ETV Bharat / bharat

ಐತಿಹಾಸಿಕ ಅಯೋಧ್ಯೆ ತೀರ್ಪು: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ, ಮುಸ್ಲಿಮರಿಗೆ ಪರ್ಯಾಯ 5 ಎಕರೆ ಭೂಮಿ - ಬಾಬರಿ ಮಸೀದಿ ಕೇಸ್

ಅಯೋಧ್ಯೆ ತೀರ್ಪು
author img

By

Published : Nov 9, 2019, 10:08 AM IST

Updated : Nov 9, 2019, 7:27 PM IST

09:41 November 09

ನವದೆಹಲಿ: ಅಯೋಧ್ಯೆಯಲ್ಲಿನ ರಾಮ ಜನ್ಮಭೂಮಿ- ಬಾಬರಿ ಮಸೀದಿ ಸಂಬಂಧಿಸಿದ ಶತಮಾನದಷ್ಟು ಹಳೆಯದಾದ ವಿವಾದಿತ ತೀರ್ಪನ್ನು ಸುಪ್ರೀಂಕೋರ್ಟ್​ ಶನಿವಾರ ನೀಡಿತು.

ಅಯೋಧ್ಯೆಯಲ್ಲಿನ 2.77 ಎಕರೆ ವಿವಾದಿತ ಭೂಮಿ ಸುನ್ನಿ ವಕ್ಫ್ ಮಂಡಳಿ, ನಿರ್ಮೋಹಿ ಅಖಾರಾ ಹಾಗೂ ರಾಮ್ ಲಲ್ಲಾ ನಡುವೆ ಸಮಾನವಾಗಿ ಹಂಚಿಕೆ ಮಾಡಲು ಅಲಹಬಾದ್ ಹೈಕೋರ್ಟ್ ಆದೇಶಿಸಿತ್ತು. ಆಗಸ್ಟ್ 6ರಿಂದ ಸುಪ್ರೀಂಕೋರ್ಟ್​ ನಿತ್ಯ ವಿಚಾರಣೆ ನಡೆಸಿ 40 ದಿನಗಳ ಬಳಿಕ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ನೇತೃತ್ವದ ಐವರು ನ್ಯಾಯಮೂರ್ತಿಗಳನ್ನು ಒಳಗೊಂಡ ನ್ಯಾಯಪೀಠವು ಇಂದು ತನ್ನ ಐತಿಹಾಸಿಕ ತೀರ್ಪುನ್ನು ಪ್ರಕಟಿಸಿದೆ.

  • ಸುಪ್ರೀಂಕೋರ್ಟ್​ನ ತೀರ್ಪು ಹೊರಬಿದ್ದಿದೆ. ನಾವು ಮಂದಿರ ನಿರ್ಮಾಣಕ್ಕೆ ಬೆಂಬಲ ನೀಡಲಿದ್ದೇವೆ. ಈ ತೀರ್ಪು ಕೇವಲ ಮಂದಿರ ನಿರ್ಮಾಣಕ್ಕೆ ಬಾಗಿಲೆ ತೆರದಿಲ್ಲ. ಜೊತೆಗೆ ಇದನ್ನು ರಾಜಕೀಯಗೊಳಿಸಿದ ಬಿಜೆಪಿ ಬಾಗಿಲು ಮುಚ್ಚಿದಂತಾಗಿದೆ- ಕಾಂಗ್ರೆಸ್​ ವಕ್ತಾರ ರಂದೀಪ್ ಸುರ್ಜೆವಾಲ
  • ನ್ಯಾಯಾಲಯದ ತೀರ್ಪ ಬಗ್ಗೆ ನಮಗೆ ಗೌರವಿದೆ. ಆದರೆ ತೀರ್ಪು ನಮಗೆ ತೃಪ್ತಿಕರವಾಗಿಲ್ಲ. ನಮ್ಮ ಸಮಿತಿ ಒಪ್ಪಿದರೆ ನಾವು ಪರಿಶೀಲನಾ ಅರ್ಜಿಯನ್ನು ಸಲ್ಲಿಸುತ್ತೇವೆ. ಇದು ನಮ್ಮ ಹಕ್ಕು ಮತ್ತು ಇದು ಸುಪ್ರೀಂ ಕೋರ್ಟ್‌ನ ನಿಯಮಗಳಲ್ಲೂ ಇದೆ- ಸುನ್ನಿ ವಕ್ಫ್‌ ಮಂಡಳಿ ಪರ ವಕೀಲ ಜಾಫರ್‌ಯಾಬ್ ಜಿಲಾನಿ
  • ದಶಕದಷ್ಟು ಹಳೆಯದಾದ ವಿವಾದ ಇಂದು ಅಂತ್ಯವಾಗಿದೆ. ಶಾಂತಿ ಮತ್ತು ಸಹಿಷ್ಣುತೆ ಕಾಪಾಡಬೇಕು ಎಂದು ನಾನು ಜನರಲ್ಲಿ ಕೋರಿಕೊಳ್ಳುತ್ತೇನೆ: ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್​
  • ನ್ಯಾಯಾಲಯದ ತೀರ್ಪನ್ನು ಎಲ್ಲರೂ ಗೌರವದಿಂದ ಸ್ವಾಗತಿಸಬೇಕು. ಇದು ಸಮಾಜದ ಸಹಿಷ್ಣುತೆಗೆ ನೆರವಾಗಲಿದೆ: ಬಿಹಾರ ಸಿಎಂ ನಿತೀಶ್​ ಕುಮಾರ್
  • ಪ್ರತಿಯೊಬ್ಬರು ಸುಪ್ರೀಂಕೋರ್ಟ್​ ನ್ಯಾಯಾಲಯದ ತೀರ್ಪನ್ನು ಗೌರವಿಸಬೇಕು ಹಾಗೂ ಶಾಂತಿಯನ್ನು ಕಾಪಾಡಬೇಕು: ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ
  • ಅಯೋಧ್ಯ ತೀರ್ಪು ಒಂದು ಐತಿಹಾಸಿಕವಾದದ್ದು. ಜನತೆ ಶಾಂತಿ ಕಾಪಾಡುವಂತೆ ನಾನು ಮನವಿ ಮಾಡಿಕೊಳ್ಳುತ್ತೇನೆ: ರಕ್ಷಣಾ ಸಚಿಬ ರಾಜನಾಥ್ ಸಿಂಗ್
  • ಮುಂದೇ ಏನ್​ ಮಾಡಬೇಕು ಎಂಬುದರ ಬಗ್ಗೆ ಕೆಲ ಸಮಯದ ಬಳಿಕ ನಿರ್ಧಾರ ಮಾಡುತ್ತೇವೆ- ಸುನ್ನಿ ವಕ್ಫ್​ ಬೋರ್ಡ್​
  • ನಾವು ಸುಪ್ರೀಂಕೋರ್ಟ್​​ ತೀರ್ಪನ್ನು ಸ್ವಾಗತಿಸುತ್ತೇವೆ. ಆದರೆ ತೀರ್ಪು ಸಮಾಧಾನ ತಂದಿಲ್ಲ- ಸುನ್ನಿ ವಕ್ಫ್​ ಬೋರ್ಡ್​
  • ಅಯೋಧ್ಯ ವಿವಾದದ ಬಗ್ಗೆ ಸುಪ್ರೀಂಕೋರ್ಟ್​ ನೀಡಿದ ಅಂತಿಮ ತೀರ್ಪಿನಿಂದ ನನಗೆ ಸಂತಸವಾಗಿದೆ. ನ್ಯಾಯಾಲಯದ ಈ ತೀರ್ಪನ್ನು ನಾನು ಗೌರವಿಸುತ್ತೇನೆ: ಸುನ್ನಿ ವಕ್ಫ್​ ಮಂಡಳಿ ಪರ ಅರ್ಜಿ ಸಲ್ಲಿಸಿದ ಇಕ್ಬಲ್​​ ಅನ್ಸಾರಿ
  • ಸುನ್ನಿ ವಕ್ಫ್​​ ಮಂಡಳಿಗೆ 5 ಎಕರೆ ಜಮೀನು ನೀಡಲು ಸೂಚನೆ
  • ಕೇಂದ್ರ ಅಥವಾ ಉತ್ತರ ಪ್ರದೇಶ ರಾಜ್ಯ ಸರ್ಕಾರ ವಿಶೇಷ ಅಧಿಕಾರ ಬಳಸಿಕೊಂಡು ಅಯೋಧ್ಯೆಯಲ್ಲಿ ಜಮೀನು ನೀಡಬೇಕು
  • ಮೂರು ತಿಂಗಳ ಒಳಗೆ ಮಂದಿರ ನಿರ್ಮಾಣದ ಟ್ರಸ್ಟ್​ ರಚನೆ ಮಾಡಬೇಕು
  • ವಿವಾದಿತ ಭೂಮಿ ಕೇಂದ್ರದ ಅಧೀನದಲ್ಲಿ ಇರಲಿ
  • ವಿವಾದಿತ ರಚನೆಯ ಒಳ ಮತ್ತು ಹೊರ ಪ್ರಾಂಗಣವನ್ನು ಟ್ರಸ್ಟ್​ಗೆ ನೀಡಬೇಕು
  • ಅಲಹಬಾದ್​ ಹೈಕೋರ್ಟ್ ಮೂರು​ ಭಾಗ ಮಾಡಿ ತೀರ್ಪು ನೀಡಿದ್ದು ತಾರ್ಕಿಕವಲ್ಲ
  • ಮಸೀದಿ ಒಳಭಾಗದಲ್ಲಿ ಹಿಂದೂಗಳು ಕೂಡಾ ಪೂಜೆ ಸಲ್ಲಿಸಿದ್ದರು
  • ಮಸೀದಿಯಲ್ಲಿ ಮುಸ್ಲಿಮರಿಂದ ಸತತವಾಗಿ ನಮಾಜ್​ ನಡೆಯುತ್ತಲೇ ಬಂದಿದೆ
  • 1856- 57ಕ್ಕೂ ಮುಂಚೆ ಹಿಂದೂಗಳು ಪೂಜೆ ಮಾಡಲು ಯಾವುದೇ ಅಭ್ಯಂತರ ಇರಲಿಲ್ಲ ಎಂಬುದಕ್ಕೆ ಸಾಕ್ಷ್ಯ ಇದೆ
  • ಕಾನೂನಿನ ಸಾಕ್ಷ್ಯದ ಆಧಾರದ ಮೇಲೆ ಭೂಮಿ ಮಾಲೀಕನನ್ನ ಅಥವಾ ಹಕ್ಕನ್ನ ನಿರ್ಧರಿಸಲಾಗುತ್ತದೆ
  • ಪುರಾಣಗಳಲ್ಲೂ ರಾಮ ಲಲ್ಲಾ ಉಲ್ಲೇಖ ಇದೆ
  • ರಾಮನ ಇರುವಿಕೆ ನಂಬಿಕೆ ಅವರವರ ವೈಯಕ್ತಿಕ
  • ವಿವಾದಿತ ಜಾಗದಲ್ಲಿ ಎರಡೂ ಸಮುದಾಯಗಳು ಅವರವರ ನಂಬಿಕೆಯಂತೆ ಪೂಜೆ ಸಲ್ಲಿಸುತ್ತಿವೆ
  • ಕೇವಲ ನಂಬಿಕೆ ಇದ್ದ ಮಾತ್ರಕ್ಕೇ ಹಕ್ಕು ಸಾಬೀತು ಮಾಡಲು ಆಗಲ್ಲ
  • ಕಲಾಕೃತಿಗಳು ಇಸ್ಲಾಮಿಕ್​​​​ ರಚನೆ ಆಗಿರಲಿಲ್ಲ: ಸುಪ್ರೀಂ
  • ಮಂದಿರ ಒಡೆದು ಮಸೀದಿ ಕಟ್ಟಿದ ಬಗ್ಗೆ ಸಾಕ್ಷ್ಯಗಳೂ ಇಲ್ಲ
  • ಹಳೆಯ ಕಟ್ಟಡದ ಅಡಿ ವಿಶಾಲವಾದ ರಚನೆಯ ಕಲಾ ಕೃತಿಗಳಿವೆ
  • ಕಂದಾಯ ದಾಖಲೆ ಪ್ರಕಾರ ಸರ್ಕಾರಿ ಜಮೀನು ಆಗಿದೆ
  • ಬಾಬ್ರಿ ಮಸೀದಿ ಖಾಲಿ ಸ್ಥಳದಲ್ಲಿ ನಿರ್ಮಾಣ ಆಗಿರಲಿಲ್ಲ
  • ‘ಪುರಾತತ್ವ ಇಲಾಖೆ ಸಾಕ್ಷ್ಯಗಳನ್ನು ಪುರಸ್ಕರಿಸಲಾಗಿದೆ- ಸುಪ್ರೀಂ
  • ನಿರ್ಮೋಹಿ ಅಖಾರ ಅರ್ಜಿಯೂ ವಜಾ
  • ಸುನ್ನಿ ವಕ್ಫ್ ಮಂಡಳಿ ಅರ್ಜಿ ವಜಾ: ಇದು ಸರ್ವಾನುಮತ್ತದ ತೀರ್ಪು ನೀಡುತ್ತಿರುವ ಮುಖ್ಯನ್ಯಾಯಮೂರ್ತಿಗಳು
  • ಉತ್ತರ ಪ್ರದೇಶದಾದ್ಯಂತ ಧಾರ್ಮಿಕ ಮುಖಂಡರ ಹಾಗೂ ರಾಜಕೀಯ ನಾಯಕರೊಂದಿಗೆ 10,000 ಸಭೆ ನಡೆಸಲಾಗಿದೆ: ಯುಪಿ ಡಿಜಿಪಿ ಒ.ಪಿ. ಸಿಂಗ್​
  • ಶ್ರೀರಾಮ್​ ಲಿಲಾ ಭಕ್ತರು ದೇವಸ್ಥಾನಕ್ಕೆ ಭೇಟಿ ನೀಡುತ್ತಿದ್ದಾರೆ. ದೇಗುಲ ಭೇಟಿಗೆ ಯಾವುದೇ ರೀತಿಯ ನಿರ್ಬಂಧ ವಿಧಿಸಿಲ್ಲ. ಇಲ್ಲಿನ ಪರಿಸ್ಥಿತಿ ಸಾಮಾನ್ಯವಾಗಿದೆ: ಸಿಂಗ್

Intro:Body:Conclusion:
Last Updated : Nov 9, 2019, 7:27 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.