ಇಸ್ಲಾಮಾಬಾದ್: ಪಾಕಿಸ್ತಾನದ ಹಿಂದೂ ಧರ್ಮೀಯ ವೈದ್ಯಕೀಯ ವಿದ್ಯಾರ್ಥಿನಿ ನಿಮ್ರಿತಾ ಕುಮಾರಿ ಚಾಂದನಿ ಹಾಸ್ಟೆಲ್ ಕೋಣೆಯಲ್ಲಿ ಶವವಾಗಿ ಪತ್ತೆಯಾಗಿರುವ ಪ್ರಕರಣಕ್ಕೆ ಇದೀಗ ಸ್ಪಷ್ಟ ಉತ್ತರ ದೊರೆತಿದೆ.
ಸಿಂಧ್ ಪ್ರಾಂತ್ಯದಲ್ಲಿರುವ ಬೀಬಿ ಆಸೀಫಾ ದಂತ ವ್ಯದ್ಯಕೀಯ ಕಾಲೇಜಿನಲ್ಲಿ ಅಂತಿಮ ವರ್ಷದ ವಿದ್ಯಾರ್ಥಿನಿಯಾಗಿದ್ದ 25 ವರ್ಷದ ನಿಮ್ರಿತಾ, ಸೆಪ್ಟೆಂಬರ್ 16ರಂದು ಅನುಮಾನಾಸ್ಪದ ರೀತಿಯಲ್ಲಿ ಸಾವಿಗೀಡಾಗಿದ್ದರು. ಹಾಸ್ಟೆಲ್ ಕೊಠಡಿಯಲ್ಲಿ ಬೆಡ್ ಮೇಲೆ ನೇಣು ಬಿಗಿದ ಸ್ಥಿತಿಯಲ್ಲಿ ಆಕೆಯ ಮೃತದೇಹ ಪತ್ತೆಯಾಗಿತ್ತು. ಹಿಂದೂ ಧರ್ಮದ ಯುವತಿಯಾಗಿದ್ದ ಕಾರಣ ಆಕೆಯ ಸಾವು ವ್ಯಾಪಕ ಪ್ರತಿಭಟನೆಗೆ ಕಾರಣವಾಗಿತ್ತು.
ವರದಿಯಲ್ಲಿ ಏನಿದೆ?
ಮರಣೋತ್ತರ ಪರೀಕ್ಷೆಯ ವರದಿ ಪ್ರಕಾರ, ವಿದ್ಯಾರ್ಥಿನಿ ಮೇಲೆ ಅತ್ಯಾಚಾರವೆಸಗಿದ ಬಳಿಕವೇ ದುಷ್ಕರ್ಮಿಗಳು ಆಕೆಯನ್ನು ಉಸಿರುಗಟ್ಟಿಸಿ ಹತ್ಯೆಗೈದಿದ್ದಾರೆ. ಕುತ್ತಿಗೆ ಹಿಸುಕಿದ ಗುರುತು ಆಕೆಯ ಕತ್ತಿನಲ್ಲಿ ಕಂಡು ಬಂದಿದ್ದು, ಪುರುಷನ ಡಿಎನ್‌ಎ ಮೃತ ವಿದ್ಯಾರ್ಥಿನಿ ಬಟ್ಟೆ ಮೇಲೆ ಸಿಕ್ಕಿದೆ. ಪ್ರಕರಣದ ತನಿಖೆ ಮುಂದುವರೆದಿದೆ.