ಸತತ ಮೂರನೇ ಬಾರಿಗೆ ಬಾಂಗ್ಲಾ ದೇಶದ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಶೇಖ್ ಹಸೀನಾ ಅಕ್ಟೋಬರ್ 3 ಭಾರತಕ್ಕೆ ಆಗಮಿಸುತ್ತಿದ್ದಾರೆ. ದೆಹಲಿಯಲ್ಲಿ ನಡೆಯಲಿರುವ ಆರ್ಥಿಕ ಶೃಂಗಸಭೆಯಲ್ಲಿ ಭಾಗವಹಿಸಲಿರುವ ಅವರು, ದ್ವಿಪಕ್ಷೀಯ ಹಾಗೂ ಪ್ರಾದೇಶಿಕ ವಿಷಯಗಳ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಚರ್ಚಿಸಲಿದ್ದಾರೆ.
ವಿಶ್ವಸಂಸ್ಥೆಯ 74ನೇ ಸಾಮಾನ್ಯ ಸಭೆಯಲ್ಲಿ ಪ್ರಧಾನಿ ಮೋದಿ ಅವರೊಂದಿಗೆ ಮಾತನಾಡಿ, ರಾಷ್ಟ್ರೀಯ ಪೌರತ್ವ ನೋಂದಣಿ ಕುರಿತು ಬಾಂಗ್ಲಾದೇಶದ ಕಾಳಜಿಯನ್ನು ಪ್ರಸ್ತಾಪಿಸಿದ್ದರು. ಬಾಂಗ್ಲಾ ವಿದೇಶಾಂಗ ಸಚಿವ ಅಬ್ದುಲ್ ಮೊಮೆನ್, ಮೋದಿಯವರು ನಮ್ಮ ದೇಶದ ಕಾಳಜಿಯನ್ನು ಸ್ನೇಹಪರವಾಗಿ ದ್ವಿಪಕ್ಷೀಯ ಸಂಬಂಧಗಳತ್ತ ದೃಷ್ಟಿಹಾಯಿಸಲಿದ್ದಾರೆ ಎಂಬ ಭರವಸೆ ವ್ಯಕ್ತಪಡಿಸಿದ್ದರು ಎಂದಿದ್ದಾರೆ. ಈ ಸಭೆಯ ಬಳಿಕ ಬಿಡುಗಡೆಯಾದ ಭಾರತೀಯ ವಿದೇಶಾಂಗ ಸಚಿವಾಲಯದ ಔಪಚಾರಿಕ ಹೇಳಿಕೆಯಲ್ಲಿ ಎನ್‌ಆರ್‌ಸಿ ವಿಷಯ ಉಲ್ಲೇಖಿಸಿರಲಿಲ್ಲ.
ದೆಹಲಿಯ ಆಶ್ವಾಸನೆಗಳ ಹೊರತಾಗಿಯೂ ಎನ್‌ಆರ್‌ಸಿ ಸುತ್ತಲ್ಲೂ ಮುತ್ತುಕೊಂಡಿರುವ ದೇಶಿ ರಾಜಕಾರಣ, ಗೃಹ ಸಚಿವ ಅಮಿತ್ ಶಾ ಸೇರಿದಂತೆ ಬಿಜೆಪಿ ಮತ್ತು ಆರ್ಎಸ್ಎಸ್ನ ವರಿಷ್ಠರ ವಿವಾದಾತ್ಮಕ ಹೇಳಿಕೆಗಳು ಢಾಕಾವನ್ನು ಆತಂಕಕ್ಕೀಡಾಗುವಂತೆ ಮಾಡಿದೆ. ಗಡಿಪಾರಾಗಿ ಬಂದ ಅಕ್ರಮ ಬಾಂಗ್ಲಾ ವಲಸಿಗರ ಕುರಿತು ಅಮಿತ್ ಶಾ ಕಳೆದ ವರ್ಷ ‘ಟರ್ಮೈಟ್ಸ್’ (ಗೆದ್ದಲುಹುಳು) ಎಂಬ ಪದ ಬಳಸಿದ್ದಾರೆ ಎಂದು ಹೆಸರು ಹೇಳಲು ಇಚ್ಛಿಸದ ಬಾಂಗ್ಲಾ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಎನ್‌ಆರ್‌ಸಿ ಕುರಿತು ಬಾಂಗ್ಲಾ ಜನತೆ ಭಾರತ ಸರ್ಕಾರದಿಂದ ಸ್ಪಷ್ಟವಾದ ಹೇಳಿಕೆಯನ್ನು ನಿರೀಕ್ಷಿಸುತ್ತಿದ್ದಾರೆ. ಎನ್‌ಆರ್‌ಸಿ ಕುರಿತು ಹಸೀನಾ ಅವರಿಗೆ ಮೋದಿಯವರು ನೀಡಿದ ಸಕಾರಾತ್ಮಕ ಭರವಸೆಗಳ ತದ್ವಿರುದ್ಧವಾಗಿ ಗೃಹ ಸಚಿವ ಅಮಿತ್ ಶಾ ಋಣಾತ್ಮಕ ಹೇಳಿಕೆ ನೀಡಿದ್ದಾರೆ. ಶಾ ಅವರ ಹೇಳಿಕೆ ವಿಶ್ವಾಸಾರ್ಹತೆಗೆ ಪೂರಕವಾಗಿಲ್ಲ ಎಂದು ಢಾಕಾ ಮೂಲದ ಇನ್ಸ್ಟಿಟ್ಯೂಟ್ ಫಾರ್ ಪಾಲಿಸಿ, ಅಡ್ವೊಕಸಿ ಮತ್ತು ಗವರ್ನೆನ್ಸ್ (ಐಪಿಎಜಿ) ಅಧ್ಯಕ್ಷ ಸೈಯದ್ ಮುನೀರ್ ಖಸ್ರು ಅಭಿಪ್ರಾಯಪಟ್ಟಿದ್ದಾರೆ.
ಆಗಸ್ಟ್ 31ರಂದು ಪ್ರಕಟವಾದ ಎನ್‌ಆರ್‌ಸಿಯ ಅಂತಿಮ ಪಟ್ಟಿಯಲ್ಲಿ ಅಸ್ಸೋಂನಲ್ಲಿ ಸುಮಾರು 1.9 ಮಿಲಿಯನ್ ಜನರು ಅಸ್ಥಿರತೆಯಲ್ಲಿದ್ದು, ಗಡಿಪಾರಾಗುವ ಭೀತಿಯಲ್ಲಿದ್ದಾರೆ. ಜಮ್ಮು ಮತ್ತು ಕಾಶ್ಮೀರದ 370ನೇ ವಿಧಿ ರದ್ದತಿಯ ನಿಲುವಿನಂತೆ ಎನ್‌ಆರ್‌ಸಿಯನ್ನು ಭಾರತ ಆಂತರಿಕ ವಿಷಯವನ್ನಾಗಿ ಉಳಿಸಿಕೊಂಡಿದೆ. ಅನೇಕ ವಲಸಿಗರು ಬಾಂಗ್ಲಾಕ್ಕೆ ಮರಳಿದರೆ ಅವರಿಗೆ ಅಲ್ಲಿ ನೆಲೆ ಕಲ್ಪಿಸುವುದು ಆ ರಾಷ್ಟ್ರಕ್ಕೆ ಆತಂಕಕಾರಿಯಾಗಿದೆ. ಆರ್‌ಎಸ್‌ಎಸ್ ಮತ್ತು ಬಿಜೆಪಿಯ ರಾಜಕೀಯ ಹೇಳಿಕೆಗಳು ಆತಂಕಗಳನ್ನು ಹೆಚ್ಚಿಸಿದೆ ಎಂದು ಬಾಂಗ್ಲಾದಲ್ಲಿನ ಭಾರತದ ಮಾಜಿ ರಾಯಭಾರಿ ಪಿನಕ್ ಚಕ್ರವರ್ತಿ ಹೇಳಿದ್ದಾರೆ.
ನೆನಗುದಿಗೆ ಬಿದ್ದಿರುವ ಭಾರತ ಮತ್ತು ಬಾಂಗ್ಲಾದೇಶ ನಡುವಿನ ತೀಸ್ತಾ ನದಿ ನೀರು ಹಂಚಿಕೆ ಒಪ್ಪಂದಕ್ಕೆ ಮರು ಜೀವ ಬರುವ ಸಾಧ್ಯತೆಗಳೂ ಹೆಚ್ಚಿದೆ. ಮೋದಿ ಮತ್ತು ಹಸೀನಾ ತಮ್ಮ ಅವಧಿಯ ಅಂತ್ಯದ ವೇಳೆಗೆ ತೀಸ್ತಾ ನದಿ ವ್ಯಾಜ್ಯ ಪರಿಹರಿಸಬೇಕೆಂದು ಆಶಿಸಿದ್ದಾರೆ. ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು 2011ರ ಸೆಪ್ಟೆಂಬರ್‌ನಲ್ಲಿ ಬಾಂಗ್ಲಾದೇಶಕ್ಕೆ ಭೇಟಿ ನೀಡಿದಾಗ ತೀಸ್ತಾ ನದಿ ಒಪ್ಪಂದಕ್ಕೆ ಸಹಿ ಹಾಕಲು ಸಜ್ಜಾಗಿದ್ದರು. ಆದರೆ, ಈ ಯೋಜನೆಯ ಬಗ್ಗೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಆಕ್ಷೇಪಿಸಿದರು. ಈಗ ತೀಸ್ತಾ ನದಿ ನೀರು ಹಂಚಿಕೆಯು ರಾಜಕೀಯ ವಿರೋಧಿ ಭಾವನೆಯಾಗಿ ಉಳಿದಿದೆ. ಹಸೀನಾ ಅವರು ಬಾಂಗ್ಲಾದಲ್ಲಿ ಬೇರೂರಿದ್ದ ಭಾರತ ವಿರೋಧಿ ಬಂಡಾಯ ಮತ್ತು ಉಗ್ರ ಸಂಘಟನೆಗಳನ್ನು ಕಿತ್ತು ಹಾಕಿದ್ದಾರೆ. ಇಂಡೋ-ಬಾಂಗ್ಲಾ ಗಡಿಯಲ್ಲಿ ಶಾಂತಿ ಮತ್ತು ಸ್ಥಿರತೆಯ ದೀರ್ಘಾವಧಿಯ ಸಂಬಂಧಕ್ಕೆ ತೀಸ್ತಾ ನದಿ ನೀರಿನ ಒಪ್ಪಂದಕ್ಕೆ ಸಹಿ ಹಾಕಬೇಕು. ಎನ್‌ಆರ್‌ಸಿಯಂತೆ ವಿವಾದಾಸ್ಪದ ವಿಷಯಗಳನ್ನು ರಾಜಕೀಯಗೊಳಿಸಿ ಚತುರತೆ ಪ್ರದರ್ಶಿಸ ಬಾರದು ಎನ್ನುತ್ತಾರೆ ಮುನೀರ್ ಖುಸ್ರು.
ಗುರುವಾರ ಬೆಳಿಗ್ಗೆ ದೆಹಲಿ ತಲುಪಲಿರುವ ಹಸೀನಾ ಅವರು ಭಾರತ ಆರ್ಥಿಕ ಶೃಂಗಸಭೆಯಲ್ಲಿ ಕಳೆದ ಒಂದು ದಶಕದಲ್ಲಿ ತಮ್ಮ ದೇಶದ ಬೆಳವಣಿಗೆಗಳ ಬಗ್ಗೆ ಮಾತನಾಡಲಿದ್ದಾರೆ. ಉಪ ಪ್ರಧಾನಿ, ಸಿಂಗಾಪುರದ ಹಣಕಾಸು ಸಚಿವ, ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ, ದಕ್ಷಿಣ ಏಷ್ಯಾದ ವಿಶ್ವಸಂಸ್ಥೆಯ ಮಹಿಳಾ ರಾಯಭಾರಿ, ಸರ್ಕಾರಿ, ಖಾಸಗಿ ವಲಯ, ಅಕಾಡೆಮಿಗಳು ಸೇರಿದಂತೆ ಪ್ರಮುಖ ನಾಯಕರು ಭಾಗವಹಿಸಲಿದ್ದಾರೆ. ಇವರೆಲ್ಲರೂ ‘ಇನೋವೇಟಿಂಗ್ ಫಾರ್ ಇಂಡಿಯಾ: ದಕ್ಷಿಣ ಏಷ್ಯಾವನ್ನು ಬಲಪಡಿಸುವುದು, ಪ್ರಪಂಚವನ್ನು ಪ್ರಭಾವಿಸುವುದು’ ಎಂಬ ವಿಷಯದೊಂದಿಗೆ ಒಗ್ಗೂಡಲಿದ್ದಾರೆ.
ಹಸೀನಾ ಅಕ್ಟೋಬರ್ 4ರ ಬೆಳಿಗ್ಗೆ ಆಯ್ದ ಭಾರತೀಯ ಸಿಇಒಗಳನ್ನು ಉದ್ದೇಶಿಸಿ ಭಾರತ-ಬಾಂಗ್ಲಾದೇಶ ವೇದಿಕೆಯಲ್ಲಿ ನೆರೆಯ ರಾಷ್ಟ್ರಗಳಿಗಿಂತ ಬಾಂಗ್ಲಾದಲ್ಲಿನ ಹೂಡಿಕೆಗಳ ಬಗ್ಗೆ ಚರ್ಚಿಸಲಿದ್ದಾರೆ. ನ್ಯೂಯಾರ್ಕ್ ಭೇಟಿ ವೇಳೆಯಲ್ಲಿ ಮೋದಿ ಅವರು ಪ್ರಭಾವಿಸಿದ್ದ ಅಂಶಗಳನ್ನು ಇರಿಸಿಕೊಂಡು ಭಾರತೀಯ ಉದ್ಯಮಿಗಳೊಂದಿಗೆ ಸಂವಾದ ನಡೆಸಲಿದ್ದಾರೆ. ಭಾರತ ಎಫ್ಡಿಎ 3 ಬಿಲಿಯನ್ ಡಾಲರ್ಗೂ ಅಧಿಕವಾಗಿದೆ. ಹೀಗಾಗಿ, ವಿದೇಶಿ ಹೂಡಿಕೆಯನ್ನು ಆಕರ್ಷಿಸುವ ಪ್ರಯತ್ನ ನಡೆಸಲಿದ್ದಾರೆ.
ಅಕ್ಟೋಬರ್ 5ರ ಬೆಳಿಗ್ಗೆ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರೊಂದಿಗೆ ಹೈದರಾಬಾದ್ನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿಯವರ ಔಪಚಾರಿಕ ಸಭೆಗೂ ಮೊದಲು ಹಸೀನಾ ಅವರನ್ನು ಭೇಟಿ ಮಾಡುವ ನಿರೀಕ್ಷೆಯಿದೆ. ಊಟದ ಬಳಿಕ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಉಭಯ ನಾಯಕರು ಜಂಟಿಯಾಗಿ ಕೆಲವು ಯೋಜನೆಗಳನ್ನು ಉದ್ಘಾಟಿಸುವ ನಿರೀಕ್ಷೆಯಿದೆ. ಇದೇ ವೇಳೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರನ್ನು ಭೇಟಿ ಮಾಡಿ, ಅಕ್ರಮ ವಲಸಿಗರ ವಾಪಸ್, ಮ್ಯಾನ್ಮಾರ್ ಮೇಲೆ ಒತ್ತಡ, ಬಾಂಗ್ಲಾದೇಶದಲ್ಲಿ ರೋಹಿಂಗ್ಯಾ ವಲಸಿಗರು, ಭಯೋತ್ಪಾದನೆ ನಿಗ್ರಹ ಸೇರಿದಂತೆ ಹಲವು ವಿಷಯಗಳ ಕುರಿತು ಮಾತನಾಡಲಿದ್ದಾರೆ.
ಅಕ್ಟೋಬರ್ 6ರಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಹಸೀನಾ ಅವರನ್ನು ಭೇಟಿ ಮಾಡಲಿದ್ದಾರೆ. ಢಾಕಾಕ್ಕೆ ತೆರಳುವ ಮುನ್ನ ಇಂಡೋ-ಬಾಂಗ್ಲಾ ಚರಿತ್ರೆಯ ಪ್ರಖ್ಯಾತ ಚಲನಚಿತ್ರ ನಿರ್ಮಾಪಕ ಶ್ಯಾಮ್ ಬೆನೆಗಲ್ ಅವರ ತಂದೆ ಬಂಗಬಂಧು ಶೇಖ್ ಮುಜಿಬುರ್ ರೆಹಮಾನ್ ಅವರೊಂದಿಗೆ ಚರ್ಚಿಸಲಿದ್ದಾರೆ. 2020ರ ಮಾರ್ಚ್ 17ಕ್ಕೆ ಬಾಂಗ್ಲಾದೇಶದ ಪಿತಾಮಹನ ಜನ್ಮ ಶತಮಾನೋತ್ಸವ ಆಚರಿಸಲಿದೆ. ಈ ಸಂದರ್ಭದ ಅವರ ನೆನಪಿಗಾಗಿ ಒಂದು ವರ್ಷ ‘ಮುಜೀಬ್ ಬರ್ಷಾ’ ಆಚರಿಸಲಿದೆ.