ಗುವಾಹಟಿ(ಅಸ್ಸೋಂ): ತಿನಸುಕಿಯಾ ಜಿಲ್ಲೆಯ ಬಾಘ್ಜನ್ ಬಳಿಯಿರುವ ಆಯಿಲ್ ಇಂಡಿಯಾ ಲಿಮಿಟೆಡ್‌ನಲ್ಲಿ ಅನಿಲ ಬಾವಿಗೆ ತಗುಲಿರುವ ಬೆಂಕಿ ಇನ್ನೂ ಆರುವ ಲಕ್ಷಣಗಳು ಕಾಣಿಸುತ್ತಿಲ್ಲ.
ಅಸ್ಸೋಂನ ಆಯಿಲ್ ಇಂಡಿಯಾ ಲಿಮಿಟೆಡ್ ಬಾವಿಯಲ್ಲಿ ಬುಧವಾರ ಮತ್ತೆ ಹೊಸದಾಗಿ ಬೆಂಕಿ ಕಾಣಿಸಿಕೊಂಡಿದ್ದು, ಒಂದು ತಿಂಗಳಿನಿಂದ ಹೊತ್ತಿ ಉರಿಯುತ್ತಿದೆ. ಬೆಂಕಿಯನ್ನು ನಂದಿಸುವ ಕಾರ್ಯದಲ್ಲಿ ನಿರತವಾಗಿದ್ದ ಮೂವರು ವಿದೇಶಿ ತಜ್ಞರು ಗಾಯಗೊಂಡಿದ್ದಾರೆ. ಗಾಯಗೊಂಡ ತಂತ್ರಜ್ಞರನ್ನು ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು ಒಐಎಲ್ ಮೂಲಗಳು ತಿಳಿಸಿವೆ. ಇಡೀ ಪ್ರದೇಶವನ್ನು ಅಗ್ನಿಶಾಮಕ ಸಿಬ್ಬಂದಿ ಸುತ್ತುವರಿದಿದ್ದಾರೆ.
ಗುವಾಹಟಿಯಿಂದ 500 ಕಿ.ಮೀ ದೂರದಲ್ಲಿರುವ ಬಾಘ್ಜನ್ ತಿನಸುಕಿಯಾದಲ್ಲಿನ ತೈಲ ಬಾವಿ ಮೇ 27ರಂದು ಸ್ಫೋಟಗೊಂಡು ಅನಿಲ ಸೋರಿಕೆಯಾಗಿತ್ತು. ಈ ಪ್ರದೇಶದಲ್ಲಿರುವ ಬೆಳೆಗಳು ಮತ್ತು ಜೀವವೈವಿಧ್ಯತೆಗೆ ಹಾನಿಯುಂಟು ಮಾಡುತ್ತಿದೆ.
-
#WATCH: Water being sprayed at well no.5 of Oil India in Baghjan, Tinsukia as part of the operations to douse fire at the location.
— ANI (@ANI) July 22, 2020 " class="align-text-top noRightClick twitterSection" data="
An explosion occurred near the well today, while the operation was underway. Three foreign experts present at the site injured & taken to hospital pic.twitter.com/u07jFADoW7
">#WATCH: Water being sprayed at well no.5 of Oil India in Baghjan, Tinsukia as part of the operations to douse fire at the location.
— ANI (@ANI) July 22, 2020
An explosion occurred near the well today, while the operation was underway. Three foreign experts present at the site injured & taken to hospital pic.twitter.com/u07jFADoW7#WATCH: Water being sprayed at well no.5 of Oil India in Baghjan, Tinsukia as part of the operations to douse fire at the location.
— ANI (@ANI) July 22, 2020
An explosion occurred near the well today, while the operation was underway. Three foreign experts present at the site injured & taken to hospital pic.twitter.com/u07jFADoW7
ತೆರವು ಕಾರ್ಯಾಚರಣೆ ನಡೆಯುತ್ತಿರುವಾಗ ಕಳೆದ ತಿಂಗಳು ಬಾವಿಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಈಗಲು ಹೊತ್ತಿ ಉರಿಯುತ್ತಿದೆ. ಆಯಿಲ್ ಇಂಡಿಯಾ ಲಿಮಿಟೆಡ್‌ನ ಇಬ್ಬರು ಅಗ್ನಿಶಾಮಕ ದಳದವರು ಕಳೆದ ತಿಂಗಳು ಗದ್ದೆಯಲ್ಲಿ ಮೃತಪಟ್ಟಿದ್ದಾರೆ. ಬೆಂಕಿ ತೀವ್ರತೆ ಎಷ್ಟಿದೆಯಂದರೇ 10 ಕಿ.ಮೀ ದೂರದಿಂದ ಹೊತ್ತಿ ಉರಿಯುತ್ತಿರವುದನ್ನು ನೋಡಬಹುದು.
ಕೊಳವೆ ಬಾವಿಯ 1.5 ಕಿ.ಮೀ ವ್ಯಾಪ್ತಿಯಲ್ಲಿ ವಾಸಿಸುವ ಸಾವಿರಾರು ಜನರನ್ನು ಸುರಕ್ಷತೆ ಪ್ರದೇಶಕ್ಕೆ ಸ್ಥಳಾಂತರಿಸಲಾಗಿದೆ. ಸ್ಥಳಾಂತರಗೊಂಡ ನಿವಾಸಿಗಳಿಗೆ ಕಂಪನಿಯು ತಲಾ 30,000 ರೂ. ಪರಿಹಾರ ನೀಡಿದೆ.
ತೈಲ ಬಾವಿಯಿಂದ ದಿಬ್ರು-ಸೈಖೋವಾ ರಾಷ್ಟ್ರೀಯ ಉದ್ಯಾನ ಕೇವಲ 3 ಕಿ.ಮೀ ದೂರದಲ್ಲಿದೆ. ಅಳಿವಿನಂಚಿನಲ್ಲಿರುವ ಗಂಗೆಟಿಕ್ ಡಾಲ್ಫಿನ್‌ಗಳ ಶವ ಮತ್ತು ಇತರ ಜಲಚರಗಳ ಚಿತ್ರಗಳನ್ನು ಸ್ಥಳೀಯರು ಕಳೆದ ತಿಂಗಳು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು.