ಮೇಷ: ಇಂದು ನೀವು ಸೂಕ್ಷ್ಮ ಕುಸುರಿ ಮತ್ತು ಸೌಂದರ್ಯಕ್ಕೆ ಗಮನ ನೀಡುತ್ತೀರಿ. ನೀವು ನಿಮ್ಮ ಸುತ್ತಲಿನ ಅಂತಹ ಸುಂದರ ವಸ್ತುಗಳ ಕುರಿತಾದ ಹೊಸ ಉದ್ಯಮ ಪ್ರಾರಂಭಿಸಲೂ ಬಯಸುತ್ತೀರಿ. ಆದರೆ ನಿರ್ಧಾರ ಕೈಗೊಳ್ಳುವುದು ಕಷ್ಟದ ಕೆಲಸ. ಆಯ್ಕೆಗಳನ್ನು ಆವಿಷ್ಕರಿಸಿ ಮತ್ತು ಮುಕ್ತ ಮನಸ್ಸಿನಲ್ಲಿರಿ.
ವೃಷಭ: ಇಂದು ನಿಮ್ಮೊಂದಿಗೆ ಕೊಂಚ ಗುಣಮಟ್ಟದ ಸಮಯ ಕಳೆಯಲು ಅತ್ಯಂತ ಸೂಕ್ತವಾದ ದಿನವಾಗಿದೆ. ಹಿಂದೆಂದೂ ಇಲ್ಲದಂತೆ ನಿರಾಳವಾಗಿ ಮತ್ತು ನವೋತ್ಸಾಹ ತುಂಬಿಕೊಳ್ಳಿರಿ. ಈ ದಿನದಲ್ಲಿ ನಿಮ್ಮ ಮಿತ್ರರು ಹಾಗೂ ಕುಟುಂಬದೊಂದಿಗೆ ಭೋಜನಕೂಟ ಹಾಗೂ ಮನರಂಜನೆ ಪಡೆಯುವ ಸಾಧ್ಯತೆ ಇದೆ. ನೀವು ಅತ್ಯಂತ ಖಾರ, ಸವಿಯಾದ ಮತ್ತು ಸ್ವಾದಿಷ್ಟ ತಿನಿಸನ್ನು ಬಯಸುತ್ತೀರಿ, ಎಷ್ಟು ಸಾಧ್ಯವೋ ಅಷ್ಟು ನಿಮ್ಮನ್ನು ನೀವು ತಣಿಸಿಕೊಳ್ಳಿ.
ಮಿಥುನ: ಇಂದು ನೀವು ಸಂಪೂರ್ಣ ಚೈತನ್ಯ ಮತ್ತು ಅತ್ಯಂತ ಉತ್ಸಾಹದಲ್ಲಿರುತ್ತೀರಿ. ನೀವು ವಿಷಯಗಳನ್ನು ಸಕಾರಾತ್ಮಕತೆ ಬೆಳಕಲ್ಲಿ ನೋಡುತ್ತೀರಿ ಅದು ನಿಮ್ಮನ್ನು ಯಶಸ್ಸಿನತ್ತ ನಡೆಯಲು ನೆರವಾಗುತ್ತದೆ. ನೀವು ಸಂಪೂರ್ಣ ಮುಕ್ತವಾಗಿ ಕಾರ್ಯ ನಿರ್ವಹಿಸಲು ಶಕ್ತರಾಗುತ್ತೀರಿ, ಆದ್ದರಿಂದ ನಿಮಗೆ ಇಷ್ಟವಾಗುವ ವಿಷಯಗಳನ್ನು ತೆಗೆದುಕೊಳ್ಳುತ್ತೀರಿ. ನಿಮಗೆ ಅತ್ಯಂತ ಒತ್ತಡವಿರಬಹುದು, ಆದರೆ ಅದು ಶಾಂತಿಯುತ ಮತ್ತು ಪುರಸ್ಕಾರಯುತ ಫಲಿತಾಂಶಗಳನ್ನು ನೀಡುತ್ತದೆ.
ಕರ್ಕಾಟಕ: ನಿಮ್ಮ ಕುಟುಂಬ ನೆರವಿನ ಹಸ್ತ ಚಾಚದೇ ಇರಬಹುದು. ಆದ್ದರಿಂದ ನಿಮ್ಮ ಪ್ರಯತ್ನಗಳು ವಿಫಲವಾಗುತ್ತವೆ. ನಿಮ್ಮ ಮಕ್ಕಳು ಕೂಡಾ ನಿಮ್ಮನ್ನು ನಿರುತ್ಸಾಹಗೊಳಿಸುತ್ತಾರೆ. ನೀವು ನಿಮ್ಮ ಕುಟುಂಬದ ನಡುವೆ ಭಿನ್ನಾಭಿಪ್ರಾಯ ಎದುರಿಸಬಹುದು. ನೆರೆಹೊರೆಯವರ ಬಗ್ಗೆ ಎಚ್ಚರದಿಂದಿರಿ ಮತ್ತು ನಿಮ್ಮ ಸನ್ನಿವೇಶಗಳನ್ನು ಘನತೆ ಮತ್ತು ಸಮಚಿತ್ತತೆಯಿಂದ ಎದುರಿಸಿ.
ಸಿಂಹ: ಇಂದು ನಿರ್ಧಾರಗಳನ್ನು ಕೈಗೊಳ್ಳಲು ಇತರರ ಅಭಿಪ್ರಾಯಗಳನ್ನು ನಿರೀಕ್ಷಿಸುತ್ತೀರಿ. ನೀವು ಸಂವಹನದಲ್ಲಿ ಇತರರನ್ನು ತಾಳ್ಮೆಯಿಂದ ಆಲಿಸಬೇಕು. ನಿಮ್ಮ ಆತ್ಮವಿಶ್ವಾಸ ಕುಸಿಯುತ್ತಿದೆ, ಆದ್ದರಿಂದ, ಯಾವುದೇ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವುದನ್ನು ತಪ್ಪಿಸಿ.
ಕನ್ಯಾ: ನಿಮ್ಮತ್ತ ಎಸೆಯಲಾಗಿರುವ ಹಣಕಾಸಿನ ಸವಾಲುಗಳನ್ನು ನೀವು ಪ್ರೀತಿಸುವುದು ಖಂಡಿತವಾಗಿಯೂ ಸಾಧ್ಯ, ಏಕೆಂದರೆ ಅವು ನಿಮ್ಮ ಯಶಸ್ಸಿಗೆ ನಿಮ್ಮನ್ನು ಮತ್ತಷ್ಟು ಸಾಣೆ ಹಿಡಿಯುತ್ತವೆ. ನೀವು ಸಮಸ್ಯೆ ಪರಿಹಾರದ ಆವಿಷ್ಕಾರಕ ಆಲೋಚನೆಗಳು ಮತ್ತು ಸುಧಾರಿತ ವಿಧಾನಗಳನ್ನು ಕಂಡುಕೊಳ್ಳುತ್ತೀರಿ. ನಿಮ್ಮ ಪ್ರಸ್ತುತದ ವ್ಯಾಪಾರದ ಆಲೋಚನೆಗಳು ಅದ್ಭುತಗಳನ್ನು ಉಂಟು ಮಾಡಲಿವೆ.
ತುಲಾ: ಕ್ಷುಲ್ಲಕ ವಿಷಯಗಳ ಕುರಿತು ನೀವು ತಲೆ ಕೆಡಿಸಿಕೊಳ್ಳುವುದು ಅಥವಾ ಆತಂಕಗೊಳ್ಳುವುದು ಅಗತ್ಯವಿಲ್ಲ. ಒತ್ತಡ ನಿವಾರಿಸಲು ಪ್ರಯತ್ನಿಸುವಾಗ ಧ್ಯಾನ ನಿಮಗೆ ಅತ್ಯಂತ ಪ್ರಯೋಜನಕಾರಿಯಾಗುತ್ತದೆ. ನೀವು ಅತಿಯಾದ ಕೆಲಸದ ಒತ್ತಡಕ್ಕೆ ಸಿಲುಕಬಹುದು. ಆದ್ದರಿಂದ ಕೆಲಸದಲ್ಲಿ ಅಥವಾ ಮತ್ತಾವುದರಲ್ಲೇ ಆಗಲಿ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಅನುಕೂಲ ಮತ್ತು ಅನನುಕೂಲಗಳನ್ನು ಅಳೆದು ತೂಗಿರಿ.
ವೃಶ್ಚಿಕ: ನೀವು ಇಂದು ಅತ್ಯಂತ ಪರಿಪೂರ್ಣವಾಗಿದ್ದೀರಿ. ನಿಮ್ಮ ಕೆಲಸವನ್ನು ತಲುಪುವ ಮೊದಲಿಗರು ನೀವು ಮತ್ತು ಕೆಲಸದಲ್ಲಿ ಸಂಘಟಿತ ಫ್ಲೋ-ಚಾರ್ಟ್ ಅನುಸರಿಸುತ್ತೀರಿ. ಇಂದು ನೀವು ನಿಮ್ಮ ಸುತ್ತಲಿನವರಿಗೆ ಉದಾಹರಣೆಯಾಗುತ್ತೀರಿ.
ಧನು: ನಿಮ್ಮ ಪ್ರೀತಿ ಚಲನೆಯಲ್ಲಿರುವಂತೆ ಕಾಣುತ್ತಿದೆ. ನೀವು ಪ್ರಣಯದ ಅಥವಾ ತಾರೆಗಳ ಪ್ರಭಾವದಲ್ಲಿದ್ದೀರಿ ಮತ್ತು ಆದ್ದರಿಂದ ನೀವು ಸ್ಮಾರ್ಟ್ ವ್ಯಕ್ತಿಯನ್ನು ಸೆಳೆಯಬಹುದು. ಆದರೆ, ಅತ್ಯಂತ ಜಾಗರೂಕರಾಗಿರಿ ಮತ್ತು ನಿಮ್ಮ ಪ್ರೀತಿಯ ಆಸಕ್ತಿಯನ್ನು ಮುಂದಕ್ಕೆ ಕೊಂಡೊಯ್ಯುವುದನ್ನು ತಪ್ಪಿಸಿ.
ಮಕರ: ನಿಮ್ಮ ದಿನಚರಿ ಅತ್ಯಂತ ಒತ್ತಡದಲ್ಲಿದೆ ಮತ್ತು ನೀವು ದಿನದ ಅಂತ್ಯಕ್ಕೆ ಮಾನಸಿಕವಾಗಿ ಹಾಗೂ ದೈಹಿಕವಾಗಿ ಬರಿದಾಗುತ್ತೀರಿ. ಹೊರಗಡೆ ಸ್ಪರ್ಧಾತ್ಮಕ ಜಗತ್ತು ಇದೆ, ಆದ್ದರಿಂದ ಅತ್ಯಂತ ಜಾಗರೂಕತೆ ವಹಿಸಿ. ನಿಮ್ಮ ಪ್ರತಿಸ್ಪರ್ಧಿಗಳು ನಿಮ್ಮ ಕಾಲೆಳೆಯಲು ಒಂದು ಸಣ್ಣ ಅವಕಾಶ ದೊರೆತರೂ ಸಾಕು ಎಂದು ಕಾಯುತ್ತಿದ್ದಾರೆ. ಜಾಣ್ಮೆಯಿಂದಿರಿ ಮತ್ತು ನಿಮ್ಮನ್ನು ಕೆಳಕ್ಕೆಳೆಯಲು ಪ್ರಯತ್ನಿಸಿದವರಿಗೆ ಎಲ್ಲವನ್ನೂ ಹಿಂದಿರುಗಿಸಿ ನೀಡಿ.
ಕುಂಭ: ಶೈಕ್ಷಣಿಕ ವಿಷಯಕ್ಕೆ ಬಂದರೆ ನಿಮಗೆ ಅಸಾಧಾರಣ ಫಲಿತಾಂಶಗಳನ್ನು ಪಡೆಯುತ್ತೀರಿ. ನೀವು ಡೈನಮೈಟ್ನಂತೆ ಕಾರ್ಯ ನಿರ್ವಹಿಸುತ್ತೀರಿ ಮತ್ತು ನಿಮ್ಮ ಸುತ್ತಲಿನ ಬಹುತೇಕರನ್ನು ಪ್ರೇರೇಪಿಸುತ್ತೀರಿ. ನಿಮ್ಮ ಇಮೇಜ್ ಕುರಿತು ಎಚ್ಚರವಾಗಿರಿ, ಅತಿಯಾದ ಮಹತ್ವಾಕಾಂಕ್ಷೆಗೆ ಬೀಳಬೇಡಿ. ಜನರ ಕುರಿತಾಗಿ ನಮ್ರ ಮತ್ತು ಸಹಾನುಭೂತಿಯನ್ನು ಬೆಳೆಸಿಕೊಳ್ಳಿ.
ಮೀನ: ದಣಿವಿರದೆ ಹಾಗೂ ಅತ್ಯಂತ ಕಠಿಣ ಪರಿಶ್ರಮಪಡುವವರಿಗೆ, ಇದು ಅತ್ಯುತ್ತಮ ದಿನವಾಗಿದೆ. ಇಂದು ನಿಮ್ಮ ಕೆಲಸದಲ್ಲಿ ಆವಿಷ್ಕಾರ ಮತ್ತು ಸೃಜನಶೀಲತೆಯನ್ನು ತರುತ್ತೀರಿ. ದೇವರ ಆಶೀರ್ವಾದ ಯಶಸ್ಸಿಗೆ ದಾರಿಯಾಗುತ್ತದೆ, ಆದ್ದರಿಂದ ಶ್ರಮವಹಿಸಿ ಕೆಲಸ ಮಾಡಿ ಮತ್ತು ವೈಫಲ್ಯಗಳಿಂದ ಕಂಗೆಡಬೇಡಿರಿ.