ನವದೆಹಲಿ: ಮಹಾರಾಷ್ಟ್ರದಲ್ಲಿ ಬಿಜೆಪಿ ಬೆಳೆಯಲು ಅವಕಾಶ ನೀಡಿದ್ದೇ ಬಾಳಾ ಸಾಹೇಬ್ ಠಾಕ್ರೆ ಎಂದು ಮಾಜಿ ಪ್ರಧಾನಿ ಹೆಚ್ಡಿ ದೇವೇಗೌಡ ಹೇಳಿದ್ದಾರೆ. ಮಹಾರಾಷ್ಟ್ರದಲ್ಲಿನ ರಾಜಕೀಯ ಬಿಕ್ಕಟ್ಟಿನ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅವರು, ಅಡ್ವಾಣಿ ಮತ್ತು ವಾಜಪೇಯಿ ಸೀಟುಗಳ ಹಂಚಿಕೆ ಮಾಡಿಕೊಳ್ಳಲು ಬಾಳಾ ಸಾಹೇಬ್ ಠಾಕ್ರೆ ಅವರ ಮನೆ ಬಾಗಿಲಿಗೆ ತೆರಳಿ ಮಾತುಕತೆ ನಡೆಸುತ್ತಿದ್ದರು.
-
HD Deve Gowda: Balasaheb gave place to BJP in Maharashtra, Advani&Vajpayee went to Bala Saheb's residence & requested him for seats. BJP overrode that, that's why Uddhav Thackeray has taken a stand that he will teach them a lesson. Now, it's for Congress&NCP to put down BJP. https://t.co/jxkXDli1Q2
— ANI (@ANI) November 11, 2019 " class="align-text-top noRightClick twitterSection" data="
">HD Deve Gowda: Balasaheb gave place to BJP in Maharashtra, Advani&Vajpayee went to Bala Saheb's residence & requested him for seats. BJP overrode that, that's why Uddhav Thackeray has taken a stand that he will teach them a lesson. Now, it's for Congress&NCP to put down BJP. https://t.co/jxkXDli1Q2
— ANI (@ANI) November 11, 2019HD Deve Gowda: Balasaheb gave place to BJP in Maharashtra, Advani&Vajpayee went to Bala Saheb's residence & requested him for seats. BJP overrode that, that's why Uddhav Thackeray has taken a stand that he will teach them a lesson. Now, it's for Congress&NCP to put down BJP. https://t.co/jxkXDli1Q2
— ANI (@ANI) November 11, 2019
ಆದರೆ ಬಿಜೆಪಿ ಹಳೆಯದನ್ನ ಮರೆತು ವರ್ತಿಸುತ್ತಿದೆ. ಹೀಗಾಗಿ ಉದ್ದವ್ ಠಾಕ್ರೆ ಕಠಿಣ ನಿಲುವು ತಳೆದಿದ್ದು, ಬಿಜೆಪಿಗೆ ಪಾಠ ಕಲಿಸಲು ಮುಂದಾಗಿದ್ದಾರೆ ಎಂದು ದೇವೇಗೌಡರು ಅಭಿಪ್ರಾಯಪಟ್ಟಿದ್ದಾರೆ. ಒಂದೊಮ್ಮೆ ಕಾಂಗ್ರೆಸ್ ಶಿವಸೇನೆಗೆ ಬೆಂಬಲ ನೀಡಿದರೆ ಯಾವುದೇ ಕಾರಣಕ್ಕೂ ಮುಂದಿನ ಐದು ವರ್ಷ ತೊಂದರೆಯನ್ನುಂಟು ಮಾಡಬಾರದು ಎಂದು ಹೆಚ್ ಡಿ ದೇವೇಗೌಡ ಹಳೆ ದೋಸ್ತಿಗೆ ಸಲಹೆ ನೀಡಿದ್ದಾರೆ. ಹೀಗೆ ಮಾಡಿದಲ್ಲಿ ಮಾತ್ರ ಜನ ಕಾಂಗ್ರೆಸ್ ನಂಬುತ್ತಾರೆ ಎಂದೂ ಅಭಿಪ್ರಾಯಪಟ್ಟಿದ್ದಾರೆ.
ಮಹಾರಾಷ್ಟ್ರದಲ್ಲಿ ಶಿವಸೇನೆ 50:50 ಸೂತ್ರಕ್ಕೆ ಇಟ್ಟಿರುವ ಒಪ್ಪಂದಕ್ಕೆ ಬಿಜೆಪಿ ಒಪ್ಪಿಕೊಳ್ಳದ ಕಾರಣ ಎರಡು ಪಕ್ಷಗಳ ನಡುವಿನ ಮೈತ್ರಿ ಮುರಿದು ಬಿದ್ದಿದೆ.