ಟಿನ್ಸುಕಿಯಾ (ಅಸ್ಸೋಂ): ಆಯಿಲ್ ಇಂಡಿಯಾ ಲಿಮಿಟೆಡ್‌ನ ಗ್ಯಾಸ್ ಚೇಂಬರ್ನಲ್ಲಿ ಬೆಂಕಿ ಉಲ್ಬಣಿಸಿದ್ದ ಹಿನ್ನೆಲೆ, ಸ್ಥಳಕ್ಕೆ ಅಸ್ಸೋಂ ರಾಜ್ಯದ ಹಣಕಾಸು ಸಚಿವ ಚಂದ್ರ ಮೋಹನ್ ಪಟೋವರಿ ಭೇಟಿ ನೀಡಿದ್ದಾರೆ.
ಆಯಿಲ್ ಇಂಡಿಯಾ ಲಿಮಿಟೆಡ್‌ನ ಗ್ಯಾಸ್ ಚೇಂಬರ್ನ ಅಗ್ನಿ ಅವಘಡದಿಂದಾಗಿ 7,000 ಜನರು ಗಾಯದೊಂಡಿದ್ದು, ಈ ಎಲ್ಲರಿಗೂ ಪರಿಹಾರ ನೀಡಲಾಗುವುದು ಎಂದು ಸಚಿವರು ಇದೇ ವೇಳೆ ಭರವಸೆ ನೀಡಿದ್ದಾರೆ.
ಇನ್ನು ಆಯಿಲ್ ಇಂಡಿಯಾ ಲಿಮಿಟೆಡ್ ಅಧಿಕಾರಿಗಳು ಸೇರಿದಂತೆ ಜಿಲ್ಲಾಡಳಿತದೊಂದಿಗೆ ಸಭೆ ನಡೆಸಿದ್ದೇನೆ. ಈ ದುರಂತದಿಂದ ಬಾಧಿತರಾದ 7000 ಜನರಿಗೆ ಪರಿಹಾರ ನೀಡುವ ಬಗ್ಗೆ ಚರ್ಚೆ ನಡೆಸಿದ್ದು, ಅತೀ ಶೀಘ್ರದಲ್ಲೇ ಪರಿಹಾರ ನೀಡಲಾಗುವುದು ಎಂದು ಪಟೋವರಿ ಹೇಳಿದರು.
ಕಳೆದ 15 ದಿನಗಳಿಂದ ಅನಿಯಂತ್ರಿತವಾಗಿ ಅನಿಲ ಸೋರಿಕೆಯಾಗಿರುವುದು ಬೆಂಕಿ ಅವಘಡಕ್ಕೆ ಕಾರಣವಾಗಿದೆ ಎಂದು ತಿಳಿದುಬಂದಿದೆ. ಇನ್ನು ಬೆಂಕಿ ನಂದಿಸುವ ವೇಳೆ ಇಬ್ಬರು ಅಗ್ನಿಶಾಮಕ ದಳದ ಸಿಬ್ಬಂದಿ ಸಾವನ್ನಪ್ಪಿದ್ದಾರೆ.
ಈ ಸ್ಫೋಟದ ನಂತರ, 1,610ಕ್ಕೂ ಹೆಚ್ಚು ಕುಟುಂಬಗಳನ್ನು ಈ ಪ್ರದೇಶದಿಂದ ಸ್ಥಳಾಂತರಿಸಲಾಗಿದ್ದು, ಜಿಲ್ಲೆಯ ನಾಲ್ಕು ಭಾಗಗಳಲ್ಲಿ ಆಶ್ರಯ ನೀಡಲಾಗಿದೆ.