ಮಣಿಪುರ: ಅಸ್ಸಾಂ ರೈಫಲ್ಸ್ ಸಿಬ್ಬಂದಿ ಓರ್ವ ವ್ಯಕ್ತಿಯನ್ನು ಬಂಧಿಸಿ 76 ಲಕ್ಷ ರೂಪಾಯಿ ಮೌಲ್ಯದ 380 ಗ್ರಾಂ ಬ್ರೌನ್ ಶುಗರ್ ವಶಪಡಿಸಿಕೊಂಡಿದ್ದಾರೆ.
ಅಸ್ಸಾಂ ರೈಫಲ್ಸ್ನ ಇನ್ಸ್ಪೆಕ್ಟರ್ ಜನರಲ್ ಅಧಿಕೃತ ಪ್ರಕಟಣೆಯ ಪ್ರಕಾರ, ಭಾರತ-ಮ್ಯಾನ್ಮಾರ್ ಬಾರ್ಡರ್ನಲ್ಲಿ ಮಾದಕ ವಸ್ತುಗಳ ಸಾಗಾಟದ ಬಗ್ಗೆ ನಿರ್ದಿಷ್ಟ ಮಾಹಿತಿ ಆಧರಿಸಿ ಮೊಲೆಹ್ ಬೆಟಾಲಿಯನ್ ತಂಡವು ಹಾಲೆನ್ಫೈ ಗ್ರಾಮದಲ್ಲಿ ಶಂಕಿತ ವ್ಯಕ್ತಿಯ ಚಲನೆಯನ್ನು ಗಮನಿಸಿದೆ.
ಭದ್ರತಾ ಪಡೆಗಳನ್ನು ನೋಡಿದ ನಂತರ ಆತ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದಾನೆ. ಆದರೆ ನಮ್ಮ ಸಿಬ್ಬಂದಿ ಆತನನ್ನು ಹಿಡಿಯುವಲ್ಲಿ ಯಶಸ್ವಿಯಾಗಿದೆ ಎಂದು ಪ್ರಕಟಣೆ ತಿಳಿಸಿದೆ. ಸಂಪೂರ್ಣ ಪರಿಶೀಲನೆ ನಂತರ ಸುಮಾರು 76 ಲಕ್ಷ ಮೌಲ್ಯದ 380 ಗ್ರಾಂ ಬ್ರೌನ್ ಶುಗರ್ ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಆರಂಭಿಕ ತನಿಖೆಯಲ್ಲಿ, ಅವರು ಮೋರೆಹ್ನ ಇ.ಎಂ.ಲಾಂಗೋಯಿ ಪ್ರದೇಶದ ನಿವಾಸಿ, ಮಾಂಗ್ಖೋಥಾಂಗ್ ಮೇಟ್ ಅವರ ಪುತ್ರ ಸೈಮಂತಾಂಗ್ ಮೇಟ್ ಎಂದು ತಿಳಿಸಿದ್ದಾನೆ. ಚೆಕ್ ಪೋಸ್ಟ್‌ಗಳನ್ನು ದಾಟಿ ಖೋಡೆಂಗ್ಥಾಬಿಯನ್ನು ನಂತರ ಮೊರೆಹ್‌ಗೆ ಸಾಗಿಸಲು ಬರ್ಮೀಸ್ ವ್ಯಕ್ತಿಯೊಬ್ಬ ಕೇಳಿಕೊಂಡಿದ್ದ ಎಂದು ಮಾಹಿತಿ ನೀಡಿದ್ದಾನೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.