ETV Bharat / bharat

ಒಂದೇ ದಿನ 628 ಹಕ್ಕಿಗಳು ಬಲಿ: ಜ್ವರಕ್ಕೆ 2,401 ವಲಸೆ ಹಕ್ಕಿಗಳು ಸಾವು! - ಏವಿಯನ್ ಶೀತಜ್ವರ ನ್ಯೂಸ್​

ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ ಪ್ರಕಾರ, ಈ ವೈರಸ್‌ಗಳು ವಿಶ್ವಾದ್ಯಂತ ಕಾಡು, ಜಲವಾಸಿ ಪಕ್ಷಿಗಳಲ್ಲಿ ಸ್ವಾಭಾವಿಕವಾಗಿ ಸಂಭವಿಸುತ್ತವೆ ಎಂದು ತಿಳಿದು ಬಂದಿದೆ.

Avian influenza cause
Avian influenza cause
author img

By

Published : Jan 4, 2021, 10:58 PM IST

ಶಿಮ್ಲಾ: ಮಹಾಮಾರಿ ಕೊರೊನಾ ವೈರಸ್ ಹಾವಳಿ ಕಡಿಮೆಯಾಗ್ತಿದ್ದಂತೆ ಇದೀಗ ಹಿಮಾಚಲಪ್ರದೇಶ ಸೇರಿದಂತೆ ಕೆಲವೆಡೆ ಹಕ್ಕಿ ಜ್ವರದ ಭೀತಿ ಶುರುವಾಗಿದೆ. ಕಳೆದ ಒಂದೇ ವಾರದಲ್ಲಿ ಹಿಮಾಚಲಪ್ರದೇಶದಲ್ಲಿ ಬರೋಬ್ಬರಿ 2,401 ವಲಸೆ ಹಕ್ಕಿಗಳು ಸಾವನ್ನಪ್ಪಿವೆ.

ಸಾವನ್ನಪ್ಪಿರುವ ಪಕ್ಷಿಗಳಲ್ಲಿ ಅರ್ಧಕ್ಕೂ ಹೆಚ್ಚು ಅಳಿವಿನಂಚಿನಲ್ಲಿರುವ ಬಾರ್​ ಹೆಡೆಡ್​ ಗೂಸ್​, ಕಪ್ಪು ತಲೆಯ ಗಲ್​, ರಿವರ್​ ಟರ್ನ್ ಸೇರಿಕೊಂಡಿವೆ ಎಂದು ಹಿಮಾಚಲಪ್ರದೇಶದ ವನ್ಯಜೀವಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Avian influenza cause
ಹಿಮಾಚಲದಲ್ಲಿ 2,401 ವಲಸೆ ಹಕ್ಕಿಗಳು ಸಾವು

ಓದಿ: ಯುಪಿಯಲ್ಲಿ ನೇಣಿಗೆ ಶರಣಾದ ದಂಪತಿ... ಕಾರಣ ನಿಗೂಢ!

ಸಾವನ್ನಪ್ಪುತ್ತಿರುವ ಹಕ್ಕಿಗಳು ಕಳೆದ ಮೂರು ವರ್ಷಗಳಿಂದ ಪಾಂಗ್​ ಗದ್ದೆಗಳಿಗೆ ಮಾತ್ರ ಭೇಟಿ ನೀಡುತ್ತಿದ್ದವು ಎಂದು ತಿಳಿದು ಬಂದಿದೆ. ಪಾಂಗ್​ ಕ್ಯಾಚ್​ಮೆಂಟ್​ ಪ್ರದೇಶದಲ್ಲೇ ಇಂದು ಬರೋಬ್ಬರಿ 628 ಪಕ್ಷಿಗಳು ಸಾವನ್ನಪ್ಪಿವೆ ಎಂದು ವನ್ಯಜೀವಿಗಳ ಪ್ರಧಾನ ಮುಖ್ಯ ಸಂರಕ್ಷಣಾಧಿಕಾರಿ ಅರ್ಚನಾ ಶರ್ಮಾ ತಿಳಿಸಿದ್ದಾರೆ. ಪಕ್ಷಿಗಳಲ್ಲಿ ಎಚ್​​5ಎನ್​1 ವೈರಸ್​ ಪತ್ತೆಯಾಗಿದ್ದು, ಹೆಚ್ಚಿನ ಮಾಹಿತಿಗಾಗಿ ಪಕ್ಷಿಗಳ ಕಳೇಬರ ವಿವಿಧ ಪ್ರಯೋಗಾಲಯಗಳಿಗೆ ಕಳುಹಿಸಲಾಗಿದೆ. ಇನ್ನು ಪಾಂಗ್​​ ಪ್ರದೇಶದ 10 ಕಿಲೋ ಮೀಟರ್​ ವ್ಯಾಪ್ತಿಯಲ್ಲಿ ಮಾನವ ಚಟುವಟಿಕೆ ನಿಷೇಧಿಸಲಾಗಿದೆ. ಹಕ್ಕಿ ಜ್ವರ ಮನುಷ್ಯರಿಗೆ ಹರಡಿ ಮಾರಕವಾಗಬಹುದು ಎನ್ನಲಾಗುತ್ತಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.