ETV Bharat / bharat

ಎಂಡಿಎಂಎ ಡ್ರಗ್ಸ್​ ಪ್ರಕರಣ: ಆರೋಪಿಗಳ ಬ್ಯಾಂಕ್ ಖಾತೆ ತನಿಖೆ

ಎಂಡಿಎಂಎ ಡ್ರಗ್ಸ್ ಪ್ರಕರಣದಲ್ಲಿ ಇಂದೋರ್ ಅಪರಾಧ ವಿಭಾಗದ ತಂಡ ಆರೋಪಿಗಳ ಅಕ್ರಮ ಆಸ್ತಿ ಮತ್ತು ಬ್ಯಾಂಕ್ ಖಾತೆಗಳ ಬಗ್ಗೆ ತನಿಖೆ ನಡೆಸುತ್ತಿದೆ. ಬಂಧಿತರಲ್ಲಿ ಪ್ರಮುಖ ಆರೋಪಿ, ಹೈದರಾಬಾದ್‌ನ ಜಲ್ವಾಯ್ ವಿಹಾರ್​ನ ನಿವಾಸಿ ವೇದ ಪ್ರಕಾಶ್ ವ್ಯಾಸ್, ಫಾರ್ಮಾ ಕಾರ್ಖಾನೆಯನ್ನು ಹೊಂದಿದ್ದು, ಅಲ್ಲಿ ಡ್ರಗ್ಸ್​ ತಯಾರಿಸಲಾಗಿದೆ ಎಂದು ಹೇಳಲಾಗಿದೆ.

Bank accounts of accused in Indore MDMA case being investigated
ಎಂಡಿಎಂಎ ಡ್ರಗ್ಸ್​ ಪ್ರಕರಣ
author img

By

Published : Feb 10, 2021, 1:11 PM IST

ಇಂದೋರ್: ಎಂಡಿಎಂಎ ಡ್ರಗ್ಸ್ ಪ್ರಕರಣದಲ್ಲಿ ಇಂದೋರ್ ಅಪರಾಧ ವಿಭಾಗದ ತಂಡ ಆರೋಪಿಗಳ ಅಕ್ರಮ ಆಸ್ತಿ ಮತ್ತು ಬ್ಯಾಂಕ್ ಖಾತೆಗಳ ಬಗ್ಗೆ ತನಿಖೆ ನಡೆಸುತ್ತಿದೆ.

ಹೈದರಾಬಾದ್‌ನಲ್ಲಿ ಔಷಧ ಉತ್ಪಾದನಾ ಘಟಕವನ್ನು ನಡೆಸುತ್ತಿರುವ ವೇದ ವೇದಪ್ರಕಾಶ್ ವ್ಯಾಸ್ (50) ಅವರ ಆರ್ಥಿಕ ಗಳಿಕೆಯ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈ ಪ್ರಕರಣದಲ್ಲಿ ಇಂದೋರ್ ಮೂಲದ ದಿನೇಶ್ ಅಗ್ರವಾಲ್ (55), ಅಕ್ಷಯ್ ಅಗ್ರವಾಲ್ (30) ಮತ್ತು ಚಿಮನ್ ಅಗ್ರವಾಲ್ (38) ಅವರೊಂದಿಗೆ ಬಂಧಿಸಲಾಗಿರುವ ವೇದಪ್ರಕಾಶ್ ವ್ಯಾಸ್ ಅವರ ಚಾಲಕ ಮಂಗಿ ವೆಂಕಟೇಶ್ (39) ಅವರ ಆರ್ಥಿಕ ಗಳಿಕೆಯ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಬಂಧಿತರಲ್ಲಿ ಪ್ರಮುಖ ಆರೋಪಿ, ಹೈದರಾಬಾದ್‌ನ ಜಲ್ವಾಯ್ ವಿಹಾರ್​ನ ನಿವಾಸಿ ವೇದ ಪ್ರಕಾಶ್ ವ್ಯಾಸ್, ಫಾರ್ಮಾ ಕಾರ್ಖಾನೆಯನ್ನು ಹೊಂದಿದ್ದು, ಅಲ್ಲಿ ಡ್ರಗ್ಸ್​ ತಯಾರಿಸಲಾಗಿದೆ ಎಂದು ಹೇಳಲಾಗಿದೆ.

ಇದನ್ನೂ ಓದಿ: ಎಂಡಿಎಂಎ ಡ್ರಗ್ಸ್​ ಪ್ರಕರಣ: ಹೈದರಾಬಾದ್​ನ ಫಾರ್ಮಾ ಕಾರ್ಖಾನೆ ಮೇಲೆ ಅಪರಾಧ ವಿಭಾಗ ದಾಳಿ

ಜನವರಿಯಲ್ಲಿ ಹೈದರಾಬಾದ್‌ನ ಜಲ್ವಾಯ್ ವಿಹಾರ್ ನಿವಾಸಿ ವೇದ ಪ್ರಕಾಶ್ ವ್ಯಾಸ್ ಅವರ ವಿವಿಧ ಕಂಪನಿಗಳು ಮತ್ತು ಇತರ ಸ್ಥಳಗಳಲ್ಲಿ ಸಿಸಿಬಿ ದಾಳಿ ನಡೆಸಿತ್ತು. ವ್ಯಾಸ್‌ನ ಔಷಧಾಲಯಗಳಲ್ಲಿ ಒಂದು ವಿಶೇಷ ರಾಸಾಯನಿಕ ಬಳಸಿ ಪಾರ್ಟಿ ಡ್ರಗ್ಸ್ ತಯಾರಿಸಿ ದಕ್ಷಿಣ ಆಫ್ರಿಕಾಕ್ಕೆ ರಫ್ತು ಮಾಡಲಾಗುತ್ತಿತ್ತು ಎಂದು ಆರೋಪಿಸಲಾಗಿದೆ.

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.