ಹೈದರಾಬಾದ್: ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಹೈದರಾಬಾದ್ ಪೊಲೀಸ್ ಆಯುಕ್ತರ ಕಚೇರಿಗೆ ಭೇಟಿ ನೀಡಿದ್ದಾರೆ.
ಹೈದರಾಬಾದ್ ಪೊಲೀಸ್ ಆಯುಕ್ತರ ಕಚೇರಿಯಲ್ಲಿರುವ ಕಮಾಂಡ್ ಸೆಂಟರ್ ಪರಿಶೀಲನೆ ನಡೆಸಿದರು. ಈ ವೇಳೆ, ಹೈದರಾಬಾದ್ ಪೊಲೀಸ್ ಆಯುಕ್ತ ಅಂಜನಿ ಕುಮಾರ್ ಅವರು ಸಿಸಿ ಕ್ಯಾಮೆರಾಗಳಿಂದ ಅಪರಾಧಿಗಳನ್ನು ಹಿಡಿಯುವ ರೀತಿ ಮತ್ತು ಜನ ಸ್ನೇಹಿಯಾಗಿ ಯಾವ ರೀತಿಯ ಕಾರ್ಯಗಳನ್ನು ನಡೆಸಲಾಗುತ್ತಿದೆ ಎಂಬ ಬಗ್ಗೆ ಮಾಹಿತಿ ನೀಡಿದರು.
ಇದೇ ವೇಳೆ ಮಾತನಾಡಿದ ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್, ಅಪರಾಧಗಳನ್ನ ನಿಗ್ರಹಿಸಲು ನಗರ ಪೊಲೀಸರು ಬಳಸುವ ತಂತ್ರಗಳು ಸೂಕ್ತವೆಂದಿದ್ದಾರೆ. ಮುಖ್ಯವಾಗಿ ಸಿಸಿ ಕ್ಯಾಮೆರಾಗಳು ಜನ ಸ್ನೇಹಿಯಾಗಿ ಕಾರ್ಯನಿರ್ವಹಿಸಲು ಉಪಯುಕ್ತವಾಗಿವೆ ಎಂದಿದ್ದಾರೆ.