ETV Bharat / bharat

ಪಾಕ್​ನಲ್ಲಿ ಹಿಂದೂ ದೇವಾಲಯ ಧ್ವಂಸ : ಘಟನೆ ಖಂಡಿಸಿ ಭಜರಂಗದಳ ಪ್ರತಿಭಟನೆ

author img

By

Published : Jan 3, 2021, 7:26 AM IST

ಪಾಕಿಸ್ತಾನದ ಉಗ್ರಗಾಮಿಗಳು ಅಲ್ಲಿನ ಅಲ್ಪಸಂಖ್ಯಾತ ಹಿಂದೂಗಳ ಮೇಲೆ ದಾಳಿ ನಡೆಸುತ್ತಿದ್ದಾರೆ. ಈ ವಿಷಯವನ್ನು ವಿಶ್ವಸಂಸ್ಥೆಯಲ್ಲಿ ಪ್ರಸ್ಥಾಪಿಸುವಂತೆ ನಾವು ಭಾರತ ಸರ್ಕಾರವನ್ನು ಕೋರುತ್ತೇವೆ..

protest against demolition of Hindu temples in Pakistan
ಭಜರಂಗದಳ ಪ್ರತಿಭಟನೆ

ಅಲಿಗಢ್(ಉತ್ತರ ಪ್ರದೇಶ): ಪಾಕಿಸ್ತಾನದಲ್ಲಿ ಹಿಂದೂ ದೇವಾಲಯವನ್ನು ಧ್ವಂಸಗೊಳಿಸಿರುವುದನ್ನು ವಿರೋಧಿಸಿ ಆಲಿಗಢ್ ಭಜರಂಗದಳ ಕಾರ್ಯಕರ್ತರು ರಸ್ತೆ ಮೇಲೆ ಪಾಕ್ ಧ್ವಜ ಇರಿಸಿ ಪ್ರತಿಭಟಿಸಿದ್ದಾರೆ.

ಪಾಕಿಸ್ತಾನ ಸರ್ಕಾರದ ವಿರುದ್ಧ ಘೋಷಣೆ ಕೂಗಿದ ಪ್ರತಿಭಟನಾಕಾರರು, ದೇವಾಲಯಗಳ ಮೇಲಿನ ದಾಳಿ ಖಂಡಿಸಿದ್ದಾರೆ. ಪಾಕಿಸ್ತಾನದ ಖೈಬರ್ ಪಖ್ತುನ್​ಖ್ವಾ ಪ್ರಾಂತ್ಯದ ಕರಕ್ ಜಿಲ್ಲೆಯಲ್ಲಿ ಡಿಸೆಂಬರ್ 30ರಂದು ಹಿಂದೂ ದೇವಾಲಯವನ್ನು ಧ್ವಂಸಗೊಳಿಸಿದ ನಂತರ ಭಾರತದಲ್ಲಿ ಪ್ರತಿಭಟನೆಗಳು ಭುಗಿಲೆದ್ದಿವೆ. ಅಲಿಗಢ್ ಭಜರಂಗದಳದ ಸಂಚಾಲಕ ಗೌರವ್ ಶರ್ಮಾ ಅವರು ವಿಶ್ವಸಂಸ್ಥೆಯಲ್ಲಿ ಈ ವಿಷಯವನ್ನು ಪ್ರಸ್ಥಾಪಿಸಬೇಕೆಂದು ಕೇಂದ್ರ ಸರ್ಕಾರವನ್ನು ಕೋರಿದ್ದಾರೆ.

  • #WATCH | Bajrang Dal supporters in Aligarh, protest the demolition of Hindu temples in Pakistan by raising slogans and pasting Pakistani flags on the road as a mark of disrespect pic.twitter.com/RRDt4Q95fP

    — ANI UP (@ANINewsUP) January 3, 2021 " class="align-text-top noRightClick twitterSection" data="

#WATCH | Bajrang Dal supporters in Aligarh, protest the demolition of Hindu temples in Pakistan by raising slogans and pasting Pakistani flags on the road as a mark of disrespect pic.twitter.com/RRDt4Q95fP

— ANI UP (@ANINewsUP) January 3, 2021 ">

"ನಾವು ಪಾಕಿಸ್ತಾನದ ಧ್ವಜಗಳನ್ನು ಅಲಿಗಢ್​ ಮುಖ್ಯ ರಸ್ತೆಯಲ್ಲಿ ಅಂಟಿಸಿದ್ದೇವೆ. ಪಾಕಿಸ್ತಾನದಲ್ಲಿ ಹಿಂದೂ ದೇವಾಲಯಗಳನ್ನು ನೆಲಸಮಗೊಳಿಸಿದ ಪ್ರಕರಣಗಳ ವಿರುದ್ಧ ನಾವು ಪ್ರತಿಭಟಿಸುತ್ತಿದ್ದೇವೆ. ಪಾಕಿಸ್ತಾನದ ಉಗ್ರಗಾಮಿಗಳು ಅಲ್ಲಿನ ಅಲ್ಪಸಂಖ್ಯಾತ ಹಿಂದೂಗಳ ಮೇಲೆ ದಾಳಿ ನಡೆಸುತ್ತಿದ್ದಾರೆ. ಈ ವಿಷಯವನ್ನು ವಿಶ್ವಸಂಸ್ಥೆಯಲ್ಲಿ ಪ್ರಸ್ಥಾಪಿಸುವಂತೆ ನಾವು ಭಾರತ ಸರ್ಕಾರವನ್ನು ಕೋರುತ್ತೇವೆ" ಎಂದು ಶರ್ಮಾ ತಿಳಿಸಿದ್ದಾರೆ.

ಹಿಂದೂ ದೇವಾಲಯವೊಂದನ್ನು ಧ್ವಂಸಗೊಳಿಸುರುವ ಘಟನೆ ವಿರುದ್ಧ ಭಾರತವು ಜನವರಿ 1ರಂದು ಪಾಕಿಸ್ತಾನದೊಂದಿಗೆ ರಾಜತಾಂತ್ರಿಕ ಮಾರ್ಗಗಳ ಮೂಲಕ ಖಂಡಿಸಿತ್ತು. ಈ ಘಟನೆಯನ್ನ ಗಂಭೀರವಾಗಿ ಪರಿಗಣಿಸಿರುವ ಖೈಬರ್ ಪುಖ್ತುನ್​ಖ್ವಾ (ಕೆಪಿ) ಸರ್ಕಾರವು ಹಿಂದೂ ದೇವಾಲಯದ ಪುನರ್ ನಿರ್ಮಾದ ಘೋಷಣೆ ಮಾಡಿದ್ದು, ದಾಳಿಕೋರರ ವಿರುದ್ಧ ಕ್ರಮಕೈಗೊಳ್ಳಲು ಮುಂದಾಗಿದೆ.

ಅಲಿಗಢ್(ಉತ್ತರ ಪ್ರದೇಶ): ಪಾಕಿಸ್ತಾನದಲ್ಲಿ ಹಿಂದೂ ದೇವಾಲಯವನ್ನು ಧ್ವಂಸಗೊಳಿಸಿರುವುದನ್ನು ವಿರೋಧಿಸಿ ಆಲಿಗಢ್ ಭಜರಂಗದಳ ಕಾರ್ಯಕರ್ತರು ರಸ್ತೆ ಮೇಲೆ ಪಾಕ್ ಧ್ವಜ ಇರಿಸಿ ಪ್ರತಿಭಟಿಸಿದ್ದಾರೆ.

ಪಾಕಿಸ್ತಾನ ಸರ್ಕಾರದ ವಿರುದ್ಧ ಘೋಷಣೆ ಕೂಗಿದ ಪ್ರತಿಭಟನಾಕಾರರು, ದೇವಾಲಯಗಳ ಮೇಲಿನ ದಾಳಿ ಖಂಡಿಸಿದ್ದಾರೆ. ಪಾಕಿಸ್ತಾನದ ಖೈಬರ್ ಪಖ್ತುನ್​ಖ್ವಾ ಪ್ರಾಂತ್ಯದ ಕರಕ್ ಜಿಲ್ಲೆಯಲ್ಲಿ ಡಿಸೆಂಬರ್ 30ರಂದು ಹಿಂದೂ ದೇವಾಲಯವನ್ನು ಧ್ವಂಸಗೊಳಿಸಿದ ನಂತರ ಭಾರತದಲ್ಲಿ ಪ್ರತಿಭಟನೆಗಳು ಭುಗಿಲೆದ್ದಿವೆ. ಅಲಿಗಢ್ ಭಜರಂಗದಳದ ಸಂಚಾಲಕ ಗೌರವ್ ಶರ್ಮಾ ಅವರು ವಿಶ್ವಸಂಸ್ಥೆಯಲ್ಲಿ ಈ ವಿಷಯವನ್ನು ಪ್ರಸ್ಥಾಪಿಸಬೇಕೆಂದು ಕೇಂದ್ರ ಸರ್ಕಾರವನ್ನು ಕೋರಿದ್ದಾರೆ.

  • #WATCH | Bajrang Dal supporters in Aligarh, protest the demolition of Hindu temples in Pakistan by raising slogans and pasting Pakistani flags on the road as a mark of disrespect pic.twitter.com/RRDt4Q95fP

    — ANI UP (@ANINewsUP) January 3, 2021 " class="align-text-top noRightClick twitterSection" data=" ">

"ನಾವು ಪಾಕಿಸ್ತಾನದ ಧ್ವಜಗಳನ್ನು ಅಲಿಗಢ್​ ಮುಖ್ಯ ರಸ್ತೆಯಲ್ಲಿ ಅಂಟಿಸಿದ್ದೇವೆ. ಪಾಕಿಸ್ತಾನದಲ್ಲಿ ಹಿಂದೂ ದೇವಾಲಯಗಳನ್ನು ನೆಲಸಮಗೊಳಿಸಿದ ಪ್ರಕರಣಗಳ ವಿರುದ್ಧ ನಾವು ಪ್ರತಿಭಟಿಸುತ್ತಿದ್ದೇವೆ. ಪಾಕಿಸ್ತಾನದ ಉಗ್ರಗಾಮಿಗಳು ಅಲ್ಲಿನ ಅಲ್ಪಸಂಖ್ಯಾತ ಹಿಂದೂಗಳ ಮೇಲೆ ದಾಳಿ ನಡೆಸುತ್ತಿದ್ದಾರೆ. ಈ ವಿಷಯವನ್ನು ವಿಶ್ವಸಂಸ್ಥೆಯಲ್ಲಿ ಪ್ರಸ್ಥಾಪಿಸುವಂತೆ ನಾವು ಭಾರತ ಸರ್ಕಾರವನ್ನು ಕೋರುತ್ತೇವೆ" ಎಂದು ಶರ್ಮಾ ತಿಳಿಸಿದ್ದಾರೆ.

ಹಿಂದೂ ದೇವಾಲಯವೊಂದನ್ನು ಧ್ವಂಸಗೊಳಿಸುರುವ ಘಟನೆ ವಿರುದ್ಧ ಭಾರತವು ಜನವರಿ 1ರಂದು ಪಾಕಿಸ್ತಾನದೊಂದಿಗೆ ರಾಜತಾಂತ್ರಿಕ ಮಾರ್ಗಗಳ ಮೂಲಕ ಖಂಡಿಸಿತ್ತು. ಈ ಘಟನೆಯನ್ನ ಗಂಭೀರವಾಗಿ ಪರಿಗಣಿಸಿರುವ ಖೈಬರ್ ಪುಖ್ತುನ್​ಖ್ವಾ (ಕೆಪಿ) ಸರ್ಕಾರವು ಹಿಂದೂ ದೇವಾಲಯದ ಪುನರ್ ನಿರ್ಮಾದ ಘೋಷಣೆ ಮಾಡಿದ್ದು, ದಾಳಿಕೋರರ ವಿರುದ್ಧ ಕ್ರಮಕೈಗೊಳ್ಳಲು ಮುಂದಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.