ETV Bharat / bharat

ಆಗಸದಲ್ಲೂ ದಾಖಲೆ ಬರೆದ ಪಿ.ವಿ.ಸಿಂಧು... ಬ್ಯಾಡ್ಮಿಂಟನ್​ ತಾರೆಯ 'ತೇಜಸ್'​ ಹೀಗಿತ್ತು! - Womens Day

ಬೆಂಗಳೂರು: ಖ್ಯಾತ ಬ್ಯಾಡ್ಮಿಂಟನ್ ತಾರೆ ಪಿ.ವಿ.ಸಿಂಧು ಕ್ರೀಡಾಂಗಣದಲ್ಲಷ್ಟೇ ಅಲ್ಲದೆ ಆಗಸದಲ್ಲಿ ದಾಖಲೆಯೊಂದನ್ನು ಬರೆದಿದ್ದಾರೆ. ಬೆಂಗಳೂರಿನಲ್ಲಿ ನಡೆಯುತ್ತಿರುವ ಏರೋ ಇಂಡಿಯಾ 2019ರ ಮಹಿಳಾ ದಿನಾಚರಣೆಯ ವಿಶೇಷ ಆಚರಣೆಯಲ್ಲಿ ಲಘು ಯುದ್ಧ ವಿಮಾನ ತೇಜಸ್​​ಅನ್ನು ಚಲಾಯಿಸಿ ಗಮನ ಸೆಳೆದರು.

ಚಿತ್ರ ಕೃಪೆ: ಡಿಆರ್​ಡಿಒ
author img

By

Published : Feb 24, 2019, 1:55 PM IST

ಇಂದು ಏರೋ ಇಂಡಿಯಾ 2019ರಲ್ಲಿ ಮಹಿಳಾ ದಿನಾಚರಣೆ ಆಚರಿಸಲಾಯ್ತು. ಇದರ ಅಂಗವಾಗಿ ಪಿ.ವಿ.ಸಿಂಧು ತೇಜಸ್​ ಯುದ್ಧ ವಿಮಾನ ಹತ್ತಿ, 5 ನಿಮಿಷಗಳ ಕಾಲ ಆಗಸದಲ್ಲಿ ಹಾರಾಡಿಸುವ ಮೂಲಕ ಬೆರಗು ಮೂಡಿಸಿದರು. ತೇಜಸ್​ ವಿಮಾನ ಹಾರಾಡಿಸಿದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೂ ಅವರು ಪಾತ್ರರಾದರು.

ಪೈಲಟ್​ನೊಂದಿಗೆ, ಸಹ ಪೈಲಟರ್​ ಸೀಟ್​ನಲ್ಲಿ ಕುಳಿತ ಸಿಂಧು, ಅವರ ನಿರ್ದೇಶನದಂತೆ ವಿಮಾನ ಹಾರಾಡಿಸಿದರು. ಭಾರತೀಯ ವಾಯು ಸೇನೆಯ ಪೈಲಟ್​ ಸಮವಸ್ತ್ರ ಧರಿಸಿದ್ದ ಸಿಂಧು, ಸಹಸ್ರಾರು ಪ್ರೇಕ್ಷಕರ ಮನ ಗೆದ್ದರು.

ವಿಮಾನ ಲ್ಯಾಂಡ್​ ಆದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸಿಂಧು, ಇದೊಂದು ಅದ್ಭುತ ಅನುಭವ. ಇಂತಹ ಸದವಾಕಾಶ ದೊರೆತಿದ್ದು ನಿಜಕ್ಕೂ ನನಗೆ ಗೌರವ ತಂದಿದೆ. ಜೊತೆಗಿದ್ದ ಕ್ಯಾಪ್ಟನ್​ ನನಗೆ ಎಲ್ಲಾ ಬಗೆಯ ಸ್ಟಂಟ್​ಗಳನ್ನು ಹೇಳಿಕೊಟ್ಟರು. ಈ ದಿನ ನನಗೆ ಚಿರಸ್ಮರಣೀಯ ಎಂದು ತಮ್ಮ ಖುಷಿ ಹಂಚಿಕೊಂಡರು. ತೇಜಸ್​​​​ಅನ್ನು ರಿಯಲ್ ಹೀರೋ ಎಂದು ಬಣ್ಣಿಸಿದರು.

Intro:Body:

kannada news, etv bharat, Kannada newspaper, PV Sindhu, first woman,  fly LCA Tejas, Aero India, Womens Day,

Badminton ace PV Sindhu becomes first woman to fly LCA Tejas on Aero India Women

ಆಗಸದಲ್ಲೂ ದಾಖಲೆ ಬರೆದ ಪಿ.ವಿ.ಸಿಂಧು... ಬ್ಯಾಡ್ಮಿಂಟನ್​ ತಾರೆಯ 'ತೇಜಸ್'​ ಹೀಗಿತ್ತು! 

ಚಿತ್ರ ಕೃಪೆ: ಡಿಆರ್​ಡಿಒ

ಬೆಂಗಳೂರು: ಖ್ಯಾತ ಬ್ಯಾಡ್ಮಿಂಟನ್ ತಾರೆ ಪಿ.ವಿ.ಸಿಂಧು ಕ್ರೀಡಾಂಗಣದಲ್ಲಷ್ಟೇ ಅಲ್ಲದೆ ಆಗಸದಲ್ಲಿ ದಾಖಲೆಯೊಂದನ್ನು ಬರೆದಿದ್ದಾರೆ. ಬೆಂಗಳೂರಿನಲ್ಲಿ ನಡೆಯುತ್ತಿರುವ ಏರೋ ಇಂಡಿಯಾ 2019ರ ಮಹಿಳಾ ದಿನಾಚರಣೆಯ ವಿಶೇಷ ಆಚರಣೆಯಲ್ಲಿ ಲಘು ಯುದ್ಧ ವಿಮಾನ ತೇಜಸ್​​ಅನ್ನು ಚಲಾಯಿಸಿ ಗಮನ ಸೆಳೆದರು.

ಇಂದು ಏರೋ ಇಂಡಿಯಾ 2019ರಲ್ಲಿ ಮಹಿಳಾ ದಿನಾಚರಣೆ ಆಚರಿಸಲಾಯ್ತು. ಇದರ ಅಂಗವಾಗಿ ಪಿ.ವಿ.ಸಿಂಧು ತೇಜಸ್​ ಯುದ್ಧ ವಿಮಾನ ಹತ್ತಿ, 5 ನಿಮಿಷಗಳ ಕಾಲ ಆಗಸದಲ್ಲಿ ಹಾರಾಡಿಸುವ ಮೂಲಕ ಬೆರಗು ಮೂಡಿಸಿದರು. ತೇಜಸ್​ ವಿಮಾನ ಹಾರಾಡಿಸಿದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೂ ಅವರು ಪಾತ್ರರಾದರು.

ಪೈಲಟ್​ನೊಂದಿಗೆ, ಸಹ ಪೈಲಟರ್​ ಸೀಟ್​ನಲ್ಲಿ ಕುಳಿತ ಸಿಂಧು, ಅವರ ನಿರ್ದೇಶನದಂತೆ ವಿಮಾನ ಹಾರಾಡಿಸಿದರು. ಭಾರತೀಯ ವಾಯು ಸೇನೆಯ ಪೈಲಟ್​ ಸಮವಸ್ತ್ರ ಧರಿಸಿದ್ದ ಸಿಂಧು, ಸಹಸ್ರಾರು ಪ್ರೇಕ್ಷಕರ ಮನ ಗೆದ್ದರು.

ವಿಮಾನ ಲ್ಯಾಂಡ್​ ಆದ ಬಳಿಕ ಮಾಧ್ಯಮಗಳೊಂದಿಗೆ  ಮಾತನಾಡಿದ ಸಿಂಧು, ಇದೊಂದು ಅದ್ಭುತ ಅನುಭವ. ಇಂತಹ ಸದವಾಕಾಶ ದೊರೆತಿದ್ದು ನಿಜಕ್ಕೂ ನನಗೆ ಗೌರವ ತಂದಿದೆ.  ಜೊತೆಗಿದ್ದ ಕ್ಯಾಪ್ಟನ್​ ನನಗೆ ಎಲ್ಲಾ ಬಗೆಯ ಸ್ಟಂಟ್​ಗಳನ್ನು ಹೇಳಿಕೊಟ್ಟರು. ಈ ದಿನ ನನಗೆ ಚಿರಸ್ಮರಣೀಯ ಎಂದು ತಮ್ಮ ಖುಷಿ ಹಂಚಿಕೊಂಡರು.  ತೇಜಸ್​​​​ಅನ್ನು ರಿಯಲ್ ಹೀರೋ ಎಂದು ಬಣ್ಣಿಸಿದರು.  

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.