ETV Bharat / bharat

ಹರಿಯಾಣ, ಮಹಾರಾಷ್ಟ್ರ ಚುನಾವಣೆ: 2 ಕೋಟಿ ಮತದಾರರಿಂದ 4,406 ಅಭ್ಯರ್ಥಿಗಳ ಭವಿಷ್ಯ ನಿರ್ಧಾರ

ಲೋಕ ಸಮರದಲ್ಲಿ ಹೀನಾಯ ಸೋಲು ಕಂಡಿದ್ದ ಕಾಂಗ್ರೆಸ್​ಗೆ ಇದು ಗೆಲುವಿನ ಹಳಿಗೆ ಮರಳಲು ಉತ್ತಮ ಅವಕಾಶವಾಗಿದ್ದರೆ, ಚುನಾವಣೆ ನಡೆಯುತ್ತಿರುವ ಎರಡೂ ರಾಜ್ಯದಲ್ಲಿ ಅಧಿಕಾರ ಹೊಂದಿರುವ ಬಿಜೆಪಿಗೆ ಆಡಳಿತ ಉಳಿಸಿಕೊಳ್ಳುವ ಸವಾಲು ಮುಂದಿದೆ.

ಮತದಾನ
author img

By

Published : Oct 21, 2019, 7:55 AM IST

ನವದೆಹಲಿ: ಲೋಕಸಭಾ ಚುನಾವಣೆ ಮುಕ್ತಾಯದ ಬಳಿಕ ನಡೆಯುತ್ತಿರುವ ಎರಡು ವಿಧಾನಸಭಾ ಚುನಾವಣೆಗೆ ವೇದಿಕೆ ಸಜ್ಜಾಗಿದ್ದು, ಇಂದು ಮಹಾರಾಷ್ಟ್ರ ಹಾಗೂ ಹರಿಯಾಣದಲ್ಲಿ ಮತದಾನ ಆರಂಭವಾಗಿದೆ. ಇದರ ಜೊತೆಗೆ 18 ರಾಜ್ಯಗಳ 51 ವಿಧಾನಸಭಾ ಹಾಗೂ ಎರಡು ಲೋಕಸಭಾ ಕ್ಷೇತ್ರಗಳಿಗೆ ಇಂದು ಉಪ ಚುನಾವಣೆ ನಡೆಯುತ್ತಿದೆ.

ಲೋಕ ಸಮರದಲ್ಲಿ ಹೀನಾಯ ಸೋಲು ಕಂಡಿದ್ದ ಕಾಂಗ್ರೆಸ್​ಗೆ ಇದು ಗೆಲುವಿನ ಹಳಿಗೆ ಮರಳಲು ಉತ್ತಮ ಅವಕಾಶವಾಗಿದ್ದರೆ, ಚುನಾವಣೆ ನಡೆಯುತ್ತಿರುವ ಎರಡೂ ರಾಜ್ಯದಲ್ಲಿ ಅಧಿಕಾರ ಹೊಂದಿರುವ ಬಿಜೆಪಿಗೆ ಆಡಳಿತ ಉಳಿಸಿಕೊಳ್ಳುವ ಸವಾಲು ಮುಂದಿದೆ. ಎರಡೂ ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದು, ಹರಿಯಾಣದಲ್ಲಿ ಮನೋಹರ್ ಲಾಲ್ ಖಟ್ಟರ್ ಹಾಗೂ ಮಹಾರಾಷ್ಟ್ರದಲ್ಲಿ ದೇವೇಂದ್ರ ಫಡ್ನಾವೀಸ್​ ಐದು ವರ್ಷ ಅಧಿಕಾರ ನಡೆಸಿದ್ದಾರೆ.

'ಮಹಾ' ಬಂಡಾಯದ ಬಿಸಿಗೆ ಕರಗುತ್ತಾ ಬಿಜೆಪಿ..?

'ಮಹಾ' ಕದನ ಕಣ ಹೇಗಿದೆ..?

ಮಹಾರಾಷ್ಟ್ರದ 288 ಕ್ಷೇತ್ರಗಳಿಗೆ ಚುನಾವಣೆ ನಡೆಯುತ್ತಿದ್ದರೆ, 3,237 ಅಭ್ಯರ್ಥಿಗಳು ಕಣದಲ್ಲಿದ್ದಾರೆ. 96,661 ಪೋಲಿಂಗ್ ಬೂತ್​​ಗಳಲ್ಲಿ 6.5 ಲಕ್ಷ ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದಾರೆ.

2014ರ ಚುನಾವಣಾ ಫಲಿತಾಂಶ:

  • ಬಿಜೆಪಿ - 122
  • ಶಿವ ಸೇನಾ - 63
  • ಕಾಂಗ್ರೆಸ್ - 42
  • ಎನ್​ಸಿಪಿ - 41

ಹರಿಯಾಣ ದಂಗಲ್ ಸ್ಥಿತಿ ಇದು..!

1.83 ಕೋಟಿ ಮತದಾರರು ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ಮತ ಚಲಾಯಿಸಲಿದ್ದಾರೆ. ಹರಿಯಾಣದ 90 ಕ್ಷೇತ್ರದಲ್ಲಿ 1,169 ಮಂದಿ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ.

ಹರಿಯಾಣದಲ್ಲಿ ಮೋದಿ ಮಿತ್ರನಿಗಿದ್ಯಾ ಸೆಕೆಂಡ್ ಚಾನ್ಸ್​? 'ಕೈ'ಗೆ ಬಿಸಿ, ಬಿಎಸ್ಪಿ ಏಕಾಂಗಿ! ಸಂಪೂರ್ಣ ಚಿತ್ರಣ

2014ರ ವಿಧಾನಸಭಾ ಚುನಾವಣಾ ಫಲಿತಾಂಶ:

  • ಬಿಜೆಪಿ - 47
  • ಐಎನ್​​ಎಲ್​ಡಿ - 19
  • ಕಾಂಗ್ರೆಸ್ - 15
  • ಹರಿಯಾಣ ಜನಹಿತ ಕಾಂಗ್ರೆಸ್ - 2
  • ಬಿಎಸ್ಪಿ - 1
  • ಶಿರೋಮಣಿ ಅಕಾಲಿ ದಳ - 1
  • ಸ್ವತಂತ್ರ ಅಭ್ಯರ್ಥಿಗಳು - 5

Intro:Body:

ನವದೆಹಲಿ: ಲೋಕಸಭಾ ಚುನಾವಣೆ ಮುಕ್ತಾಯದ ಬಳಿಕ ನಡೆಯುತ್ತಿರುವ ಎರಡು ವಿಧಾನಸಭಾ ಚುನಾವಣೆಗೆ ವೇದಿಕೆ ಸಜ್ಜಾಗಿದ್ದು, ಇಂದು ಮಹಾರಾಷ್ಟ್ರ ಹಾಗೂ ಹರಿಯಾಣ ಮತದಾನ ಆರಂಭವಾಗಿದೆ. ಇದರ ಜೊತೆಗೆ 18 ರಾಜ್ಯಗಳ 51 ವಿಧಾನಸಭಾ ಹಾಗೂ ಎರಡು ಲೋಕಸಭಾ ಕ್ಷೇತ್ರಗಳಲಿ ಇಂದು ಉಪಚುನಾವಣೆ ನಡೆಯುತ್ತಿದೆ.

ಲೋಕಸಮರದಲ್ಲಿ ಹೀನಾಯ ಸೋಲು ಕಂಡಿದ್ದ ಕಾಂಗ್ರೆಸ್​ಗೆ ಇದು ಗೆಲುವಿನ ಹಳಿಗೆ ಮರಳಲು ಉತ್ತಮ ಅವಕಾಶವಾಗಿದ್ದರೆ, ಚುನಾವಣೆ ನಡೆಯುತ್ತಿರುವ ಎರಡೂ ರಾಜ್ಯದಲ್ಲಿ ಅಧಿಕಾರ ಹೊಂದಿರುವ ಬಿಜೆಪಿಗೆ ಆಡಳಿತ ಉಳಿಸಿಕೊಳ್ಳುವ ಸವಾಲು ಮುಂದಿದೆ.

'ಮಹಾ' ಕದನ ಕಣ ಹೇಗಿದೆ..?

ಮಹಾರಾಷ್ಟ್ರದ 288 ಕ್ಷೇತ್ರಗಳಿಗೆ ಚುನಾವಣೆ ನಡೆಯುತ್ತಿದ್ದರೆ 3,237 ಅಭ್ಯರ್ಥಿಗಳು ಕಣದಲ್ಲಿದ್ದಾರೆ. 96,661 ಪೋಲಿಂಗ್ ಬೂತ್​​ದಲ್ಲಿ 6.5 ಲಕ್ಷ ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದಾರೆ.

2014ರ ಚುನಾವಣಾ ಫಲಿತಾಂಶ:

ಬಿಜೆಪಿ - 122

ಶಿವ ಸೇನಾ - 63

ಕಾಂಗ್ರೆಸ್ - 42

ಎನ್​ಸಿಪಿ - 41

ಹರಿಯಾಣ ದಂಗಲ್ ಸ್ಥಿತಿ ಇದು..!

1.83 ಕೋಟಿ ಮತದಾರರು ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ಮತ ಚಲಾಯಿಸಲಿದ್ದಾರೆ. ಹರಿಯಾಣದ 90 ಕ್ಷೇತ್ರದಲ್ಲಿ 1,169 ಮಂದಿ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ.

2014ರ ವಿಧಾನಸಭಾ ಚುನಾವಣಾ ಫಲಿತಾಂಶ:

    ಬಿಜೆಪಿ - 47

    ಐಎನ್​​ಎಲ್​ಡಿ - 19

    ಕಾಂಗ್ರೆಸ್ - 15

    ಹರಿಯಾಣ ಜನಹಿತ ಕಾಂಗ್ರೆಸ್ - 2

    ಬಿಎಸ್ಪಿ - 1

    ಶಿರೋಮಣಿ ಅಕಾಲಿ ದಳ - 1

    ಸ್ವತಂತ್ರ ಅಭ್ಯರ್ಥಿಗಳು - 5

ಎರಡೂ ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದು, ಹರಿಯಾಣದಲ್ಲಿ ಮನೋಹರ್ ಲಾಲ್ ಖಟ್ಟರ್ ಹಾಗೂ ಮಹಾರಾಷ್ಟ್ರದಲ್ಲಿ ದೇವೇಂದ್ರ ಫಡ್ನವೀಸ್ ಐದು ವರ್ಷ ಅಧಿಕಾರ ನಡೆಸಿದ್ದಾರೆ. 

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.