ETV Bharat / bharat

ರಾಷ್ಟ್ರ ರಾಜಧಾನಿಯಲ್ಲಿ ದಿಢೀರ್​ ಉಷ್ಣಾಂಶ ಕುಸಿತ: ಚಳಿಗೆ ನಡುಗುತ್ತಿದ್ದಾರೆ ದೆಹಲಿ ಜನ

ನವ ದೆಹಲಿಯಲ್ಲಿ ಕನಿಷ್ಠ ತಾಪಮಾನವು 10.6 ಡಿಗ್ರಿ ಸೆಲ್ಸಿಯಸ್‌ಗೆ ಇಳಿದಿದ್ದು, ನವೆಂಬರ್​​ನಲ್ಲಿ ಅತಿ ಕಡಿಮೆ ಉಷ್ಣಾಂಶ ದಾಖಲಾಗಿದೆ.

morning
ರಾಷ್ಟ್ರ ರಾಜಧಾನಿಯಲ್ಲಿ ದಿಢೀರ್​ ಉಷ್ಣಾಂಶ ಕುಸಿತ
author img

By

Published : Nov 4, 2020, 5:29 PM IST

ನವದೆಹಲಿ: ರಾಜಧಾನಿಯಲ್ಲಿ ಉಷ್ಣಾಂಶ ಕುಸಿತ ಕಂಡಿದ್ದು, ಕನಿಷ್ಠ ತಾಪಮಾನವು 10.6 ಡಿಗ್ರಿ ಸೆಲ್ಸಿಯಸ್‌ ಇಳಿದಿದೆ. ಇದು ಈ ಋತುವಿನಲ್ಲಿ ದಾಖಲಾದ ಅತ್ಯಂತ ಕಡಿಮೆ ಉಷ್ಣಾಂಶವಾಗಿದೆ.

ಇನ್ನು ನಾಲ್ಕು ದಿನ ಇದೇ ರೀತಿ ತಾಪಮಾನ ಕಡಿಮೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ. ಈ ಮೊದಲೇ ನವೆಂಬರ್​ ನಲ್ಲಿ ಭಾರಿ ಚಳಿ ಇರಲಿದೆ ಎಂದು ಐಎಂಡಿ ಮುನ್ಸೂಚನೆ ನೀಡಿತ್ತು.

ಹಿಮಾಚಲ ಪ್ರದೇಶದ ಡಾಲ್​ಹೌಸಿ( 10.9 ಡಿಗ್ರಿ ಸೆ.), ಧರ್ಮಶಾಲಾ ( 10.6 ಡಿಗ್ರಿ ಸೆ.), ಮತ್ತು ಮಂಡಿ,( 10.2 ಡಿಗ್ರಿ ಸೆ.), ಮಸ್ಸೂರಿ ಯಲ್ಲಿ 10.4 ಡಿಗ್ರಿ ಸೆ. ಅಂದರೆ ದೆಹಲಿಗಿಂತ ಕಡಿಮೆ ಉಷ್ಣಾಂಶ ದಾಖಲಾಗಿದೆ. ಹಿಮಾಚಲದ ಶಿಮ್ಲಾ ಮತ್ತು ಉತ್ತರಾಖಂಡ್​ದ ನೈನಿತಾಲ್​​ನ ದಿನದ ಉಷ್ಣಾಂಶ 10 ಸೆ. ಗಿಂತ ಕಡಿಮೆ ಇದೆ.

ಪಶ್ಚಿಮದಿಂದ ಬೀಸುತ್ತಿರುವ ಮಾರುತಗಳು ಈ ತಾಪಮಾನ ಕುಸಿತಕ್ಕೆ ಕಾರಣವಾಗಿದೆ ಎಂದು ತಿಳಿದು ಬಂದಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.