಸಲೂನ್​ಗಳನ್ನು ತೆರೆಯಲು ಅನುಮತಿ
ಸಲೂನ್​ಗಳನ್ನು ತೆರೆಯಲು ಅನುಮತಿ
author img

By

Published : Jun 1, 2020, 7:20 PM IST

ನವದೆಹಲಿ : ರಾಷ್ಟ್ರರಾಜಧಾನಿಯಲ್ಲಿ ಲಾಕ್​ಡೌನ್​ ಸಡಿಲಿಕೆ ಮಾಡಲು ಸರ್ಕಾರ ನಿರ್ಧರಿಸಿದೆ. ಸಲೂನ್​ಗಳನ್ನು ತೆರೆಯಲು ಅನುಮತಿ ನೀಡಿದೆ. ಆದರೆ, ಸ್ಪಾ ತೆರೆಯುವಂತಿಲ್ಲ ಎಂದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸೋಮವಾರ ಹೇಳಿದ್ದಾರೆ.

ನಗರದಲ್ಲಿ ನಾಲ್ಕು ಚಕ್ರ, ದ್ವಿಚಕ್ರ ವಾಹನ, ಆಟೋರಿಕ್ಷಾಗಳು, ಇ-ರಿಕ್ಷಾಗಳು ಮತ್ತು ಇತರ ವಾಹನಗಳಲ್ಲಿ ಪ್ರಯಾಣಿಸುವ ವ್ಯಕ್ತಿಗಳ ಸಂಖ್ಯೆಗೆ ಯಾವುದೇ ನಿರ್ಬಂಧಗಳಿಲ್ಲ. ಈ ಹಿಂದೆ ಇದಕ್ಕೆ ನಿರ್ಬಂಧ ಹೇರಲಾಗಿದ್ದು, ಅದನ್ನು ಈಗ ತೆರವುಗೊಳಿಸಲಾಗಿದೆ.

ಆರ್ಥಿಕತೆಯ ದೃಷ್ಟಿಯಿಂದ ಹಂತ ಹಂತವಾಗಿ ಲಾಕ್​ಡೌನ್​ ಸಡಿಲಿಕೆ ಮಾಡಲು ಕೇಂದ್ರ ಸರ್ಕಾರ ಶನಿವಾರ ಸೂಚಿಸಿತ್ತು. ಅದರಂತೆ ದೆಹಲಿ ಸರ್ಕಾರ ಲಾಕ್​ಡೌನ್​ ಸಡಿಲಿಕೆ ಮಾಡುತ್ತಿದೆ ಎಂದರು.

  • In autos, e-rickshaws and other vehicles, as per earlier orders, the number of passengers was fixed. But now we are lifting the restrictions on the number of passengers travelling in auto, e-rickshaws and other vehicles: Delhi CM Arvind Kejriwal pic.twitter.com/oNukPNXAXT

    — ANI (@ANI) June 1, 2020 " class="align-text-top noRightClick twitterSection" data=" ">

ಈವರೆಗೆ ಮಾರುಕಟ್ಟೆ, ಅಂಗಡಿಗಳನ್ನು ಬೆಸ-ಸಮ ಆಧಾರದ ಮೇಲೆ ತೆರೆಯಲು ಅನುಮತಿಸಲಾಗುತ್ತಿದೆ ಎಂದರು. ಈಗ ನಗರದ ಎಲ್ಲಾ ಅಂಗಡಿಗಳಿಗೆ ಕಾರ್ಯನಿರ್ವಹಿಸಲು ಅನುಮತಿ ನೀಡಲಾಗುವುದು ಎಂದು ತಿಳಿಸಿದ್ದಾರೆ.

ರಾಷ್ಟ್ರ ರಾಜಧಾನಿಯಲ್ಲಿ ಕೈಗಾರಿಕೆಗಳ ಕಾರ್ಯನಿರ್ವಹಣೆಗೆ ಯಾವುದೇ ನಿರ್ಬಂಧಗಳಿಲ್ಲ ಎಂದು ಇದೇ ವೇಳೆ ಮುಖ್ಯಮಂತ್ರಿಗಳು ಸ್ಪಷ್ಟಪಡಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.