ಲಕ್ನೋ(ಉತ್ತರಪ್ರದೇಶ): 1992ರ ಬಾಬ್ರಿ ಮಸೀದಿ ದ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಉಪ ಪ್ರಧಾನಿ ಎಲ್.ಕೆ ಅಡ್ವಾಣಿ ಸೇರಿದಂತೆ ಅನೇಕರ ಹೇಳಿಕೆಯನ್ನ ಸಿಬಿಐನ ವಿಶೇಷ ಕೋರ್ಟ್ ಜುಲೈ 24ರಂದು ಪಡೆದು, ದಾಖಲಿಸಿಕೊಳ್ಳಲಿದೆ ಎಂದು ತಿಳಿಸಿದೆ.
92 ವರ್ಷದ ಹಿರಿಯ ಬಿಜೆಪಿ ಮುಖಂಡ ಅಡ್ವಾಣಿ, ಅಪರಾಧ ದಂಡ ಪ್ರಕ್ರಿಯೆ ಸಂಹಿತೆ ಕಲಂ 313ರ ಪ್ರಕಾರ ವಿಡಿಯೋ ಕಾನ್ಪರೆನ್ಸ್ ಮೂಲಕ ತಮ್ಮ ದಾಖಲೆ ನೀಡಲಿದ್ದಾರೆ. ಇದರ ಜತೆಗೆ ಶಿವಸೇನೆ ಮುಖಂಡ ಸತೀಶ್ ಪ್ರಧಾನ್ ಅವರಿಂದ ಜುಲೈ 22ರಂದು ಹಾಗೂ ಜುಲೈ 23ರಂದು ಬಿಜೆಪಿ ಹಿರಿಯ ಮುಖಂಡ ಮುರಳಿ ಮನೋಹರ್ ಜೋಶಿ ಅವರ ಹೇಳಿಕೆಯನ್ನ ಸಿಬಿಐನ ವಿಶೇಷ ಕೋರ್ಟ್ ಪಡೆದುಕೊಳ್ಳಲಿದೆ.
ಬಾಬ್ರಿ ಮಸೀದಿ ದ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಉಪ ಪ್ರಧಾನಿ ಎಲ್.ಕೆ. ಅಡ್ವಾಣಿ, ಹಿರಿಯ ಬಿಜೆಪಿ ನಾಯಕರಾದ ಎಂಎಂ ಜೋಷಿ, ಉಮಾ ಭಾರತಿ, ಕಲ್ಯಾಣ್ ಸಿಂಗ್ ಹಾಗೂ ಸಾಧ್ವಿ ರಿತಂಭರ ಸೇರಿದಂತೆ ಅನೇಕರು ಪ್ರಕರಣದ ಆರೋಪ ಪಟ್ಟಿಯಲ್ಲಿದ್ದಾರೆ.
ದ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಉತ್ತರಪ್ರದೇಶ ಸಿಐಡಿ ತನಿಖೆ ನಡೆಸಿ, ಇದೀಗ ಸಿಬಿಐಗೆ ಹಸ್ತಾಂತರ ಮಾಡಿದೆ. ಇದಕ್ಕೆ ಸಂಬಂಧಿಸಿದಂತೆ ಒಟ್ಟು 48 ಎಫ್ಐಆರ್ ದಾಖಲಾಗಿವೆ.ಒಟ್ಟು 49 ಮಂದಿ ವಿರುದ್ಧ ದೋಷಾರೋಪ ಪಟ್ಟಿ ದಾಖಲಾಗಿದ್ದು, ಇದರಲ್ಲಿ ಈಗಾಗಲೇ 17 ಮಂದಿ ಸಾವನ್ನಪ್ಪಿದ್ದಾರೆ.