ಮೇಷ: ಇಂದು ಸಂಪೂರ್ಣವಾದ ಕ್ರಿಯೆಗಳನ್ನು ಒಳಗೊಂಡ ಸಮಸ್ಯಾತ್ಮಕ ದಿನವಾಗಿದೆ. ನೀವು ಕ್ಷುಲ್ಲಕ ವಿಷಯಗಳನ್ನು ನಿಮ್ಮ ಮಿತ್ರರೊಂದಿಗೆ ಒಪ್ಪುವುದಿಲ್ಲ, ಆದರೆ, ಅದನ್ನು ಇಷ್ಟಪಡುತ್ತೀರಿ. ಬಾಕಿ ಇರುವ ಎಲ್ಲ ಕೆಲಸವನ್ನೂ ನೀವು ಪೂರೈಸುತ್ತೀರಿ, ಅದು ನಿಮಗೆ ನಿರಾಳತೆ ನೀಡುತ್ತದೆ.
ವೃಷಭ: ಏನೂ ಚೆನ್ನಾಗಿಲ್ಲದ ದಿನಗಳಂತೆಯೇ ಇದೂ ಆಗಿದೆ. ನೀವು ಎಷ್ಟು ಕಷ್ಟಪಟ್ಟು ಪ್ರಯತ್ನಿಸಿದರೂ, ಸಮಸ್ಯೆಗಳು ಮತ್ತು ಕಷ್ಟಗಳನ್ನು ದೂರವಿರಿಸಲು ಸಾಧ್ಯವಾಗುತ್ತಿಲ್ಲ. ನಿಮಗೆ ನೀಡಲಾದ ಅಥವಾ ಅಗತ್ಯವಾದ ಕೆಲಸ ಮಾಡಲು ಸಂತೋಷವಿಲ್ಲ ಅಥವಾ ಅನುಕೂಲಕರವಾಗಿಲ್ಲ, ಸುಮ್ಮನೆ ಏನೂ ಮಾಡದೆ ಕುಳಿತುಕೊಳ್ಳುತ್ತೀರಿ. ಹಾಗೆ ಮಾಡಬೇಡಿ, ಯಾವುದೇ ಕಷ್ಟ ಅಥವಾ ಸಂಕೀರ್ಣವಾದುದನ್ನು ತೆಗೆದುಕೊಳ್ಳಿ. ಸರಳ ಮತ್ತು ಸಹಜ ವಿಷಯಗಳಲ್ಲಿ ತೊಡಗಿಕೊಳ್ಳಿರಿ. ಈ ದಿನವೂ ಮುಗಿಯುತ್ತದೆ ಎಂದು ತಿಳಿದರೆ ನೀವು ಧನಾತ್ಮಕ ಮತ್ತು ಆಶಾವಾದದಿಂದ ಕೂಡಿರುತ್ತೀರಿ.
ಮಿಥುನ: ನೀವು ಎತ್ತ ಸಾಗುತ್ತಿದ್ದೀರಿ ಎಂದು ನಿಮಗೆ ಗೊತ್ತು ಮತ್ತು ನಿಮ್ಮ ಗುರಿಗಳನ್ನು ಮುಟ್ಟಲು ನೀವು ನಿಮ್ಮ ಪ್ರಯತ್ನಗಳನ್ನು ದುಪ್ಪಟ್ಟು ಮಾಡುತ್ತೀರಿ. ನೀವು ಸಂಪೂರ್ಣ ಶಕ್ತಿ ಮತ್ತು ಉತ್ಸಾಹದಿಂದ ತುಂಬಿದ್ದೀರಿ, ಅದು ನಿಮಗೆ ನಿಮ್ಮ ಗುರಿಗಳನ್ನು ಸಾಧಿಸಲು ನೆರವಾಗುತ್ತದೆ. ನೀವು ನಿಮ್ಮ ಕಠಿಣ ಪರಿಶ್ರಮದಿಂದ ಅನಿರೀಕ್ಷಿತ ಲಾಭಗಳನ್ನು ಪಡೆಯುತ್ತೀರಿ. ಕಠಿಣ ದಿನದ ಶ್ರಮದ ನಂತರ ಅಪಾರ ಯಶಸ್ಸು ನಿಮ್ಮದಾಗುತ್ತದೆ.
ಕರ್ಕಾಟಕ: ಭಾವುಕರಾಗುವುದು ನಿಮ್ಮ ಯಶಸ್ಸಿನ ದಾರಿಯಲ್ಲಿ ಅಡ್ಡಿಯಾಗುತ್ತದೆ. ಆದ್ದರಿಂದ ಅತಿಯಾದ ಭಾವನಾತ್ಮಕತೆಯನ್ನು ಬಿಟ್ಟುಬಿಡಿ. ಇದು ಭವಿಷ್ಯಕ್ಕೆ ಅತ್ಯಂತ ಅಪಾಯಕಾರಿ. ಮಾತಿನ ಬಲ ಮತ್ತು ಸೌಜನ್ಯಪೂರ್ಣ ನಡವಳಿಕೆಯಿಂದ ನೀವು ಜನರನ್ನು ಗೆಲ್ಲುತ್ತೀರಿ.
ಸಿಂಹ: ಇಂದು ನಿಮ್ಮ ಆತ್ಮವಿಶ್ವಾಸ ಅತ್ಯಂತ ಹೆಚ್ಚಾಗಿದೆ. ನೀವು ಕೆಲಸದಲ್ಲಿ ಬಹಳ ಮಹತ್ವದ ನಿರ್ಧಾರಗಳನ್ನು ದೃಢವಾಗಿ ತೆಗೆದುಕೊಳ್ಳುತ್ತೀರಿ. ಇಂದು ಕೆಲಸ ಸುಸೂತ್ರವಾಗುವುದನ್ನು ಕಾಣುತ್ತೀರಿ ಮತ್ತು ಯಶಸ್ಸು ನಿಮ್ಮನ್ನು ಅನುಸರಿಸುತ್ತದೆ.
ಕನ್ಯಾ: ವೈಯಕ್ತಿಕ ವ್ಯವಹಾರಗಳು ವೃತ್ತಿಪರತೆಯನ್ನು ಮಸುಕಾಗಿಸುತ್ತವೆ. ಇಂದು ನೇರವಾಗಿ ನಿಮ್ಮ ಸಮಸ್ಯೆಗಳನ್ನು ಎದುರಿಸುವ ಮೂಲಕ ಅವುಗಳನ್ನು ದೂರ ತಳ್ಳಿರಿ. ಭಾವನಾತ್ಮಕವಾಗಿ ಮುಖ್ಯವಾಗಿ ಸಂಜೆಯ ವೇಳೆ ಸಿಲುಕಿಕೊಳ್ಳಬೇಡಿ.
ತುಲಾ: ದೀರ್ಘಕಾಲದಿಂದ ಅಥವಾ ಹಿಂದಿನ ಕಾನೂನು ಸಮಸ್ಯೆಗಳು ಕೊನೆಗೊಳ್ಳುತ್ತವೆ. ಅವುಗಳು ನ್ಯಾಯಾಲಯ ಅಥವಾ ಪರಸ್ಪರ ತಿಳಿವಳಿಕೆಯಿಂದ ಇತ್ಯರ್ಥವಾಗಬಹುದು. ಕಾರ್ಯದೊತ್ತಡ ಸಾಮಾನ್ಯವಾಗಿರುತ್ತದೆ ಮತ್ತು ಕೆಲ ಸಮಸ್ಯಾತ್ಮಕ ಸನ್ನಿವೇಶಗಳಿಂದ ಹೊರಬರಲು ಅತ್ಯುತ್ತಮ ಯೋಜನೆ ರೂಪಿಸಲು ನಿಮಗೆ ಸಮಯ ದೊರೆಯಬಹುದು.
ವೃಶ್ಚಿಕ: ಇಂದು ಕೆಲಸ ಅತಿಯಾಗಿರುತ್ತದೆ. ನೀವು ಇಂದು ಅತಿಯಾದ ಕಾರ್ಯದೊತ್ತಡ ಮತ್ತು ಜವಾಬ್ದಾರಿಗಳ ನಡುವೆ ಸಿಲುಕಿಕೊಳ್ಳುತ್ತೀರಿ. ಸಂಜೆ ನಿಮಗೆ ಹಗುರ ಹಾಗೂ ಶಾಂತಯುತವಾಗಿರಬಹುದು. ಮಿತ್ರರೊಂದಿಗೆ ಕಳೆದ ಕಾಲ ನವೋತ್ಸಾಹ ನೀಡುತ್ತದೆ.
ಧನು: ಈ ದಿನ ನಿಮಗೆ ಅತ್ಯಂತ ವಿವಾದಾತ್ಮಕ ಮತ್ತು ವದಂತಿಗಳ ದಿನವಾಗಿ ಬದಲಾಗಲಿದೆ. ನಿಮ್ಮ ಮೇಲೆ ತಮ್ಮ ಅಭಿಪ್ರಾಯಗಳನ್ನು ನೀಡಲು ಪ್ರಯತ್ನಿಸುವವರ ಜೊತೆಯಲ್ಲಿ ಆತ್ಮೀಯವಾಗಿರುವುದನ್ನು ಬಿಡಿ. ತಾಳ್ಮೆಯಿಂದ ಆಲಿಸಿದರೆ ಮತ್ತು ಅವರ ಅಭಿಪ್ರಾಯಗಳಿಗೆ ಅವಕಾಶ ನೀಡಿದರೆ ವಿವಾದಗಳು ಇತ್ಯರ್ಥವಾಗಬಹುದು.
ಮಕರ: ಇಂದು ನಿಮಗೆ ವಿಪರೀತ ಒತ್ತಡದ ಬಿಡುವಿಲ್ಲದ ದಿನವಾಗಿದೆ. ಅತಿಯಾದ ಉತ್ಸಾಹ ಬೇಡ ಮತ್ತು ಪ್ರತಿ ಕೆಲಸವನ್ನೂ ಅತ್ಯಂತ ಜಾಣ್ಮೆ ಮತ್ತು ವಿವೇಕದಿಂದ ಮಾಡಿರಿ. ಇದು ನಿಮಗೆ ಕಾರ್ಯದೊತ್ತಡ ಕಡಿಮೆ ಮಾಡಲು ನೆರವಾಗುತ್ತದೆ. ಕೂಲಂಕಷ ದೃಷ್ಟಿ, ಕುತೂಹಲ ಮತ್ತು ಸಂಘಟಿತವಾಗಿರುವುದು ಕೆಲಸ ಮಾಡುವಾಗ ತಪ್ಪುಗಳನ್ನು ಕಡಿಮೆ ಮಾಡುತ್ತದೆ.
ಕುಂಭ: ವಿಶ್ವದ ಎಲ್ಲ ಕಡೆಗಳಿಂದ ಏನೋ ಒಂದು ಸಕಾರಾತ್ಮಕತೆ ನಿಮ್ಮ ದಾರಿಯಲ್ಲಿದೆ. ಇಂದು ಇಡೀ ದಿನ ಧನಾತ್ಮಕ ಬೆಳಕಿನಲ್ಲಿದೆ. ನೀವು ನಿಮ್ಮ ಮಿತ್ರರು ಹಾಗೂ ಪ್ರೀತಿಪಾತ್ರರೊಂದಿಗೆ ದಿನವನ್ನು ಆನಂದಿಸುತ್ತೀರಿ.
ಮೀನ: ಕೆಲಸಕ್ಕೆ ಸಂಬಂಧಿಸಿದಂತೆ ನಿಮ್ಮ ಗ್ರಹಗಳು ಪರಿಪೂರ್ಣವಾಗಿ ಹೊಂದಿಕೊಂಡಿವೆ. ಕೆಲಸದಲ್ಲಿ ಇಂದು ನೀವು ಬಯಸಿದ ಫಲಿತಾಂಶವನ್ನು ಸ್ವಾಗತಿಸುತ್ತೀರಿ. ಆದ್ದರಿಂದ ಸಂತೋಷದಲ್ಲಿರುತ್ತೀರಿ. ಶೈಕ್ಷಣಿಕ ಉದ್ದೇಶಗಳಿಗೆ ಮನೆಯಿಂದ ಹೊರಗಡೆ ಹೋಗಲು ಬಯಸುವವರು ಪ್ರಗತಿಯನ್ನು ಕಾಣುತ್ತಾರೆ ಮತ್ತು ಅವರ ಕನಸಿನತ್ತ ಮುನ್ನಡೆಯುತ್ತಾರೆ.
ಮೇಷ: ನಿಮ್ಮ ಅಂತರ್-ವ್ಯಕ್ತೀಯ ಕೌಶಲ್ಯಗಳು ನಿಮಗೆ ಪೂರಕವಾಗಿರುತ್ತವೆ ಮತ್ತು ವಿಜಯದತ್ತ ಕೊಂಡೊಯ್ಯುತ್ತವೆ. ನಿಮ್ಮ ಆಲೋಚನೆಗಳು ಮತ್ತು ದೃಷ್ಟಿಕೋನಗಳನ್ನು ವ್ಯಕ್ತಪಡಿಸುವುದು ಅನುಕೂಲಕರವಾಗುತ್ತದೆ. ನೀವು ಪ್ರವರ್ಧಮಾನದ ಬ್ಯಾಲೆನ್ಸ್ ಶೀಟ್ ಕಾಣುವ ಸಾಧ್ಯತೆ ಇದೆ. ಏನೇ ಇರಲಿ, ಅಪಘಾತಗಳು ಅಥವಾ ಅನಾರೋಗ್ಯದ ಸಾಧ್ಯತೆಗಳಿರುವುದರಿಂದ ಅತ್ಯಂತ ಎಚ್ಚರಿಕೆ ವಹಿಸಿ.