ಬಾಗಪತ್(ಯುಪಿ): 17ನೇ ಲೋಕಸಭಾ ಚುನಾವಣೆಯ ಮೊದಲ ಹಂತದ ವೋಟಿಂಗ್ ಈಗಾಗಲೇ ಆರಂಭಗೊಂಡಿದೆ. 2 ಕೇಂದ್ರಾಡಳಿತ ಪ್ರದೇಶ ಸೇರಿ 18 ರಾಜ್ಯಗಳಲ್ಲಿ ಮತದಾನ ನಡೆಯುತ್ತಿದ್ದು, ಬೆಳಗ್ಗೆಯಿಂದಲೇ ಮತದಾರ ಪ್ರಭುಗಳು ಸರತಿಯಲ್ಲಿ ಮತಗಟ್ಟೆಗಳಿಗೆ ಬಂದು ಹಕ್ಕು ಚಲಾಯಿಸುತ್ತಿದ್ದಾರೆ.
ಇತ್ತ ಜನರನ್ನ ಸೆಳೆಯಲು ಮತಗಟ್ಟೆಗಳ ಬಳಿ ಅಧಿಕಾರಿಗಳು ವಿವಿಧ ರೀತಿಯ ಸರ್ಕಸ್ ನಡೆಸುತ್ತಿದ್ದಾರೆ. ಉತ್ತರಪ್ರದೇಶದ ಬಾಗಪತ್ನಲ್ಲಿ ವೋಟ್ ಮಾಡಲು ಆಗಮಿಸುತ್ತಿರುವ ಮತದಾರರನ್ನ ಸಂಭ್ರಮದಿಂದ ಬರಮಾಡಿಕೊಳ್ಳಲಾಗುತ್ತಿದೆ.
ಉತ್ತರಪ್ರದೇಶದ ಬಾಗಪತ್ನ 126ನೇ ಮತಗಟ್ಟಿ ಬಳಿ ವೋಟಿಂಗ್ ಮಾಡಲು ಬರುವವರ ಮೇಲೆ ಹೂವು ಎರಚಲಾಗುತ್ತಿದ್ದು, ಮತದಾನ ಮಾಡಲು ಗೇಟ್ವೊಳಗೆ ಆಗಮಿಸುತ್ತಿದ್ದಂತೆ ಡೊಳ್ಳು, ಭಾಜಾ ಭಜಂತ್ರಿ ಭಾರಿಸಿ ಆಗಮನ ಸ್ವಾಗತಿಸಲಾಗುತ್ತಿದೆ. 543 ಕ್ಷೇತ್ರಗಳ ಪೈಕಿ ಮೊದಲ ಹಂತದಲ್ಲಿ 91ಕ್ಷೇತ್ರಗಳಲ್ಲಿ ವೋಟಿಂಗ್ ನಡೆಯುತ್ತಿದೆ.