ETV Bharat / bharat

ರೈತರಿಗೆ ನಮ್ಮ ಬೆಂಬಲವಿದೆ, ಬಂದ್‌ನಲ್ಲಿ ಭಾಗವಹಿಸುವುದಿಲ್ಲ: ಬ್ಯಾಂಕುಗಳ ಒಕ್ಕೂಟ

ಅಖಿಲ ಭಾರತ ಬ್ಯಾಂಕ್ ಅಧಿಕಾರಿಗಳ ಒಕ್ಕೂಟದ (ಎಐಬಿಒಸಿ) ಪ್ರಧಾನ ಕಾರ್ಯದರ್ಶಿ ಸೌಮ್ಯಾ ದತ್ತಾ ಮಾತನಾಡಿ, "ಒಕ್ಕೂಟವು ರೈತರೊಂದಿಗಿದೆ. ಆದರೆ ಭಾರತ್ ಬಂದ್‌ನಲ್ಲಿ ಭಾಗವಹಿಸುವುದಿಲ್ಲ" ಎಂದಿದ್ದಾರೆ.

ಎಐಬಿಒಸಿ
ಎಐಬಿಒಸಿ
author img

By

Published : Dec 8, 2020, 10:23 AM IST

ನವದೆಹಲಿ: ನೂತನ ಕೃಷಿ ಕಾಯ್ದೆಗಳ ವಿರುದ್ಧ ರೈತರು ಪ್ರತಿಭಟನೆ ನಡೆಸುತ್ತಿದ್ದು, ವಿವಿಧ ಸಂಘಟನೆಗಳು ಬೆಂಬಲ ನೀಡಿವೆ. ಆದರೆ ಬ್ಯಾಂಕ್‌ಗಳ ಒಕ್ಕೂಟ ಮಾತ್ರ ಭಾರತ ಬಂದ್​ನಲ್ಲಿ ಭಾಗವಹಿಸುವುದಿಲ್ಲ ಎಂದು ತಿಳಿಸಿದೆ.

ಈ ಬಗ್ಗೆ ಅಖಿಲ ಭಾರತ ಬ್ಯಾಂಕ್ ಅಧಿಕಾರಿಗಳ ಒಕ್ಕೂಟದ (ಎಐಬಿಒಸಿ) ಪ್ರಧಾನ ಕಾರ್ಯದರ್ಶಿ ಸೌಮ್ಯಾ ದತ್ತಾ ಮಾತನಾಡಿ, "ಒಕ್ಕೂಟವು ರೈತರೊಂದಿಗಿದೆ. ಆದರೆ ಭಾರತ್ ಬಂದ್‌ನಲ್ಲಿ ಭಾಗವಹಿಸುವುದಿಲ್ಲ" ಎಂದಿದ್ದಾರೆ.

ಓದಿ: ರೈತರ ಪ್ರತಿಭಟನೆಗೆ ಬೆಂಬಲ: ಹುಟ್ಟುಹಬ್ಬ ಆಚರಿಸದಿರಲು ಸೋನಿಯಾ ನಿರ್ಧಾರ

ಒಕ್ಕೂಟದ ಮತ್ತೋರ್ವ ಪ್ರಧಾನ ಕಾರ್ಯದರ್ಶಿ ಸಿ.ಹೆಚ್ ವೆಂಕಟಾಚಲಂ ಪ್ರತಿಕ್ರಿಯಿಸಿ, "ಒಕ್ಕೂಟ ಮುಷ್ಕರ ನಡೆಸುವುದಿಲ್ಲ ಅಥವಾ ಕೆಲಸದಿಂದ ದೂರವಿರುವುದಿಲ್ಲ. ಆದರೆ ರೈತರ ಆಂದೋಲನವನ್ನು ಬೆಂಬಲಿಸುತ್ತದೆ. ಯೂನಿಯನ್ ಸದಸ್ಯರು ಕರ್ತವ್ಯದಲ್ಲಿರುವಾಗ ಕಪ್ಪು ಬ್ಯಾಡ್ಜ್ ಧರಿಸುತ್ತಾರೆ. ಕೆಲಸದ ನಂತರ ಅಥವಾ ಮೊದಲು ಪ್ರತಿಭಟನೆ ನಡೆಸುತ್ತಾರೆ. ದೇಶದ ರೈತರ ಉದ್ದೇಶವನ್ನು ಬೆಂಬಲಿಸಲು ಬ್ಯಾಂಕ್ ಶಾಖೆಗಳ ಮುಂದೆ ಫಲಕಗಳನ್ನು ಪ್ರದರ್ಶಿಸಲಾಗುತ್ತದೆ" ಎಂದು ಹೇಳಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.