ಕಾಜಿರಂಗ (ಅಸ್ಸೋಂ ): ಭಾರಿ ಪ್ರವಾಹದಿಂದ ಕಾಜಿರಂಗ ರಾಷ್ಟ್ರೀಯ ಉದ್ಯಾನದಲ್ಲಿ 100 ಕ್ಕೂ ಹೆಚ್ಚು ಪ್ರಾಣಿಗಳು ತಮ್ಮ ಜೀವ ಕಳೆದುಕೊಂಡಿವೆ.
ಈ ನಡುವೆ ಉದ್ಯಾನ ನಿರ್ವಹಣಾ ಅಧಿಕಾರಿಗಳು ಹಾಗೂ ರಕ್ಷಣಾ ತಂಡ ಇಲ್ಲಿನ ಪ್ರಾಣಿಗಳ ರಕ್ಷಣೆಗೆ ಕ್ರಮ ಕೈಗೊಂಡಿದ್ದು, ಸಾವಿನ ಸಂಖ್ಯೆ ಏರಿಕೆ ಆಗದಂತೆ ತಡೆಯುತ್ತಿವೆ. ಹಲವು ಪ್ರಾಣಿಗಳನ್ನ ರಕ್ಷಿಸಲಾಗಿದೆ.
ಒಂದು ಕೊಂಬಿನ ಖಡ್ಗಮೃಗ ಸೇರಿದಂತೆ 32 ಪ್ರಾಣಿಗಳಿಗೆ ಚಿಕಿತ್ಸೆ ನೀಡಿ ಅವುಗಳ ಆರೋಗ್ಯ ನೋಡಿಕೊಳ್ಳಲಾಗುತ್ತಿದೆ. ಚಿಕಿತ್ಸೆ ಬಳಿಕ ಚೇತರಿಸಿಕೊಂಡ ಪ್ರಾಣಿಗಳನ್ನ ಸುರಕ್ಷಿತ ಪ್ರದೇಶಕ್ಕೆ ಬಿಡಲಾಗುತ್ತಿದೆ.