ETV Bharat / bharat

ಚೀನಾ ಔಷಧಿಗಳ ಆಮದು ಸ್ಥಗಿತ; ಫಾರ್ಮಾಸ್ಯೂಟಿಕಲ್ ಕ್ಷೇತ್ರಕ್ಕೆ ಭಾರಿ ಸಂಕಷ್ಟ! - ಚೀನಾ ವಸ್ತುಗಳಿಗೆ ನಿಷೇಧ

ಎಪಿಐಗಳ ತಯಾರಿಕೆಯಲ್ಲಿ ಲಾಭದ ಪ್ರಮಾಣ ಕಡಿಮೆಯಾಗಿರುವುದರಿಂದ ಭಾರತೀಯ ಔಷಧ ಕಂಪನಿಗಳು ಎಪಿಐಗಳನ್ನು ಆಮದು ಮಾಡಿಕೊಂಡು, ಅವುಗಳಿಂದ ನಿರ್ದಿಷ್ಟ ಔಷಧಿಗಳನ್ನು ತಯಾರಿಸಿ ರಫ್ತು ಮಾಡುತ್ತವೆ. ಕೂಲಿ ವೆಚ್ಚ, ಮೂಲಭೂತ ಸೌಕರ್ಯ ಹಾಗೂ ತೆರಿಗೆ ಉಳಿತಾಯ ಈ ಮೂರು ಕಾರಣಗಳಿಂದ ಭಾರತೀಯ ಕಂಪನಿಗಳು ಎಪಿಐಗಳಿಗಾಗಿ ಚೀನಾವನ್ನು ವಿಪರೀತವಾಗಿ ಅವಲಂಬಿಸುವಂತಾಗಿದೆ.

indian pharma industry
indian pharma industry
author img

By

Published : Jul 1, 2020, 7:28 PM IST

ನವದೆಹಲಿ: ಇತ್ತೀಚಿನ ಭಾರತ ಹಾಗೂ ಚೀನಾ ಸಂಘರ್ಷದ ನಂತರ ಎರಡೂ ದೇಶಗಳ ನಡುವಿನ ವಾಣಿಜ್ಯ ಸಂಬಂಧಗಳು ಸಂಪೂರ್ಣವಾಗಿ ಸ್ಥಗಿತವಾಗುವ ಹಂತಕ್ಕೆ ಬರುತ್ತಿವೆ. ಇದರಿಂದ ಭಾರತದ ಔಷಧ ತಯಾರಿಕಾ ಕ್ಷೇತ್ರವು ಅತಿ ಹೆಚ್ಚು ಸಂಕಷ್ಟಕ್ಕೀಡಾಗಲಿದೆ. ಔಷಧಗಳ ತಯಾರಿಕೆಗೆ ಪ್ರಮುಖವಾಗಿ ಬೇಕಾದ ಆ್ಯಕ್ಟಿವ್ ಫಾರ್ಮಾಸ್ಯೂಟಿಕಲ್​ ಇಂಗ್ರಿಡಿಯಂಟ್ಸ್​ಗಳಿಗಾಗಿ (ACTIVE PHARMACEUTICAL INGREDIENT - API) ಭಾರತೀಯ ಕಂಪನಿಗಳು ಚೀನಾವನ್ನೇ ಅವಲಂಬಿಸಿವೆ.

ಚೀನಾದಿಂದ ಪ್ರತಿವರ್ಷ ಭಾರತ 10 ಬಿಲಿಯನ್​ ಡಾಲರ್​ಗಳಷ್ಟು ಮೊತ್ತದ ಎಪಿಐ ಹಾಗೂ ಇತರ ಆರ್ಗ್ಯಾನಿಕ್ ರಾಸಾಯನಿಕಗಳನ್ನು ಆಮದು ಮಾಡಿಕೊಳ್ಳುತ್ತದೆ. ಇದರಲ್ಲಿ 2.5 ಬಿಲಿಯನ್ ಡಾಲರ್​ ಮೊತ್ತದಷ್ಟು ಸಗಟು ಔಷಧಿಗಳೂ ಸೇರಿವೆ ಎಂದು ಹೈಟೊಂಗ್ ಸೆಕ್ಯೂರಿಟೀಸ್ ಹೇಳಿದೆ. ಭಾರತಕ್ಕೆ ಅಗತ್ಯವಿರುವ ಶೇ 70 ರಷ್ಟು ಬಲ್ಕ್​ ಡ್ರಗ್ಸ್​ಗಳು ಚೀನಾದಿಂದಲೇ ಬರುತ್ತಿದ್ದವು ಎಂಬುದು ಗಮನಾರ್ಹ. ಬಲ್ಕ್ ಡ್ರಗ್ಸ್​ ಅಥವಾ ಎಪಿಐ ಎಂದು ಕರೆಯಲಾಗುವ ಈ ರಾಸಾಯನಿಕಗಳು ಔಷಧ ತಯಾರಿಕೆಗೆ ಬೇಕಾಗುವ ಪ್ರಮುಖ ಮೂಲವಸ್ತುಗಳಾಗಿವೆ.

ಲಾಭದ ಪ್ರಮಾಣ ಕಡಿಮೆ!

ಎಪಿಐಗಳ ತಯಾರಿಕೆಯಲ್ಲಿ ಲಾಭದ ಪ್ರಮಾಣ ಕಡಿಮೆಯಾಗಿರುವುದರಿಂದ ಭಾರತೀಯ ಔಷಧ ಕಂಪನಿಗಳು ಎಪಿಐಗಳನ್ನು ಆಮದು ಮಾಡಿಕೊಂಡು, ಅವುಗಳಿಂದ ನಿರ್ದಿಷ್ಟ ಔಷಧಿಗಳನ್ನು ತಯಾರಿಸಿ ರಫ್ತು ಮಾಡುತ್ತವೆ. ಕೂಲಿ ವೆಚ್ಚ, ಮೂಲಭೂತ ಸೌಕರ್ಯ ಹಾಗೂ ತೆರಿಗೆ ಉಳಿತಾಯ ಈ ಮೂರು ಕಾರಣಗಳಿಂದ ಭಾರತೀಯ ಕಂಪನಿಗಳು ಎಪಿಐಗಳಿಗಾಗಿ ಚೀನಾವನ್ನು ವಿಪರೀತವಾಗಿ ಅವಲಂಬಿಸುವಂತಾಗಿದೆ.

ಸ್ಥಳೀಯವಾಗಿ ಎಪಿಐಗಳನ್ನು ತಯಾರಿಸಿ ಉತ್ಪಾದಿಸಲಾದ ಔಷಧಿಗಳ ಬೆಲೆ ಹೆಚ್ಚಾಗುವುದರಿಂದ ಅಂತಾರಾಷ್ಟ್ರೀಯ ರಫ್ತು ಮಾರುಕಟ್ಟೆಯಲ್ಲಿ ಪೈಪೋಟಿ ನೀಡಲು ಸಾಧ್ಯವಿಲ್ಲ ಎಂಬುದು ಔಷಧ ಕಂಪನಿಗಳ ವಾದವಾಗಿದೆ. ಒಟ್ಟಾರೆಯಾಗಿ ಚೀನಾ ಎಪಿಐಗಳು ಸ್ಥಳೀಯ ಎಪಿಐಗಳಿಗಿಂತ ಶೇ 30 ರಷ್ಟು ಅಗ್ಗ ದರದಲ್ಲಿ ಸಿಗುತ್ತಿವೆ.

ಬಂದರುಗಳಲ್ಲೇ ಸಿಲುಕಿರುವ ಚೀನಾ ಎಪಿಐ ಸರಕು

ಚೀನಾದಿಂದ ಈಗಾಗಲೇ ಬಂದಿರುವ ಎಪಿಐ ಸರಕುಗಳಿಗೆ ಸಂಬಂಧಿತ ಇಲಾಖೆಗಳು ಕ್ಲಿಯರೆನ್ಸ್​ ನೀಡದ ಕಾರಣ ವಿಮಾನ ನಿಲ್ದಾಣ ಹಾಗೂ ಬಂದರುಗಳಲ್ಲೇ ಅವು ಸಿಕ್ಕಿ ಬಿದ್ದಿವೆ. ಅನೇಕ ದಿನಗಳ ಕಾಲ ಈ ಸರಕುಗಳು ಅಲ್ಲೇ ಬೀಳುವುದರಿಂದ ಅವುಗಳ ಗುಣಮಟ್ಟ ಹಾಳಾಗುತ್ತಿದೆ ಎಂದು ಆಮದು ಮಾಡಿಕೊಂಡ ಕಂಪನಿಗಳು ಚಿಂತೆ ಮಾಡುವಂತಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.