ದಿಬ್ರೂಗಢ (ಅಸ್ಸೋಂ): ಅಸ್ಸೋಂನಲ್ಲಿ ಪ್ರತಿವರ್ಷದಿಂದ ಈ ವರ್ಷವೂ ಭಾರಿ ಮಳೆ ಸುರಿಯುತ್ತಿದೆ. ಪರಿಣಾಮ ಬ್ರಹ್ಮಪುತ್ರಾ ನದಿ ತುಂಬಿ ಹರಿಯುತ್ತಿದೆ.
ಅಷ್ಟೇ ಅಲ್ಲ 16 ಜಿಲ್ಲೆಗಳಲ್ಲಿ ಭಾರಿ ಪ್ರವಾಹಕ್ಕೆ ಕಾರಣವಾಗಿದೆ. ಪರಿಣಾಮ ಸುಮಾರು 25 ಸಾವಿರ ಮಂದಿ ಸಂಕಷ್ಟಕ್ಕೆ ಸಿಲುಕಿದ್ದಾರೆ.
ದಿಬ್ರೂಗಢದಲ್ಲಿ ನಿತ್ಯವೂ ಬ್ರಹ್ಮಪುತ್ರ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಪರಿಣಾಮ ಬ್ರಹ್ಮಪುತ್ರಾ ನದಿ ತಟದಲ್ಲಿರುವ ಗ್ರಾಮಗಳ ಸ್ಥಳಾಂತರಕ್ಕೆ ಕ್ರಮ ಕೈಗೊಳ್ಳಲಾಗಿದೆ.
ಜಿಲ್ಲೆಯಲ್ಲಿ 14 ಕಡೆ ಗಂಜಿ ಕೇಂದ್ರಗಳನ್ನ ತೆರೆಯಲಾಗಿದೆ ಎಂದು ಅಲ್ಲಿನ ಡಿಸಿ ಪಲ್ಲವ್ ಕುಮಾರ್ ಜಾ ತಿಳಿಸಿದ್ದಾರೆ. ರಸ್ತೆಗಳು, ಸೇತುವೆಗಳು ಹಾಗೂ ಮನೆಗಳು ನಾಶವಾಗಿವೆ.
ರಾಜ್ಯಾದ್ಯಂತ ಸುಮಾರು 142 ಗಂಜಿ ಕೇಂದ್ರಗಳನ್ನ ಸ್ಥಾಪನೆ ಮಾಡಲಾಗಿದೆ. 18 ಸಾವಿರ ಮಂದಿಗೆ ಈ ಕೇಂದ್ರಗಳಲ್ಲಿ ವಸತಿ ಕಲ್ಪಿಸಲಾಗಿದೆ.