ETV Bharat / bharat

ವರ್ಕ್​ ಫ್ರಂ ಹೋಂ ಮಾಡುವವರು ಮರೆಯದೇ ಓದಿ.... ಬೆನ್ನು ನೋವಿಗೆ ಇಲ್ಲಿದೆ ಪರಿಹಾರ

ಈಗಂತೂ ವರ್ಕ್​ ಫ್ರಂ ಹೋಮ್​ ಮಾಡುವವರೇ ಹೆಚ್ಚು. ಮನೆಯ ವಾತಾವರಣದಲ್ಲಿ ನೀವು ಕಚೇರಿ ಕೆಲಸ ಮಾಡಿದರೆ ಖಂಡಿತವಾಗಿಯೂ ಬೆನ್ನು ನೋವು ಬರುತ್ತದೆ. ಆ ನೋವಿಗೆ ಉಪಶಮನ ಏನು? ಬೆನ್ನುನೋವು ಕಡಿಮೆ ಮಾಡುವ ವ್ಯಾಯಾಮಗಳು ಯಾವುವು? ಇಲ್ಲಿದೆ ಮಾಹಿತಿ

ವರ್ಕ್​ ಪ್ರಂ ಹೋಂ ಮಾಡೋರಿಗೆ ಒಳ್ಳೆ ಸುದ್ದಿ
ವರ್ಕ್​ ಪ್ರಂ ಹೋಂ ಮಾಡೋರಿಗೆ ಒಳ್ಳೆ ಸುದ್ದಿ
author img

By

Published : Apr 16, 2020, 1:30 PM IST

ಹೈದರಾಬಾದ್: ಲಾಕ್​ಡೌನ್​ನಿಂದ ಅದೆಷ್ಟೋ ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ ಮಾಡುವ ಅವಕಾಶವನ್ನು ಕಂಪನಿಗಳು ಒದಗಿಸಿಕೊಟ್ಟಿವೆ. ಆದರೆ, ಇದು ಒಂದು ಸವಾಲಿನ ಕೆಲಸವೂ ಹೌದು.

ಮನೆಯಲ್ಲಿ ಒಂದೇ ಸ್ಥಳದಲ್ಲಿ ಒಂದೇ ಭಂಗಿಯಲ್ಲಿ ಕೂತು ಕೆಲಸ ಮಾಡುವುದರಿಂದ ಬೆನ್ನು ನೋವಿಗೆ ಪ್ರಮುಖ ಕಾರಣವಾಗಬಹುದು. ಹೈದರಾಬಾದ್‌ನ ಕಿಮ್ಸ್‌ನ ಹಿರಿಯ ಆರ್ಥೋಪೆಡಿಕ್ ಕನ್ಸಲ್ಟೆಂಟ್ ಡಾ. ಉದಯ್ ಕೃಷ್ಣ ಮೈನೆನಿ ಈ ಬಗ್ಗೆ ವಿವರಣೆ ನೀಡಿದ್ದಾರೆ. ಬೆನ್ನಿನ ಕೆಳ ಭಾಗ ಹೆಚ್ಚು ನೋವಿಗೆ ಒಳಗಾಗುತ್ತದೆ. ಅಲ್ಲಿ ಬೆನ್ನುಮೂಳೆಯು ಸ್ವಲ್ಪ ಮೃದುವಾಗಿರುತ್ತದೆ. ಆದ್ದರಿಂದ, ನಾವು ಕುಳಿತುಕೊಳ್ಳುವಾಗ, ನಿಂತಿರುವಾಗ, ಮಲಗುವಾಗ ಅಥವಾ ಮುಂದಕ್ಕೆ ಬಾಗುವಾಗ ಸರಿಯಾದ ಭಂಗಿಯನ್ನು ಕಾಪಾಡಿಕೊಳ್ಳದಿದ್ದರೆ ಬೆನ್ನು ನೋವಿಗೆ ಕಾರಣವಾಗುತ್ತದೆ. ಅಲ್ಲದೆ, ಸರಿಯಾದ ಭಂಗಿಯನ್ನು ನಾವು ಕಾಪಾಡಿಕೊಳ್ಳದಿದ್ದರೆ ಡಿಸ್ಕ್, ಕಶೇರುಖಂಡ, ಸ್ನಾಯು ಮತ್ತು ಬೆನ್ನುಮೂಳೆಯ ಕೀಲುಗಳಿಂದ ನೋವು ಉದ್ಭವಿಸಬಹುದು ಎಂದಿದ್ದಾರೆ.

ನಿಮ್ಮ ಕಂಪ್ಯೂಟರ್ ಅಥವಾ ಲ್ಯಾಪ್‌ಟಾಪ್‌ಗಳ ಮುಂದೆ ಹೆಚ್ಚು ಹೊತ್ತು ಕುಳಿತುಕೊಳ್ಳುವುದು ನೋವುಗಳಿಗೆ ಕಾರಣವಾಗಬಹುದು, ನೋವು ಸಾಮಾನ್ಯವಾಗಿ ಬೆನ್ನಿನ ಮೇಲ್ಭಾಗ ಹಾಗೂ ಕೆಳ ಭಾಗದಲ್ಲಿ ಕಂಡುಬರುತ್ತದೆ. ಅಂತಹ ಸಮಸ್ಯೆಗಳಿರುವ 95% ಜನರಿಗೆ ಶಸ್ತ್ರಚಿಕಿತ್ಸೆಯಿಲ್ಲದೆ ಚಿಕಿತ್ಸೆ ನೀಡಬಹುದು ಇದಕ್ಕಾಗಿ ಈಕೆಳಗಿ ಕ್ರಮಗಳನ್ನು ಅನುಸರಿಸಿ ಎಂದು ಡಾ. ಉದಯ್​ ಹೇಳುತ್ತಾರೆ.

ಸರಿಯಾಗಿ ವಿಶ್ರಾಂತಿ ಪಡೆಯಿರಿ

ತುಂಬಾ ಗಟ್ಟಿಯಾಗು ಇರದ ಹಾಗೂ ಅತೀ ಮೃದುವಾಗಿಯೂ ಇರದ ಹಾಸಿಗೆ ಮೇಲೆ ಅಂಗಾತ ಮಲಗಿ ವಿಶ್ರಾಂತಿ ಪಡೆಯಬೇಕು. ನೆಲದ ಮೇಲೆ ಮಲಗುವುದರಿಂದ ನೋವನ್ನು ಮತ್ತಷ್ಟು ಉಲ್ಬಣಗೊಳಿಸುತ್ತದೆ. ಈ ಹಿನ್ನೆಲೆ ಸರಿಯಾದ ಭಂಗಿಯಲ್ಲಿ ಮಲಗಿ ವಿಶ್ರಾಂತಿ ಪಡೆಯುವುದರಿಂದ ನೋವು ನಿವಾರಣೆ ಮಾಡಿಕೊಳ್ಳಬಹುದು.

ದೇಹಕ್ಕೆ ಚಲನೆ ಕೊಡಿ

ಒಂದೇ ಸ್ಥಳದಲ್ಲಿ ಹೆಚ್ಚು ಹೊತ್ತು ಕುಳಿತುಕೊಳ್ಳುವುದು ಬಿಗಿತಕ್ಕೆ ಕಾರಣವಾಗಬಹುದು ಈ ಹಿನ್ನೆಲೆ ವಿರಾಮ ತೆಗೆದುಕೊಳ್ಳುವುದು ಮುಖ್ಯವಾಗುತ್ತದೆ. ಪ್ರತಿ 1 ಗಂಟೆಯ ನಂತರ, 10 ನಿಮಿಷಗಳ ವಿರಾಮ ತೆಗೆದುಕೊಂಡು ಈ ಕೆಳಗಿನವುಗಳನ್ನು ಮಾಡಿ:

( ಅಂಗಾತ ಮಲಗಿ ಎರಡೂ ಮೊಣಕಾಲುಗಳನ್ನು ಎದೆಯ ಹತ್ತಿರ ತರಬೇಕು. ಈ ವೇಳೆ ಮೊಣಕಾಲುಗಳನ್ನು ಕೈಗಳ ಸಹಾಯದಿಂದ ಎದೆಯ ಸಮೀಪ ತರಬೇಕು.)ನಿಮ್ಮ ಮನೆಯ ಸುತ್ತಲೂ ನಡೆಯಿರಿ

ಬೆನ್ನು ಮೂಳೆಯನ್ನು ಹಿಗ್ಗಿಸಿ

ನೆಲದ ಮೇಲೆ ಕುಳಿತುಕೊಂಡು ಎರಡೂ ಕಾಲುಗಳನ್ನು ಅಗಲ ಮಾಡಿ ಕೈಗಳನ್ನು ಮುಂದೆ ತರಬೇಕು. ನಂತರ ಕತ್ತನ್ನು ಕೆಳಗಡೆ ಬಾಗಿಸಬೇಕು. ಈ ಸಮಯದಲ್ಲಿ ನಿಮ್ಮ ಗಲ್ಲವನ್ನು ಕುತ್ತಿಗೆಗೆ ತಾಗಿಸಬೇಕು . ಇದೆಲ್ಲಕಿಂತ ಮುಖ್ಯವಾಗಿ ಈ ವೇಳೆ ಉಸಿರಾಟದ ಮೇಲೆ ನಿಗಾ ಇಡಬೇಕು.

ನಿಮ್ಮ ಬೆನ್ನನ್ನು ಹಿಗ್ಗಿಸಿ

ಭುಜವನ್ನು ಅಲುಗಾಡಿಸಿ

ನಿಮ್ಮ ಕುತ್ತಿಗೆಯನ್ನು ಪಕ್ಕಕ್ಕೆ, ಮೇಲಕ್ಕೆ ಮತ್ತು ಕೆಳಕ್ಕೆ ಸರಿಸಿ ಮತ್ತು ಎರಡೂ ದಿಕ್ಕುಗಳಲ್ಲಿ ತಿರುಗಿಸಿ

ಈ ವ್ಯಾಯಾಮವನ್ನು ನಿಧಾನವಾಗಿ ಮಾಡಬೇಕು.ಇದರಿಂದ ಸ್ನಾಯುಗಳಿಗೆ ವಿಶ್ರಾಂತಿ ಸಿಗಲು ಸಹಾಯ ಮಾಡುತ್ತದೆ. ರಕ್ತಪರಿಚಲನೆಯನ್ನು ಹೆಚ್ಚಿಸುತ್ತದೆ ಮತ್ತು ಸ್ನಾಯುವಿನ ಸೆಳೆತವು ನಿವಾರಣೆಯಾಗುತ್ತದೆ.

ಐಸ್​ಪ್ಯಾಕ್​ ಬಳಕೆ:

ಇಷ್ಟೆಲ್ಲಾ ಮಾಡಿದರೂ ಕೂಡ ನೋವು ನಿವಾರಣೆ ಆಗಲಿಲ್ಲ ಅಂದ್ರೆ, ಸ್ವಲ್ಪ ಐಸ್ ಪ್ಯಾಕ್ ಅಥವಾ ಹೀಟ್ ಪ್ಯಾಕ್ ಅನ್ನು ಬಳಕೆ ಮಾಡಿ. ಮನೆಯಲ್ಲಿ ಯಾವುದು ಲಭ್ಯವೋ ಅದನ್ನು ಬಳಸಿ ನೋವಾಗುವ ಜಾಗದ ಮೇಲೆ ಇರಿಸಿಬೇಕು. ಇಲ್ಲವಾದರೆ, ಬಿಸಿನೀರಿಗೆ ಟವಲ್​ ಅದ್ದಿದ ನಂತರ ನೋವಿರುವ ಜಾಗದಲ್ಲಿ ಟವಲ್​ನಿಂದ 10 ನಿಮಿಷಗಳ ಕಾಲ ನೋವಿರುವ ಜಾಗದಲ್ಲಿ ಇಡಬೇಕು. ಇದನ್ನು ದಿನಕ್ಕೆ ಮೂರು ಬಾರಿ ಮಾಡಿದರೆ ಉಪಶಮನವಾಗುತ್ತದೆ.

ಇಷ್ಟಾದರೂ ನೋವು ಇನ್ನೂ ಇದೆ ಅಂದ್ರೆ ನೀವು ವೈದ್ಯರನ್ನು ದೂರವಾಣಿ ಮೂಲಕ ಸಂಪರ್ಕ ಮಾಡಿ ಅಥವಾ ವೈಯುಕ್ತಿಕವಾಗಿ ಸಂಪರ್ಕಿಸಿ ಅವರಿಂದ ಉರಿಯೂತನ ಔಷಧವನ್ನು ಪಡೆದುಕೊಳ್ಳಬಹುದು.

ಲಾಕ್​ಡೌನ್​ ನಡುವೆ ಎಲ್ಲರೂ ಮನೆಯಲ್ಲಿ ಕೂತು ಕೆಲಸ ಮಾಡುವುದರಿಂದ ಈ ಸಮಸ್ಯೆಗಳು ಸಾಮಾನ್ಯವಾಗಿ ಬರುತ್ತವೆ. ಈ ಕಾರಣಕ್ಕಾಗಿ ಮನೆಯಲ್ಲೇ ನಿಯಮಿತವಾಗಿ ದೈಹಿಕ ಕೆಲಸಗಳನ್ನು ಮಾಡಬೇಕು. ಅಲ್ಲದೆ, ನಿಗದಿತ ಸಮಯಗಳಲ್ಲಿ ವಿರಾಮ ತೆಗೆದುಕೊಂಡು ದೇಹಕ್ಕೆ ಚಲನೆ ನೀಡಬೇಕು. ಕೆಲವು ಸ್ಟ್ರೆಚಿಂಗ್ ವ್ಯಾಯಾಮ ಮಾಡುವುದರಿಂದ ನಮಗೆ ಯಾವುದೇ ಜಿಮ್​ ಉಪಕರಣಗಳ ಅವಶ್ಯಕತೆ ಇರುವುದಿಲ್ಲ ಎಂದು ವೈದ್ಯ ಡಾ. ಉದಯ್​ ಸಲಹೆ ನೀಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.