ETV Bharat / bharat

ಸತ್ತ ವ್ಯಕ್ತಿ ಮೇಲೆದ್ದು ಬಂದು ಕೋರ್ಟ್‌ಗೆ ಹಾಜರಾಗುವುದುಂಟೇ? ಉತ್ತರ ಪ್ರದೇಶ ಪೊಲೀಸರ ಯಡವಟ್ಟು!

ಸಿಎಎ ವಿರೋಧಿ ಪ್ರತಿಭಟನೆ ಹಿನ್ನೆಲೆ ಫಿರೋಜಾಬಾದ್‌ ಜಿಲ್ಲೆಯಲ್ಲಿ ಶಾಂತಿ, ಸುವ್ಯವಸ್ಥೆ ಕಾಪಾಡುವ ಸಲುವಾಗಿ ಉತ್ತರ ಪ್ರದೇಶ ಪೊಲೀಸರು ಗಲಭೆಗೆ ಕಾರಣರಾದವರ ವಿರುದ್ಧ ಕ್ರಮ ತೆಗೆದುಕೊಳ್ಳಲು ಮುಂದಾಗಿದ್ದಾರೆ. ಈ ಸಂಬಂಧ ಆರು ವರ್ಷಗಳ ಹಿಂದೆ ನಿಧನರಾದ ವ್ಯಕ್ತಿಗೆ ನೋಟಿಸ್ ಕಳುಹಿಸಿರುವ ಪೊಲೀಸರು ಸಿಟಿ ಮ್ಯಾಜಿಸ್ಟ್ರೇಟ್ ಕೋರ್ಟ್​ ಮುಂದೆ ಹಾಜರಾಗುವಂತೆ ಸೂಚಿಸಿದ್ದಾರೆ.

up police issued notice to the name of the deceased
ಉತ್ತರ ಪ್ರದೇಶ ಪೊಲೀಸ್​​
author img

By

Published : Jan 3, 2020, 10:43 AM IST

ಫಿರೋಜಾಬಾದ್: ಪೌರತ್ವ (ತಿದ್ದುಪಡಿ) ಕಾಯ್ದೆ ವಿರುದ್ಧ ಹಿಂಸಾತ್ಮಕ ಪ್ರತಿಭಟನೆ ನಡೆಸಿದವರ ವಿರುದ್ಧ ಕ್ರಮ ಕೈಗೊಳ್ಳುವ ಭರದಲ್ಲಿರುವ ಉತ್ತರ ಪ್ರದೇಶ ಪೊಲೀಸರು ಯಡವಟ್ಟು ಮಾಡಿಕೊಂಡಿದ್ದಾರೆ.

ಸಿಎಎ ವಿರೋಧಿ ಪ್ರತಿಭಟನೆ ಹಿನ್ನೆಲೆ ಫಿರೋಜಾಬಾದ್‌ ಜಿಲ್ಲೆಯಲ್ಲಿ ಶಾಂತಿ, ಸುವ್ಯವಸ್ಥೆ ಕಾಪಾಡುವ ಸಲುವಾಗಿ ಉತ್ತರ ಪ್ರದೇಶ ಪೊಲೀಸರು ಗಲಭೆಗೆ ಕಾರಣರಾದವರ ವಿರುದ್ಧ ಕ್ರಮ ತೆಗೆದುಕೊಳ್ಳಲು ಮುಂದಾಗಿದ್ದಾರೆ. ಈ ಸಂಬಂಧ 200 ಜನರನ್ನು ಗುರುತಿಸಿ ಅವರಿಗೆ ನೋಟಿಸ್ ಕಳುಹಿಸಿದ್ದರು. ಆದರೆ ಈ ಪೈಕಿ 6 ವರ್ಷಗಳ ಹಿಂದೆ ನಿಧನರಾದ ಬನ್ನೆ ಖಾನ್ ಎಂಬವರ ಹೆಸರೂ ಇದೆ!

ಬನ್ನೆ ಖಾನ್​ಗೆ ನೋಟಿಸ್​ ಕಳುಹಿಸಿರುವ ಪೊಲೀಸರು, ಸಿಟಿ ಮ್ಯಾಜಿಸ್ಟ್ರೇಟ್ ಕೋರ್ಟ್​ ಮುಂದೆ ಬನ್ನೆ ಖಾನ್ ಹಾಜರಾಗಬೇಕು ಹಾಗು 10 ಲಕ್ಷ ರೂ.ಗಳ ಬಾಂಡ್ ತುಂಬುವ ಮೂಲಕ ಜಾಮೀನು ತೆಗೆದುಕೊಳ್ಳಬೇಕಾಗುತ್ತದೆ ಎಂದು ಸೂಚಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಎಸ್ಪಿ ಪಟೇಲ್, ನಮ್ಮಿಂದ ತಪ್ಪಾಗಿದೆ. ಈ ಬಗ್ಗೆ ತನಿಖೆ ನಡೆಸಲು ಹಾಗೂ ತಪ್ಪಾಗಿ ಪಟ್ಟಿ ಮಾಡಲಾದ ಹೆಸರುಗಳನ್ನು ತೆಗೆದುಹಾಕಲು ಸಿಒ (ನಗರ) ಅವರಿಗೆ ಸೂಚಿಸಲಾಗಿದೆ ಎಂದು ಸ್ಪಷ್ಟನೆ ಕೊಟ್ಟರು.

Intro:Body:

gfdgdfgd

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.